More

    ದೇವದಾಸಿಯರಿಗೆ ಸೂಕ್ತ ರೀತಿಯಲ್ಲಿ ಸೌಲಭ್ಯ ಒದಗಿಸಿ

    ಕೂಡ್ಲಿಗಿ: ಅನಿಷ್ಟ ಪದ್ದತಿ ಹಾಗೂ ಸಮಾಜದ ತುಳಿತಕ್ಕೆ ಒಳಗಾದ ಮಹಿಳೆಯರಿಗೆ ಪುನರ್ವಸತಿ ಕಲ್ಪಿಸುವ ಮೂಲಕ ಮುಖ್ಯವಾಹಿನಿಗೆ ತರಬೇಕೆಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದರು.

    ಇದನ್ನೂ ಓದಿ: ಕಾರ್ಮಿಕ ಇಲಾಖೆಯ ಎಲ್ಲ ಸೌಲಭ್ಯ ಪಡೆಯಿರಿ

    ಪಟ್ಟಣದ ಅಂಬೇಡ್ಕರ್ ಕಾಲನಿಯಲ್ಲಿ ವಿಮುಕ್ತ ದೇವದಾಸಿಯರ ಸಮ್ಮುಖದಲ್ಲಿ ಹೊಸ ವರ್ಷವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿ ಸೋಮವಾರ ಮಾತನಾಡಿದರು.

    ಬಡತನದಿಂದ ಅನಿಷ್ಟ ಪದ್ದತಿಗಳಿಗೆ ಒಳಗಾದ ಮಹಿಳೆಯರು ಸಮಾಜದಲ್ಲಿ ಗೌರವದಿಂದ ಬಾಳಬೇಕಿದೆ. ಸರ್ಕಾರ ಆ ನಿಟ್ಟಿನಲ್ಲಿ ಹಲವು ಸೌಲಭ್ಯಗಳನ್ನು ಕಲ್ಪಿಸಿದೆ ಅವುಗಳನ್ನ ಸೂಕ್ತ ರೀತಿಯಲ್ಲಿ ನೀಡಿ ಇವರನ್ನ ಸುಶಿಕ್ಷಿತರನ್ನಾಗಿ ಮಾಡುವುದು ನಮ್ಮ ಆದ್ಯ ಕರ್ತವ್ಯ ಎಂದರು.

    ಡಿಎಎಸ್ ಮುಖಂಡ ರಾಘವೇಂದ್ರ ಸಾಲುಮನಿ ಮಾತನಾಡಿ, 2006ರಲ್ಲಿ ಸರ್ಕಾರ ದೇವದಾಸಿಯರ ಸರ್ವೆ ಪಟ್ಟಿಯಲ್ಲಿ ಈ ಕಾಲನಿಯ ಸುಮಾರು 40 ಜನರನ್ನು ಪಟ್ಟಿಯಿಂದ ಕೈಬಿಟ್ಟಿದ್ದು. ಇವರಿಗೆ ಸರ್ಕಾರದ ಯಾವುದೇ ಸವಲತ್ತುಗಳು ದಕ್ಕುತ್ತಿಲ್ಲ. ಎಲ್ಲರನ್ನೂ ಪಟ್ಟಿಯಲ್ಲಿ ಸೇರಿಸಿ ಮತ್ತು ಸರ್ಕಾರದ ಸೌಲಭ್ಯ ನೀಡುವಂತೆ ಮನವಿ ಮಾಡಿದರು.

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಗುರುಸಿದ್ದನ ಗೌಡ, ನಾಗಮಣಿ ಜಿಂಕಾಲ್, ಪಪಂ ಸದಸ್ಯ ಕಾವಲಿ ಶಿವಪ್ಪನಾಯಕ, ಪೌರಕಾರ್ಮಿಕ ರಾಜ್ಯಾಧ್ಯಕ್ಷ ಪ್ರಭಾಕರ, ಜಿ.ಎಂ.ಬಸಣ್ಣ, ಮಾಜಿ ಸೈನಿಕ ಎಚ್.ರಮೇಶ, ಸಂತೋಷ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts