More

    ಆಸ್ತಿವಿವಾದಕ್ಕೆ ಗೊಣಕನಹಳ್ಳಿಯಲ್ಲಿ ಟೊಮ್ಯಾಟೊ ಬೆಳೆ ನಾಶ

    ಸೂಲಿಬೆಲೆ: ಜಡಿಗೇನಹಳ್ಳಿ ಹೋಬಳಿ ಗೊಣಕನಹಳ್ಳಿಯಲ್ಲಿ ಜಮೀನು ವಿವಾದಕ್ಕೆ ಟೊಮ್ಯಾಟೊ ಬೆಳೆಯನ್ನು ನಾಶ ಮಾಡಲಾಗಿದೆ. ಗ್ರಾಮದ ರೈತ ಹುಸೇನ್ ಸಾಬ್, 36 ಗುಂಟೆ ಜಮೀನಿನಲ್ಲಿ ಟೊಮ್ಯಾಟೊ ಬೆಳೆದಿದ್ದರು. ಅವರ ತಮ್ಮಮೆಹಬೂಬ್ ಆಸ್ತಿಯಲ್ಲಿ ಪಾಲು ಬರಬೇಕು ಎಂದು ಜಗಳ ತೆಗೆದು, ಯುವಕರನ್ನು ಕರೆತಂದು ಬೆಳೆ ನಾಶಪಡಿಸಿದ್ದಾರೆ ಎನ್ನಲಾಗಿದೆ.

    ಘಟನೆ ಕುರಿತು ಹೊಸಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ಆರೋಪಿಗಳನ್ನು ಬಿಟ್ಟ ಪೊಲೀಸರು: ಬೆಳೆ ನಾಶ ಮಾಡಲು ಬಂದಿದ್ದ ತಂಡದಲ್ಲಿದ್ದ ಇಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರೂ ರಾಜಕೀಯ ಒತ್ತಡಕ್ಕೆ ಮಣಿದು ಆರೋಪಿಗಳನ್ನು ಪೊಲೀಸರೇ ಬಿಟ್ಟಿದ್ದಾರೆ ಎಂದು ಕುಟುಂಬಸ್ಥರು ದೂರಿದ್ದಾರೆ.

    ಪಿತ್ರಾರ್ಜಿತ ಆಸ್ತಿಯಲ್ಲಿ ತಮ್ಮನಿಗೆ ಸಿಗಬೇಕಾದ 12 ಗುಂಟೆ ಜಮೀನು ನೀಡಲಾಗಿದೆ. 36 ಗುಂಟೆ ನಾನು ಖರೀದಿ ಮಾಡಿದ್ದು, ಈ ಜಾಗಕ್ಕೂ ನನ್ನ ತಮ್ಮನಿಗೂ ಸಂಬಂಧವಿಲ್ಲ. ಆದರೂ ವಿನಾಕಾರಣ ಕಿರಿಕಿರಿ ಮಾಡುತ್ತಿರುವುದಲ್ಲದೆ, ಬೆಳೆ ನಾಶ ಮಾಡಿದ್ದಾನೆ. ಆಸ್ತಿಯಲ್ಲಿ ಪಾಲು ಬರಬೇಕಿದ್ದರೆ ಕಾನೂನು ಹೋರಾಟ ಮಾಡಬೇಕು. ಬೆಳೆ ನಾಶಮಾಡಿ ಸಂಕಷ್ಟಕ್ಕೆ ಸಿಲುಕಿಸುವುದು ಸೂಕ್ತವಲ್ಲ.
    ಹುಸೇನ್ ಸಾಬ್
    ಬೆಳೆ ನಷ್ಟಕ್ಕೊಳಗಾದ ರೈತ ಗೊಣಕನಹಳ್ಳಿ

    ಬೆಳೆ ನಾಶ ಮಾಡುವ ವೇಳೆ ಸಿಕ್ಕಿ ಬಿದ್ದ ಇಬ್ಬರು ಆರೋಪಿಗಳು ತಪ್ಪಿಸಿಕೊಂಡಿದ್ದಾರೆ. ಬೆಳೆ ನಾಶಪಡಿಸಿದ ಬಗ್ಗೆ ದೂರು ದಾಖಲು ಮಾಡಿಕೊಂಡಿದ್ದು, ಆರೋಪಿಗಳ ಬಂಧಿಸಿ ಕಾನೂನು ರೀತಿ ಕ್ರಮ ಜರುಗಿಸಲಾಗುವುದು.
    ಸಿ.ಎಂ.ರಾಜು
    ಪಿಎಸ್‌ಐ, ಹೊಸಕೋಟೆ ಠಾಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts