More

    ಸೂರಣಗಿ-ಬೆಳ್ಳಟ್ಟಿ ರಸ್ತೆಯಲ್ಲಿ ಸಂಚಾರಕ್ಕೆ ಸಂಕಷ್ಟ

    ಲಕ್ಷ್ಮೇಶ್ವರ: ಕಲ್ಮಲಾ-ಶಿಗ್ಗಾಂವಿ ರಾಜ್ಯ ಹೆದ್ದಾರಿಯು ತಾಲೂಕಿನ ಸೂರಣಗಿ ಗ್ರಾಮದಿಂದ ಬೆಳ್ಳಟ್ಟಿ ಗ್ರಾಮದವರೆಗೆ ಸಂಪೂರ್ಣ ಹದಗೆಟ್ಟಿದೆ. ಸಣ್ಣಪುಟ್ಟ ವಾಹನಗಳು, ಚಕ್ಕಡಿಗಳ ಸಂಚಾರಕ್ಕೆ ಸಂಚಕಾರ ಬಂದಿದೆ.

    ಬೆಳ್ಳಟ್ಟಿಯಿಂದ ಲಕ್ಷ್ಮೇಶ್ವರವರೆಗಿನ 34 ಕಿಮೀ ರಸ್ತೆಯನ್ನು 3 ವರ್ಷಗಳ ಹಿಂದೆ 55 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಲಾಯಿತು. ಆದರೆ, ಕಳಪೆ ಕಾಮಗಾರಿ, ನಿಯಮ ಮೀರಿ ಮರಳು, ಎಂ ಸ್ಯಾಂಡ್, ಕಲ್ಲಿನ ಪುಡಿ ಸಾಗಿಸುವ ವಾಹನಗಳ ದಟ್ಟಣೆಯಿಂದ ರಸ್ತೆಯ ಡಾಂಬರ್ ಕಿತ್ತು ಹೋಗಿ ಗುಂಡಿಗಳು ಉಂಟಾಗಿವೆ. ಕಲ್ಲುಗಳು ಮೇಲೆದ್ದಿವೆ. ಇದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ.

    ರಸ್ತೆ ಹಾಳಾಗಿದ್ದರಿಂದ ರಾತ್ರಿ ಹೊತ್ತು ಭಯದಲ್ಲೇ ವಾಹನ ಚಾಲನೆ ಮಾಡುವಂತಾಗಿದೆ. ಇಷ್ಟಾದರೂ ಸಂಬಂಧಪಟ್ಟವರು ಯಾರೂ ಇತ್ತ ಗಮನ ಹರಿಸುತ್ತಿಲ್ಲ. ತಾತ್ಕಾಲಿಕವಾಗಿ ಗುಂಡಿ ಮುಚ್ಚಿ, ಡಾಂಬರೀಕರಣ ಮಾಡಬೇಕು ಎಂದು ತಾಲೂಕಿನ ಸೂರಣಗಿ ಗ್ರಾಮದ ತಾಪಂ ಮಾಜಿ ಸದಸ್ಯ ಕೋಟೆಪ್ಪ ವರ್ದಿ, ಪುರಸಭೆ ಉಪಾಧ್ಯಕ್ಷ ರಾಮು ಗಡದವರ ಆಗ್ರಹಿಸಿದ್ದಾರೆ.

    ಲಕ್ಷೆ್ಮೕಶ್ವರ ತಾಲೂಕಿನಲ್ಲಿ ಹದಗೆಟ್ಟ ಬಹುತೇಕ ರಸ್ತೆಗಳ ದುರಸ್ತಿಗಾಗಿ ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಅನುದಾನ ಮಂಜೂರಾದ ತಕ್ಷಣ ರಸ್ತೆ ದುರಸ್ತಿ ಮಾಡಿಸಲಾಗುವುದು. ಸಂಚಾರಕ್ಕೆ ತೊಂದರೆಯಾಗದಂತೆ ತಾತ್ಕಾಲಿಕವಾಗಿ ಕ್ರಮ ಕೈಗೊಳ್ಳಲಾಗುವುದು.

    | ನರೇಂದ್ರ ಡಿ.ಬಿ., ಪಿಡಬ್ಲ್ಯುಡಿ ಕಾರ್ಯನಿರ್ವಾಹಕ ಇಂಜಿನಿಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts