More

    ಡೆಪ್ಯೂಟಿ ಚನ್ನಬಸಪ್ಪನವರ ಕೊಡುಗೆ ಅಪಾರ

    ಮುಂಡರಗಿ: ಕರ್ನಾಟಕದ ಏಕೀಕರಣದ ಹೋರಾಟದಲ್ಲಿ ಡೆಪ್ಯೂಟಿ ಚನ್ನಬಸಪ್ಪನವರ ಕೊಡುಗೆ ಅಪಾರ. ಕನ್ನಡ ಭಾಷೆ, ಶಿಕ್ಷಣ, ಸಾಹಿತ್ಯ ಮತ್ತು ಸಂಸ್ಕೃತಿ ಉಳಿಸಿ ಬೆಳೆಸುವ ಮಹಾಕಾರ್ಯಕ್ಕೆ ನಾಂದಿ ಹಾಡಿದವರು. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಅನೇಕ ತ್ಯಾಗ ಮಾಡಿದ ವ್ಯಕ್ತಿ ಎಂದು ಸ್ಥಳೀಯ ಕ.ರಾ. ಬೆಲ್ಲದ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಸಂತೋಷ ಹಿರೇಮಠ ಹೇಳಿದರು.

    ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದ ಕೆ.ಕೆ. ನಂದಿಕೋಲ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಕಸಾಪ ಆಶ್ರಯದಲ್ಲಿ ಇತ್ತೀಚೆಗೆ ಜರುಗಿದ ಕರ್ನಾಟಕ ಸಂಭ್ರಮ 50ರ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಕರ್ನಾಟಕ ಏಕೀಕರಣದಲ್ಲಿ ಡೆಪ್ಯೂಟಿ ಚೆನ್ನಬಸಪ್ಪನವರ ಪಾತ್ರ ಪ್ರಮುಖವಾದುದು. ಕನ್ನಡದ ಪುನರುಜ್ಜೀವನ ಕಾರ್ಯದ ಕಾರಣಿಕ ಪುರುಷರಾಗಿದ್ದ ಚನ್ನಬಸಪ್ಪನವರು. ಸ್ವಾತಂತ್ರೃ ಹೋರಾಟ, ಅನ್ಯ ಭಾಷಿಕರ ಹಾವಳಿಯ ಮಧ್ಯೆ ಕನ್ನಡಕ್ಕಾಗಿ ಹೋರಾಟ ಮಾಡಿದ್ದಾರೆ. ಕರ್ನಾಟಕ ಹುಲಿ ಎಂದು ಖ್ಯಾತರಾಗಿದ್ದ ಅವರ ವ್ಯಕ್ತಿತ್ವ ಎಲ್ಲರೂ ಮೆಚ್ಚುವಂಥದ್ದು ಎಂದರು.

    ಕಾರ್ಯಕ್ರಮ ಉದ್ಘಾಟಿಸಿದ ಶಾಲಾ ಸುಧಾರಣಾ ಸಮಿತಿ ಕಾರ್ಯಾಧ್ಯಕ್ಷ ಎಸ್.ಎಂ. ಅಂಕದ ಮಾತನಾಡಿ, ಕಸಾಪದಿಂದ ಗ್ರಾಮ ಮಟ್ಟದಲ್ಲಿ ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಸಾಹಿತ್ಯ ಸೊಗಡನ್ನು ಹಾಗೂ ಕರುನಾಡಿನ ಮಹನೀಯರನ್ನು ಪರಿಚಯಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.

    ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಎಂ.ಜಿ.ಗಚ್ಚಣ್ಣವರ, ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಮಂಜುನಾಥ ಮುಧೋಳ ಮಾತನಾಡಿದರು. ಕಳಕಪ್ಪ ಜಲ್ಲಿಗೇರಿ, ಕೊಟ್ರೇಶ ಜವಳಿ ಸ್ವರಚಿತ ಕವನ ವಾಚಿಸಿದರು. ಮುಖ್ಯಶಿಕ್ಷಕ ಎಂ.ಎಚ್. ನಾಯಕ, ಆರ್.ಎಲ್. ಪೋಲಿಸ್ ಪಾಟೀಲ, ಸಿ.ಡಿ. ಪಾಟೀಲ, ಸುರೇಶ ಭಾವಿಹಳ್ಳಿ, ಕೃಷ್ಣ ಸಾಹುಕಾರ, ಡಾ. ಕುಮಾರ ಜೆ ಇತರರು ಇದ್ದರು. ಶಿಕ್ಷಕ ನಿರ್ವಾಣಿಮಠ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts