More

    ಪೇದೆ ಮೇಲೆ ಹಲ್ಲೆ ಮಾಡಿದವರನ್ನು ಗಡಿಪಾರು ಮಾಡಿ

    ರಾಯಚೂರು: ಅಕ್ರಮ ಮರಳು ಸಾಗಣೆ ಮಾಡುತ್ತಿದ್ದ ಟ್ರಾಕ್ಟರ್ ವಶಪಡಿಸಿಕೊಂಡಿದ್ದಕ್ಕೆ ಪೊಲೀಸ್ ಪೇದೆ ಹಲ್ಲೆ ನಡೆಸಿದ ಶಾಸಕಿ ಕರೆಮ್ಮ ನಾಯಕ ಪುತ್ರ ಸಂತೋಷ ಸೇರಿದಂತೆ ಇನ್ನಿತರರನ್ನು ರೌಡಿಶೀಟರ್ ಪಟ್ಟಿಗೆ ಸೇರಿಸಿ ಗಡಿಪಾರು ಮಾಡುವಂತೆ ಒತ್ತಾಯಿಸಿ ಸ್ಥಳೀಯ ಜಿಲ್ಲಾಕಾರಿ ಕಚೇರಿ ಮುಂದೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
    ನಂತರ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ಶಾಸಕಿ ಕರೆಮ್ಮ ನಾಯಕ ಮಗನ ಕೃತ್ಯವನ್ನು ಖಂಡಿಸುವ ಬದಲು ಪ್ರಕರಣವನ್ನು ಮುಚ್ಚಿ ಹಾಕಲು ಪ್ರತಿಭಟನೆಯ ನಾಟಕ ಆಡುತ್ತಿರುವುದನ್ನು ಬಿಡಬೇಕು ಎಂದು ಒತ್ತಾಯಿಸಿದರು.
    ಶಾಸಕರಾಗಿ ಆಯ್ಕೆಯಾದ ನಂತರದಲ್ಲಿ ಕರೆಮ್ಮ ನಾಯಕ ಅಕ್ರಮ ಮರಳು ದಂಧೆಯನ್ನು ತಡೆಯುವುದಾಗಿ ಹೇಳಿದ್ದರು. ಆದರೆ ಅವರೇ ಅಕ್ರಮ ಮರಳು ದಂಧೆಯಲ್ಲಿ ಪಾಲ್ಗೊಂಡಿರುವುದು ಸರಿಯಲ್ಲ. ತಪ್ಪು ಮಾಡಿದವರು ಯಾರೇ ಆಗಿದ್ದರೂ ಅವರ ವಿರುದ್ಧ ಕ್ರಮಕ್ಕೆ ಶಾಸಕರು ಬೆಂಬಲಿಸಬೇಕು.
    ಜಿಲ್ಲಾಕಾರಿಗಳು ಕೂಡಲೇ ಪೇದೆ ಮೇಲೆ ಹಲ್ಲೆ ನಡೆಸಿದ ಸಂತೋಷ, ಶಾಸಕಿ ಆಪ್ತ ಕಾರ್ಯದರ್ಶಿ ಇಲಿಯಾಸ್ ಸೇರಿದಂತೆ ಇನ್ನಿತರ ಬಂಸಿ ಗಡಿಪಾರು ಮಾಡಬೇಕು. ದೇವದುರ್ಗ ತಾಲೂಕಿನಲ್ಲಿ ಅಕ್ರಮ ಮರಳು ಸಾಗಣೆ ತಡೆಗೆ ಕಠಿಣ ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
    ಪ್ರತಿಭಟನೆಯಲ್ಲಿ ವೇದಿಕೆ ಜಿಲ್ಲಾಧ್ಯಕ್ಷ ಅಶೋಕಕುಮಾರ ಜೈನ್, ಪದಾಕಾರಿಗಳು ಅಂಬಾಜಿ, ನರಸಿಂಹಲು, ಸಾದಿಕ್ ಖಾನ್, ಕೆ.ಗೋವಿಂದರಾಜ್, ಆಸ್ೀ, ಅಜೀಜ್, ಯಶೋಧರ ರೆಡ್ಡಿ, ನಾಸೀರ್ ಹೊಸೂರ, ಮಹ್ಮದ ಇಶಾಕ್, ಇರ್ಷಾದ್ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts