More

    ರಸಗೊಬ್ಬರ ಬಳಕೆಯಿಂದ ಮಣ್ಣಿನ ಸತ್ವ ಕ್ಷೀಣ: ಕೃಷಿ ವಿವಿ ಕುಲಪತಿ ಡಾ. ಎಸ್.ವಿ.ಸುರೇಶ್ ಹೇಳಿಕೆ

    ಬೆಂಗಳೂರು: ಹೆಚ್ಚು ಇಳುವರಿ ಪಡೆಯುವ ಭರದಲ್ಲಿ ರಸಗೊಬ್ಬರ ಬಳಕೆಯಿಂದಾಗಿ ಮಣ್ಣಿನ ಸತ್ವ ಕ್ಷೀಣಿಸುವ ಸಾಧ್ಯತೆ ಅಧಿಕವಾಗಿರುತ್ತದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ವಿ.ಸುರೇಶ್ ಅಭಿಪ್ರಾಯಪಟ್ಟಿದ್ದಾರೆ.

    ಕೃಷಿ ವಿವಿಯ ಸಿಬ್ಬಂದಿ ತರಬೇತಿ ಘಟಕ ಹಾಗೂ ಹೈದರಾಬಾದ್‌ನ ವಿಸ್ತರಣಾ ಶಿಕ್ಷಣ ಸಂಸ್ಥೆ ಜಂಟಿಯಾಗಿ ಆಯೋಜಿಸಿದ್ದ ‘ಸುಸ್ಥಿರ ಕೃಷಿಗಾಗಿ ನೈಸರ್ಗಿಕ ಕೃಷಿ’ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಹಸಿರು ಕ್ರಾಂತಿಯಿಂದಾಗಿ ದೇಶವು ಆಹಾರದಲ್ಲಿ ಸ್ವಾವಲಂಬನೆ ಸಾಧಿಸುವಂತಾಯಿತು. ಹೆಚ್ಚು ಇಳುವರಿ ನೀಡುವ ಸುಧಾರಿತ ತಳಿಗಳು, ನೀರಾವರಿ ಹಾಗೂ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ವಿವಿಧ ಬೆಲೆಗಳಲ್ಲಿ ಅಧಿಕ ಇಳುವರಿ ಪಡೆಯಲು ಸಾಧ್ಯವಾಯಿತು. ಆದರೆ, ಅಸರ್ಮಪಕ ನೀರಾವರಿ ಹಾಗೂ ರಸಗೊಬ್ಬರಗಳ ಬಳಕೆಯಿಂದ ಮಣ್ಣಿನ ಗುಣಧರ್ಮ ಕ್ಷೀಣಿಸುವಿಕೆಗೆ ಅವಕಾಶವಾಗಿದೆ. ಜತೆಗೆ ರೈತರು ಬಂಡವಾಳವನ್ನು ತೊಡಗಿಸಿ ಹೊರಮೂಲಗಳಿಂದ ಕೃಷಿ ಪರಿಕರಗಳನ್ನು ಖರೀದಿಸಿ ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗದೆ ಆತ್ಮಹತ್ಯೆಗೆ ಶರಣಾಗುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ವಿಶ್ಲೇಷಿಸಿದರು.

    ಈ ಸಮಸ್ಯೆಯನ್ನು ನಿವಾರಿಸಲು ಸಾವಯವ ಹಾಗೂ ನೈಸರ್ಗಿಕ ಪದಾರ್ಥಗಳಿಗೆ ಅಧಿಕ ಬೆಲೆ ಸಿಗುವುದು ಅವಶ್ಯಕವಾಗಿದೆ. ಬೆಳೆಯುತ್ತಿರುವ ಜನಸಂಖ್ಯೆಗೆ ಆಹಾರ ಒದಗಿಸುವುದನ್ನು ಗಮನದಲ್ಲಿರಿ ಸುಸ್ಥಿರ ಕೃಷಿಗಾಗಿ ನೈಸರ್ಗಿಕ ಕೃಷಿಯನ್ನು ಹಂತ-ಹಂತವಾಗಿ ಕೈಗೊಳ್ಳುವುದು ಉತ್ತಮ ನಡೆಯಾದೀತು ಎಂದು ಸಲಹೆ ನೀಡಿದರು.

    ಹೈದರಾಬಾದಿನ ವಿಸ್ತರಣಾ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕ ಡಾ. ಕೆ.ಮಧುಬಾಬು ಮಾತನಾಡಿ, ಕೌಶಲ ಆಧಾರಿತ ತರಬೇತಿ ಕಾರ್ಯಕ್ರಮದಿಂದ ಅಧಿಕಾರಿಗಳಿಗೆ ಕೃಷಿಯಲ್ಲಿ ಹೊಸ ಸಂಶೋಧನೆಗಳನ್ನು ಮನದಟ್ಟು ಮಾಡಿಕೊಳ್ಳಲು ಸಹಾಯವಾಗುತ್ತದೆ. ಜತೆಗೆ ಸಂಶೋಧನಾ ಲಗಳನ್ನು ಸಕಾಲದಲ್ಲಿ ರೈತರಿಗೆ ತಲುಪಿಸಲು ಸಹಕಾರಿಯಾಗುತ್ತದೆ ಎಂದರು.

    ಕಾರ್ಯಕ್ರಮದಲ್ಲಿ ಕೃಷಿ ವಿವಿಯ ವಿಸ್ತರಣಾ ನಿರ್ದೇಶಕ ಡಾ. ವಿ.ಎಲ್.ಮಧುಪ್ರಸಾದ್, ಕಾರ್ಯಕ್ರಮ ಸಂಯೋಜಕರಾದ ಡಾ. ಎನ್.ಪ್ರವೀಣ್, ಡಾ. ಕೆ.ಶಿವರಾಮು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts