More

    ಡಿಸಿಇಟಿಗೆ 8 ಹೊಸ ಕೋರ್ಸ್ ಸೇರ್ಪಡೆಗೊಳಿಸಿದ ತಾಂತ್ರಿಕ ಶಿಕ್ಷಣ ಇಲಾಖೆ, ಯಾವೆಲ್ಲಾ ಕೋರ್ಸ್‌ಗಳಿವೆ?

    ಬೆಂಗಳೂರು ತಾಂತ್ರಿಕ ಶಿಕ್ಷಣ ಇಲಾಖೆಯು ಈ ವರ್ಷದಿಂದ ಡಿಪ್ಲೊಮೊದಲ್ಲಿ ಮುಂದುವರಿದ ತಂತ್ರಜ್ಞಾನ ಆಧಾರಿತ 8 ಹೊಸ ಕೋರ್ಸ್‌ಗಳನ್ನು ಆರಂಭಿಸುತ್ತಿದೆ.

    ಈ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕರು ಡಿಪ್ಲೊಮೊ ಸಿಇಟಿಯಲ್ಲಿ ಈ ಕೋರ್ಸ್‌ಗಳನ್ನು ಸೇರ್ಪಡೆ ಮಾಡುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಪತ್ರ ಬರದು ನಿರ್ದೇಶನ ನೀಡಿದ್ದಾರೆ.

    2021-22ನೇ ಸಾಲಿನಿಂದ ಪ್ರಾರಂಭವಾದ ಹೊಸ ಡಿಪ್ಲೊಮೊ ಕೋರ್ಸ್‌ಗಳಿಗೆ ಪ್ರವೇಶಾತಿ ಪಡೆದು 3 ವರ್ಷಗಳ ಡಿಪ್ಲೊಮೊ ಪೂರ್ಣಗೊಳಿಸಿದ ಅಭ್ಯರ್ಥಿಗಳು 2024-25ನೇ ಸಾಲಿನಿಂದ ಲ್ಯಾಟರಲ್ ಎಂಟ್ರಿ ಮೂಲಕ 2ನೇ ವರ್ಷ/3ನೇ ಸೆಮಿಸ್ಟರ್ ಇಂಜಿನಿಯರಿಂಗ್ ಕೋರ್ಸ್‌ಗಳಿಗೆ ಪ್ರವೇಶಾತಿ ಪಡೆಯಬಹುದು. ಈ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೊಸ ಡಿಪ್ಲೊಮೊ ಕೋರ್ಸ್‌ಗಳನ್ನು ಆರಂಭಿಸಲಾಗುತ್ತಿದೆ ಎಂದು ತಾಂತ್ರಿಕ ಶಿಕ್ಷಣ ನಿರ್ದೇಶಕರು ತಿಳಿಸಿದ್ದಾರೆ.

    ಯಾವೆಲ್ಲ ಕೋರ್ಸ್‌ಗಳು:

    ಸೈಬರ್ ಫಿಜಿಕಲ್ ಸಿಸ್ಟಂ ಆೃಂಡ್ ಸೆಕ್ಯುರಿಟಿ
    ುಡ್ ಪ್ರೊಸೆಸಿಂಗ್ ಆೃಂಡ್ ಪ್ರೆಸೆರ್ವೇಷನ್
    ಆಟೋಮಷಿನ್ ರಾೃಂಡ್ ರೊಬೊಟಿಕ್ಸ್
    ಗೇಮಿಂಗ್ ಆೃಂಡ್ ಅನಿಮೇಷನ್
    ಕ್ಲೌಂಡ್ ಕಂಪ್ಯೂಟಿಂಗ್ ಆೃಂಡ್ ಬಿಗ್ ಡೇಟಾ
    ಟ್ರಾವೆಲ್ ಆೃಂಡ್ ಟೂರಿಸಂ
    ಆಲ್ಟರ್ನೇಟ್ ಎನರ್ಜಿ ಟೆಕ್ನಾಲಜಿ
    ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಆೃಂಡ್ ಎಲೆಕ್ಟ್ರಿಕಲ್ ವೆಹಿಕಲ್ ಟೆಕ್ನಾಲಜಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts