More

    ಮಲೆನಾಡಿಗೆ ಬಂತು ಕೋವ್ಯಾಕ್ಸಿನ್

    ಶಿವಮೊಗ್ಗ: ಕರೊನಾ ನಿಯಂತ್ರಣಕ್ಕೆ ಮದ್ದಾಗಿರುವ ಬಹುನಿರೀಕ್ಷಿತ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆ ಶುಕ್ರವಾರ ಬಿಗಿ ಭದ್ರತೆಯಲ್ಲಿ ಶಿವಮೊಗ್ಗ ತಲುಪಿದ್ದು ಜ.16ರಂದು ಜಿಲ್ಲೆಯ ಒಂಬತ್ತು ಕೇಂದ್ರಗಳಲ್ಲಿ ಏಕಕಾಲಕ್ಕೆ ಲಸಿಕೆ ವಿತರಣೆಗೆ ಚಾಲನೆ ಸಿಗಲಿದೆ.

    ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ಬೆಳಗ್ಗೆ 10.30ಕ್ಕೆ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆ ವಿತರಣೆಗೆ ಅಧಿಕೃತವಾಗಿ ಚಾಲನೆ ನೀಡುವರು. ನಂತರ ಜಿಲ್ಲಾದ್ಯಂತ ಆರೋಗ್ಯ ಇಲಾಖೆ ಸೇನಾನಿಗಳಿಗೆ ಆದ್ಯತೆ ಮೇರೆಗೆ ಮೊದಲ ಹಂತದಲ್ಲಿ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಈಗಾಗಲೇ ಜಿಲ್ಲಾಡಳಿತದ ಸೂಚನೆಯಂತೆ ಆರೋಗ್ಯ ಇಲಾಖೆ ಮೆಗ್ಗಾನ್ ಆಸ್ಪತ್ರೆ ಸೇರಿ ಒಂಬತ್ತು ಕೇಂದ್ರ ಗುರುತಿಸಿದೆ. ಸಿಬ್ಬಂದಿ ಸೇರಿ ಲಸಿಕೆ ವಿತರಣೆಗೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಎರಡು ಹಂತದಲ್ಲಿ ಪೂರ್ವಾಭ್ಯಾಸವನ್ನೂ ನಡೆಸಿ ಯಶಸ್ವಿಯಾಗಿದೆ.

    ಚಿತ್ರದುರ್ಗ, ಬೆಂಗಳೂರಿಂದ ಲಸಿಕೆ: ಶಿವಮೊಗ್ಗ ಜಿಲ್ಲೆಗೆ ಆರಂಭದಲ್ಲಿ ಬೆಳಗಾವಿಯಿಂದ ಲಸಿಕೆ ಬರಲಿದೆ ಎಂದು ಹೇಳಲಾಗಿತ್ತು. ಆದರೆ ಶುಕ್ರವಾರ ಮಧ್ಯಾಹ್ನ ಚಿತ್ರದುರ್ಗದಿಂದ 45 ಸಾವಿರ ಡೋಸ್ ಕೋವಿಶೀಲ್ಡ್ ಹಾಗೂ ರಾತ್ರಿ ಬೆಂಗಳೂರಿನಿಂದ 2,700 ಡೋಸ್ ಕೋವ್ಯಾಕ್ಸಿನ್ ಲಸಿಕೆಯನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಶಿವಮೊಗ್ಗಕ್ಕೆ ತರಿಸಲಾಯಿತು. ಶನಿವಾರ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೋವ್ಯಾಕ್ಸಿನ್ ಹಾಗೂ ಉಳಿದಂತೆ ಎಂಟೂ ಕೇಂದ್ರಗಳಲ್ಲಿ ಕೋವಿಶೀಲ್ಡ್ ಲಸಿಕೆ ವಿತರಣೆಯಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts