More

    ಎಚ್ಚರ…! ಶುರುವಾಯ್ತು ಡೆಂಘೆ ಹಾವಳಿ: ರಾಜ್ಯದಲ್ಲಿ ಹೆಚ್ಚಿದ ಪ್ರಕರಣಗಳು; 21 ದಿನದಲ್ಲಿ 1,813 ಮಂದಿಗೆ ಸೋಂಕು

    ಬೆಂಗಳೂರು: ಮಳೆಗಾಲ ಆರಂಭವಾಗುತ್ತಿದ್ದಂತೆ ಬೆಂಗಳೂರು ಸೇರಿ ರಾಜ್ಯಾದ್ಯಂತ ಡೆಂಘ ಹಾವಳಿ ಹೆಚ್ಚಾಗುತ್ತಿದೆ. ಕೇವಲ 21 ದಿನಗಳಲ್ಲಿ 1,813 ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ ಬೆಂಗಳೂರು ಒಂದರಲ್ಲೇ 1,330 ಹಾಗೂ ಇತರೆ 30 ಜಿಲ್ಲೆಗಳಿಂದ 483 ಕೇಸ್​ಗಳು ದಾಖಲಾಗಿವೆ.

    ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಜನವರಿಯಿಂದ ಈವರೆಗೂ ಡೆಂಘ ಲಕ್ಷಣಗಳು ಕಂಡುಬಂದ 30,986 ಮಂದಿಯ ರಕ್ತದ ಮಾದರಿಯ ಪರೀಕ್ಷೆ ನಡೆಸಲಾಗಿದ್ದು, ಬೆಂಗಳೂರಿನಲ್ಲಿ 2,062, ಮೈಸೂರಿನಲ್ಲಿ 280, ವಿಜಯಪುರ-134, ಶಿವಮೊಗ್ಗ-120, ಬೆಳಗಾವಿ-112, ಚಿತ್ರದುರ್ಗ-104, ಧಾರವಾಡದಲ್ಲಿ 99 ಸೇರಿ ಒಟ್ಟು 4,108 ಪ್ರಕರಣಗಳು ದೃಢಪಟ್ಟಿವೆ. ಅದೃಷ್ಟವಶಾತ್ ಡೆಂಘ ಸಂಬಂಧಿತ ಸಾವು ವರದಿಯಾಗಿಲ್ಲ. ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತಿದ್ದು, ಪರಿಣಾಮ ಡೆಂಘ ಹೆಚ್ಚುತ್ತಿದೆ.

    ಮುನ್ನೆಚ್ಚರಿಕೆ ಕ್ರಮವಾಗಿ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಜನರಿಗೆ ಅರಿವು ಮೂಡಿಸಲಾಗುತ್ತಿದೆ. ಕೇಂದ್ರದ ಮಾರ್ಗಸೂಚಿಗಳ ಪ್ರಕಾರ ರಾಜ್ಯದಲ್ಲಿ ರೋಗವಾಹಕಗಳ ಹರಡುವಿಕೆ ತಡೆಗಟ್ಟಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ತ್ಯಾಜ್ಯಗಳಲ್ಲಿ ನೀರು ಸಂಗ್ರಹ ತಡೆಯಬೇಕಿದೆ

    ಡೆಂಘ ವೈರಾಣು ಜ್ವರ ಆಗಿದ್ದು, ಈಡೀಸ್ ಜಾತಿಯ ಸೊಳ್ಳೆಗಳ ಕಚ್ಚುವಿಕೆಯಿಂದ ಹರಡುತ್ತದೆ. ಮಳೆಗಾಲದಲ್ಲಿ ಈ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಗಟ್ಟಲು ಘನತ್ಯಾಜ್ಯ ವಸ್ತುಗಳಲ್ಲಿ ನೀರು ಸಂಗ್ರಹವಾಗುವುದನ್ನು ತಡೆಯುವುದು ಬಹಳ ಮುಖ್ಯವಾಗಿದೆ. ಹಠಾತ್ ಜ್ವರ, ತೀವ್ರ ತಲೆನೋವು, ಮೈಕೈ ನೋವು, ವಾಕರಿಕೆ, ವಾಂತಿ ಮತ್ತು ಮೈಮೇಲೆ ಕೆಂಪು ಬಣ್ಣದ ದದ್ದುಗಳು ಡೆಂಘಯ ರೋಗ ಲಕ್ಷಣಗಳಾಗಿದ್ದು, ರಕ್ತಸ್ರಾವ ಅಪಾಯಕಾರಿ ಚಿಹ್ನೆಯಾಗಿದೆ. ಡೆಂಘಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಅಥವಾ ಲಸಿಕೆ ಲಭ್ಯವಿಲ್ಲ. ಹೀಗಾಗಿ ರೋಗಲಕ್ಷಣಗಳನ್ನು ಆಧರಿಸಿ ಚಿಕಿತ್ಸೆ ನೀಡಲಾಗುತ್ತದೆ. ತಕ್ಷಣ ಚಿಕಿತ್ಸೆ ನೀಡದಿದ್ದರೆ, ಡೆಂಘ ಮಾರಣಾಂತಿಕವಾಗಬಹುದು. ಆದ್ದರಿಂದ ರೋಗ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ವೈದ್ಯರ ಸಲಹೆ ಪಡೆದು ರಕ್ತ ಪರೀಕ್ಷೆ ಮಾಡಿಸಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಡೆಂಘ ಪರೀಕ್ಷೆ ಮತ್ತು ಚಿಕಿತ್ಸೆ ಉಚಿತವಾಗಿದೆ.

    ಎಚ್ಚರಿಕೆ ಕ್ರಮಗಳು

    • ್ಝಮನೆಗಳ ಸುತ್ತಮುತ್ತ, ಹಳ್ಳಕೊಳ್ಳಗಳಲ್ಲಿ ಹಾಗೂ ತ್ಯಾಜ್ಯಗಳಲ್ಲಿ ನೀರು ಶೇಖರಣೆ ಆಗದಂತೆ ಎಚ್ಚರವಹಿಸಬೇಕು.
    • ್ಝಟ್ಯಾಂಕ್, ಡ್ರಮ್ ತೊಟ್ಟಿ ಸೇರಿ ನೀರು ಶೇಖರಿಸುವ ವಸ್ತುಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಸ್ವಚ್ಛಗೊಳಿಸಬೇಕು.
    • ್ಝಹೂವಿನಕುಂಡ, ಬಿಸಾಡಿದ ಟಯರ್, ತೆಂಗಿನ ಚಿಪು್ಪ ಇತ್ಯಾದಿ ವಸ್ತುಗಳಲ್ಲಿ ನೀರು ನಿಲ್ಲದಂತೆ ಸ್ವಚ್ಚಗೊಳಿಸಬೇಕು.
    • ್ಝಸೊಳ್ಳೆಗಳು ಕಚ್ಚದಂತೆ ಸೊಳ್ಳೆ ಪರದೆ, ಕಿಟಕಿಗಳಿಗೆ ಮೆಷ್ ಅಳವಡಿಸಬೇಕು. ಹಗಲು ಹೊತ್ತಿನಲ್ಲಿ ಸೊಳ್ಳೆ ಕಚ್ಚದಿರಲು ವೈದ್ಯರ ಸಲಹೆ ಪಡೆದು ಮೈ ಕೈಗೆ ಸೊಳ್ಳೆ ನಿವಾರಕ ಬಳಸಿ.

    ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts