More

    ಎಂಪಿಸಿಎಸ್ ಚುನಾವಣೆ ಕಾಯ್ದೆ ಸಡಿಲಗೊಳಿಸಲು ಒತ್ತಾಯ

    ಕೋಲಾರ: ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳ (ಎಂಪಿಸಿಎಸ್) ಚುನಾವಣೆ ನಡೆಸಲು ವಿಧಿಸಿರುವ ಕಾಯ್ದೆಗಳನ್ನು ಸಡಿಲಿಕರಣಗೊಳಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಗಳ ನೌಕರರ ಕ್ಷೇವಾಭಿವೃದ್ಧಿ ಸಂದ ಸದಸ್ಯರು ಜಿಲ್ಲಾ ಸಹಕಾರ ಸಂಗಳ ಇಲಾಖೆ ಉಪನಿಬಂಧಕಿ ಬಿ.ಜಿ.ಮಂಜುಳಾ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

    ಸಂದ ಅಧ್ಯಕ್ಷ ವಿಟ್ಟಪ್ಪನಹಳ್ಳಿ ವೆಂಕಟೇಶ್ ಮಾತನಾಡಿ, ಕಠಿಣ ನಿಯಮಗಳಿಂದ ಹಾಲು ಒಕ್ಕೂಟದ ಚುನಾವಣೆಗೆ ಪ್ರಾಥಮಿಕ ಸಂಗಳು ಅನರ್ಹತೆ ಪಡೆದುಕೊಳ್ಳಬೇಕಾಗುತ್ತದೆ. ಒಂದು ವೇಳೆ ಒಕ್ಕೂಟದ ಚುನಾವಣೆಗೆ ಅನರ್ಹಗೊಂಡಲ್ಲಿ ಸಂಗಳಲ್ಲಿ ಅಂದರೆ ಗ್ರಾಮಗಳಲ್ಲಿ ಅಶಾಂತಿ ತಲೆದೋರಿ ಕಾರ್ಯ ವೈಖರಿಗೆ ಕುಂಠಿತವಾಗುತ್ತದೆ ಎಂದು ಬೇಸರಿಸಿದರು.
    ಹಾಲು ಉತ್ಪಾದಕರ ಸಹಕಾರ ಸಂಗಳು ಬಹಳ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಮುಂದಿನ ಜನವರಿ ಅಥವಾ ಫೆಬ್ರವರಿಯೊಳಗೆ ಶೇ.60 ಸಂಗಳಲ್ಲಿ ನೂತನ ಆಡಳಿತ ಮಂಡಳಿ ರಚನೆಯಾಗಬೇಕಾಗಿದೆ ಎಂದರು.

    ಆಡಳಿತ ಮಂಡಳಿ ರಚನೆಗೆ ನಡೆಯುವ ಚುನಾವಣೆ ಪ್ರಕ್ರಿಯೆಗಳ ಕರ್ನಾಟಕ ಸಹಕಾರ ಸಂಗಳ ಕಾಯ್ದೆ 1959 ರ ಕಲಂ 20(2)(ಎ4) ಮತ್ತು 20(2)(ಎ5)ರ ರೀತ್ಯ ಅನರ್ಹ ಮತದಾರರಿಗೆ ನೋಟಿಸ್ ನೀಡಿ ಅದಕ್ಕೆ 15 ದಿನಗಳೊಳಗೆ ಮುಖ್ಯ ಕಾರ್ಯನಿರ್ವಾಹಕರಿಗೆ ಆಕ್ಷೇಪಣೆ ಸಲ್ಲಿಸಲು ಮತ್ತು ಆಕ್ಷೇಪಣೆಗೆ ಪರಿಹಾರ ಕಂಡುಕೊಳ್ಳಲು 30 ಕಲಂ 60 ದಿನಗಳವರೆಗೆ ನಿಬಂಧಕರ ಬಳಿ ದೂರು ಸಲ್ಲಿಸಿ ಪರಿಹಾರ ಕಂಡುಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿರುತ್ತದೆ. ಇದು ಬಹಳ ದೂರದ ಪ್ರಕ್ರಿಯೆ ಆಗುತ್ತದೆ ಎಂದು ಹೇಳಿದರು.
    ಬೇಡಿಕೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಪ್ರಾಥಮಿಕ ಸಂಗಳ ಚುನಾವಣೆಯ ಸಮಯ ನಿಗದಿತ ವಾಡಿಕೊಡಬೇಕು. ನಂತರದ ಅವಧಿಗಳಲ್ಲಿ ನಡೆಯುವ ಸಂಗಳ ಚುನಾವಣೆ ಪ್ರಕ್ರಿಯೆಗಳನ್ನು ಸಹಕಾರ ಸಂಗಳ ಕಾಯ್ದೆ ಮತ್ತು ಉಪನಿಯಮಗಳನ್ವಯ ವಾಡುತ್ತೇವೆ. ಅನರ್ಹ ಮತದಾರರ ನೋಟಿಸ್ ಪ್ರಕ್ರಿಯೆಯನ್ನು ಸಡಿಲಗೊಳಸಬೇಕು ಎಂದು ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts