More

    ಒಂದು ವಾರದೊಳಗೆ ನಾಲೆಗೆ ನೀರು ಹರಿಸದಿದ್ದರೆ ಉಪವಾಸ ಸತ್ಯಾಗ್ರಹ: ಜಿಪಂ ಮಾಜಿ ಸದಸ್ಯ, ಬಿಜೆಪಿ ಮುಖಂಡ ಎನ್.ಶಿವಣ್ಣ ಚಂದಗಾಲು ಎಚ್ಚರಿಕೆ

    ಮಂಡ್ಯ: ಕೆಆರ್‌ಎಸ್ ಅಣೆಕಟ್ಟೆಯಿಂದ ಒಂದು ವಾರದೊಳಗೆ ನಾಲೆಗೆ ನೀರು ಹರಿಸದಿದ್ದರೆ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರೂ ಆದ ಬಿಜೆಪಿ ಮುಖಂಡ ಎನ್.ಶಿವಣ್ಣ ಚಂದಗಾಲು ಎಚ್ಚರಿಕೆ ನೀಡಿದ್ದಾರೆ.
    ಮಂಡ್ಯ ಕೃಷಿ ಪ್ರಧಾನ ಜಿಲ್ಲೆ. ಶೇ.80ರಷ್ಟು ಜನ ಕೃಷಿಯನ್ನೇ ಅವಲಂಬಿಸಿದ್ದು, ಜೀವನ ನಡೆಸಲು ಬೇರೆ ಯಾವುದೇ ಮಾರ್ಗಗಳಿಲ್ಲ. ಪ್ರಸ್ತುತ ರಾಜ್ಯದಲ್ಲಿ ಭೀಕರ ಬರಗಾಲ ತಾಂಡವವಾಡುತ್ತಿದ್ದು, ಜನರ ಬದುಕು ಹೀನಾಯ ಸ್ಥಿತಿ ತಲುಪಿದೆ. ನೀರಿಲ್ಲದ ಕಾರಣ ಬಹುತೇಕ ಬೆಳೆ ಒಣಗಿ ಹೋಗಿದೆ. ಇತ್ತ ಬೆಳೆ ಉಳಿಸಿಕೊಳ್ಳುವ ಸಲುವಾಗಿ ರೈತರು ಚಿನ್ನಾಭರಣ ಅಡವಿಟ್ಟು ಬೋರ್‌ವೆಲ್ ಕೊರೆಸುತ್ತಿದ್ದಾರೆ. ಆದರೆ ಬೇಸಿಗೆಯ ತಾಪಮಾನ ಹೆಚ್ಚಿರುವುದರಿಂದ ಬೋರ್‌ವೆಲ್ ವಿಫಲವಾಗುತ್ತಿರುವುದರಿಂದ ರೈತರು ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ದಾರಿ ಹಿಡಿಯುವುದು ಖಚಿತ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
    ಬೇಸಿಗೆ ಇನ್ನೂ ಎರಡು ತಿಂಗಳು ಇರಲಿದೆ. ತಕ್ಷಣ ನಾಲೆಗಳಿಗೆ ಕನಿಷ್ಟ ಒಂದು ವಾರ ನೀರು ಹರಿಸದಿದ್ದರೆ ಜಿಲ್ಲೆಯ ಜನರ ಬದುಕು ಬರ್ಬರವಾಗಲಿದೆ. ಈ ಹಿಂದೆ ಅಣೆಕಟ್ಟೆಯಲ್ಲಿ 72 ಅಡಿ ನೀರಿದ್ದಾಗಲೂ ನಾಲೆಯಲ್ಲಿ ನೀರು ಹರಿಸಿರುವ ಉದಾಹರಣೆ ಇದೆ. ಆದ್ದರಿಂದ ಶೀಘ್ರವಾಗಿ ಆಡಳಿತ ಹಾಗೂ ವಿರೋಧ ಪಕ್ಷಗಳು ಚರ್ಚಿಸಿ ವಾರದೊಳಗೆ ನೀರು ಕೊಡಬೇಕೆಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts