More

    ದುಷ್ಕರ್ಮಿಗಳ ಬಂಧನಕ್ಕೆ ಒತ್ತಡ, ಅಸಮರ್ಪಕ ಗಸ್ತು ಆರೋಪ

    5ಮಂಗಳೂರು: ವಿವಾದಾತ್ಮಕ ಬರಹ ಪತ್ತೆಯಾಗಿರುವುದು ನಗರ ಪ್ರವೇಶಿಸುವ ಪ್ರಮುಖ ಸ್ಥಳದಲ್ಲಿ. ರಾತ್ರಿ-ಹಗಲು ಜನರು ಓಡಾಡುವ ಪ್ರದೇಶ. ಇಂಥ ಸ್ಥಳದಲ್ಲಿ ಇಷ್ಟು ದೊಡ್ಡ ಬರಹ ಬರೆದರೂ ಕಿಡಿಗೇಡಿಗಳು ಯಾರ ಕಣ್ಣಿಗೂ ಬಿದ್ದಿಲ್ಲವೇಕೆ?

    ನಗರದ ಸರ್ಕೀಟ್ ಹೌಸ್‌ನಿಂದ ಬಿಜೈ ಕಡೆಗೆ ಹೋಗುವ ರಸ್ತೆಯ ಕದ್ರಿ ಕಂಬಳ ಕ್ರಾಸ್‌ನಲ್ಲಿರುವ ಅಪಾರ್ಟ್‌ಮೆಂಟ್‌ನ ಆವರಣ ಗೋಡೆಯಲ್ಲಿ ಪತ್ತೆಯಾದ ಉಗ್ರ ಪರ ಬರಹ ಹಿನ್ನೆಲೆಯಲ್ಲಿ ಎದ್ದಿರುವ ಪ್ರಶ್ನೆಯಿದು. ಅಪಾರ್ಟ್‌ಮೆಂಟ್ ಕದ್ರಿ ಪೊಲೀಸ್ ಠಾಣೆ ಸಮೀಪದಲ್ಲೇ ಇದೆ. ಈ ಬರಹ ಬರೆಯಲು ದುಷ್ಕರ್ಮಿಗಳಿಗೆ ಕನಿಷ್ಠ 10 ನಿಮಿಷವಾದರೂ ಬೇಕು. ನಗರದಲ್ಲಿ ಪೊಲೀಸರು ಗಸ್ತು ತಿರುಗುವಾಗ ಅವರ ಕಣ್ಣಿಗೂ ಯಾಕೆ ಬಿದ್ದಿಲ್ಲವೇ?

    ಕೆಲವು ಸಮಯಗಳಿಂದ ನಗರದಲ್ಲಿ ರಾತ್ರಿ ವೇಳೆ ರೌಡಿಶೀಟರ್‌ಗಳ ಸಹಿತ ಹಲವರ ಕೊಲೆ, ಕೊಲೆ ಯತ್ನ ಪ್ರಕರಣಗಳು ನಿರಂತರವಾಗಿ ನಡೆಯುತ್ತಿರುವುದು ಪೊಲೀಸ್ ಗಸ್ತು ಸರಿಯಾಗಿ ನಡೆಯುತ್ತಿಲ್ಲ ಎನ್ನುವ ಆರೋಪಗಳಿಗೂ ಪುಷ್ಠಿ ನೀಡಿವೆ. ಮಳೆಗಾಲದಲ್ಲಿ ಕೆಟ್ಟು ಹೋದ ಸಿಸಿ ಕ್ಯಾಮರಾಗಳ ದುರಸ್ತಿ ಕಾರ್ಯ ಇನ್ನೂ ಆರಂಭವಾಗದಿರುವುದು ಇಂಥ ಪ್ರಕರಣಗಳಲ್ಲಿ ತನಿಖೆಗೆ ಸಮಸ್ಯೆಯಾಗುತ್ತಿದ್ದು, ಇದೂ ಇಲಾಖೆಯತ್ತ ಬೆಟ್ಟು ಮಾಡುವಂತಿದೆ.

    ಮೊದಲ ಬಾರಿಗೆ ಪತ್ತೆ: ಮಂಗಳೂರಿನಲ್ಲಿ ಉಗ್ರರ ಪರವಾದ ಬರಹ ಇದೇ ಮೊದಲ ಬಾರಿಗೆ ಕಂಡು ಬಂದಿದೆ. ಈ ಹಿಂದೆ ನಕ್ಸಲ್ ಪರವಾದ ಬರಹಗಳು ಪತ್ತೆಯಾಗಿದ್ದವು. ಆದರೆ ಯಾರು ಬರೆದವರು ಎಂಬುದು ಪತ್ತೆಯಾಗಿರಲಿಲ್ಲ. ಇದೀಗ ಉಗ್ರರ ಪರವಾದ ಬರಹ ಕಂಡು ಬಂದಿರುವುದರಿಂದ ಈ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.

    ಆರೋಪಿಗಳ ಬಂಧನಕ್ಕೆ ಒತ್ತಾಯ: ಭಯೋತ್ಪಾದನಾ ಸಂಘನೆಗಳಿಗೆ ಬೆಂಬಲ ಸೂಚಿಸಿ ದೇಶ ವಿರೋಧಿ ಬರಹ ಬರೆದ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ಹಿಂದು ಜಾಗರಣ ವೇದಿಕೆ ಕದ್ರಿ ಪೊಲೀಸ್ ಅಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಿದೆ. ಬಜರಂಗದಳ ಮತ್ತು ವಿಶ್ವ ಹಿಂದು ಪರಿಷತ್ ಮಲ್ಲಿಕಟ್ಟೆಯಲ್ಲಿ ಪ್ರತಿಭಟನೆ ನಡೆಸಿ ಆರೋಪಿಗಳ ಬಂಧನಕ್ಕೆ ಆಗ್ರಹಿಸಿದೆ.

    ಉಗ್ರ ಪರ ಬರಹಕ್ಕೆ ಉತ್ತರ!: ಉಗ್ರ ಪರ ಗೋಡೆ ಬರಹದ ಬೆನ್ನಲ್ಲೇ ಇದಕ್ಕೆ ಉತ್ತರವೆಂದು ಎಡಿಟ್ ಮಾಡಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆರ್‌ಎಸ್‌ಎಸ್ ಹೆಸರಿನಲ್ಲಿ ಈ ಪೋಸ್ಟ್ ಎಂದು ಬರೆಯಲಾಗಿದೆ. ‘ಇನ್‌ವೈಟ್ ಯಾರನ್ನು ಬೇಕಾದರೂ ಮಾಡಿ, ನಾವೇನು ಅಂಗನವಾಡಿ ಸಜ್ಜಿಗೆ ತಿನ್ನುತ್ತಾ ಕುಳಿತುಕೊಳ್ಳುತ್ತೇವಾ? ಇದು ’ಟಜ್ಛಿಜಿಛಿ ಐ್ಞಜಿ’ ಎಂದು ಪೋಸ್ಟ್ ಮಾಡಲಾಗಿದೆ. ಹ್ಯಾಷ್ ಟ್ಯಾಗ್‌ನಲ್ಲಿ ಆರ್‌ಎಸ್‌ಎಸ್ ಮತ್ತು ಇಂಡಿಯನ್ ಆರ್ಮಿ ಎಂದು ಬರೆಯಲಾಗಿದೆ.

    ರಾಷ್ಟ್ರ ವಿರೋಧಿ ಬರಹ, ಘೋಷಣೆಯಂಥ ಚಟುವಟಿಕೆಯನ್ನು ಸಹಿಸಲು ಸಾಧ್ಯವಿಲ್ಲ. ಇದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಅದನ್ನು ನಮ್ಮ ಸರ್ಕಾರ ತೆಗೆದುಕೊಳ್ಳುತ್ತದೆ.
    – ನಳಿನ್ ಕುಮಾರ್ ಕಟೀಲ್, ಸಂಸದ

    ಮಂಗಳೂರಿನಲ್ಲಿ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಯ ಪರವಾಗಿ ಕಂಡು ಬಂದಿರುವ ಗೋಡೆ ಬರಹ ಆತಂಕಕಾರಿ. ಆರೋಪಿಗಳನ್ನು ಶೀಘ್ರ ಬಂಧಿಸಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇಂತಹ ಮನಸ್ಥಿತಿಯನ್ನು ಮೊಳಕೆಯಲ್ಲೇ ಚಿವುಟದಿದ್ದರೆ ಭಯೋತ್ಪಾದನಾ ಚಟುವಟಿಕೆಯ ಬೇರು ಮತ್ತಷ್ಟು ಆಳಕ್ಕೆ ಹೋಗಬಹುದು.
    – ವೇದವ್ಯಾಸ ಕಾಮತ್, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts