More

    ಲೋಕಸಮರ: ಖಾಸಗಿ ವಿಮಾನ, ಕಾಪ್ಟರ್​ಗೆ ಭರ್ಜರಿ ಡಿಮ್ಯಾಂಡ್​ ! ಇದರ ಬಾಡಿಗೆ ಬೆಲೆ ಕೇಳಿದ್ರೆ ಬೆರಗಾಗ್ತೀರಾ..

    ಬೆಂಗಳೂರು: ಸಾರ್ವಜನಿಕರು ಭಾರೀ ಕಾತುರದಿಂದ ನಿರೀಕ್ಷಿಸುತ್ತಿರುವ ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಲೋಕಸಭಾ ಚುನಾವಣೆಯ ದಿನಾಂಕಗಳು ಮಾರ್ಚ್​ 14 ಅಥವಾ ಮಾರ್ಚ್​ 17ರೊಳಗೆ ಪ್ರಕಟಣೆಗೊಳ್ಳುವ ಸಾಧ್ಯತೆಗಳಿವೆ. ಹಿಂದಿನ ಸಾರ್ವತ್ರಿಕ ಚುನಾವಣೆಗಳಿಗೆ ಹೋಲಿಸಿದರೆ ಚಾರ್ಟರ್ಡ್ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳ ಬೇಡಿಕೆ ಶೇಕಡಾ 40 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

    ಇದನ್ನೂ ಓದಿ: ಟಿ20 ವಿಶ್ವಕಪ್​: ಆಸ್ಟ್ರೇಲಿಯಾ ಟಿ20 ತಂಡಕ್ಕೆ ಹೊಸ ನಾಯಕನ ಆಯ್ಕೆ!

    ಲೋಕಸಭೆ ಚುನಾವಣೆ ಘೋಷಣೆ ನಂತರ ದೇಶಾದ್ಯಂತ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರ ಕಾರ್ಯಗಳನ್ನು ಆರಂಭಿಸಲಿವೆ. ರಾಜಕೀಯ ಪಕ್ಷಗಳಿಂದ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಪ್ರಚಾರ ಸಭೆ, ರ‌್ಯಾಲಿಗಳನ್ನು ಆಯೋಜಿಸಲಾಗುತ್ತದೆ. ಪಕ್ಷಗಳ ಸ್ಟಾರ್ ಪ್ರಚಾರಕರು, ವರಿಷ್ಠರು ಬಹುಬೇಗ ನಿಗದಿತ ಸ್ಥಳಗಳಿಗೆ ತೆರಳುವುದು ಅನಿವಾರ್ಯ. ಹಾಗಾಗಿ, ಗ್ರಾಮೀಣ ಮತ್ತು ದೂರದ ಸ್ಥಳಗಳಿಗೆ ತೆರಳಲು ವಿಮಾನಗಳ ಬದಲಿಗೆ ಹೆಲಿಕಾಪ್ಟರ್‌ಗಳಿಗೆ ಬೇಡಿಕೆ ಹೆಚ್ಚಿರುತ್ತದೆ ಎಂದು ಹೇಳಿದ್ದಾರೆ.

    ಲೋಕಸಮರ: ಖಾಸಗಿ ವಿಮಾನ, ಕಾಪ್ಟರ್​ಗೆ ಭರ್ಜರಿ ಡಿಮ್ಯಾಂಡ್​ ! ಇದರ ಬಾಡಿಗೆ ಬೆಲೆ ಕೇಳಿದ್ರೆ ಬೆರಗಾಗ್ತೀರಾ..

    ಈ ಎಲ್ಲಾ ಕಾರಣಗಳಿಂದ ಖಾಸಗಿ ವಿಮಾನ ಹಾಗೂ ಹೆಲಿಕಾಪ್ಟರ್‌ಗಳ ಬೇಡಿಕೆ ಶೇ.40ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಇದರಿಂದ ಖಾಸಗಿ ವಿಮಾನಗಳ ಬಾಡಿಗೆ ದರ ಗಂಟೆಗೆ 4.5 ಲಕ್ಷ ರು.ನಿಂದ 5.25 ಲಕ್ಷ ರು. ಇರಲಿದೆ ಎಂದು ವಿಮಾನಯಾನ ಪರಿಣತರು ಅಭಿಪ್ರಾಯಪಟ್ಟಿದ್ದಾರೆ.
    ಆದರೆ, ಈ ಬೇಡಿಕೆಗೆ ಹೋಲಿಸಿದರೆ ದೇಶದಲ್ಲಿ ಚಾರ್ಟರ್ಡ್​​​ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳ ಲಭ್ಯತೆ ಕಡಿಮೆ ಇದೆ ಎಂದು ಕ್ಲಬ್ ಒನ್ ಏರ್ ಸಿಇಒ ರಾಜನ್ ಮೆಹ್ರಾ ತಿಳಿಸಿದ್ದಾರೆ.

    ದೇಶದಲ್ಲಿ ಪ್ರಸ್ತುತ 112 ಖಾಸಗಿ ವಿಮಾನ ಆಪರೇಟರ್‌ಗಳಿದ್ದು, ಅವರ ಬಳಿ 450ರಿಂದ 500 ವಿಮಾನಗಳಿವೆ. ಆಂದಾಜು 175 ಹೆಲಿಕಾಪ್ಟರ್‌ಗಳಿವೆ. ಬೇಡಿಕೆ ಹೆಚ್ಚಿರುವ ಕಾರಣ ಕೆಲವರು ವಿದೇಶಗಳಿಂದ ಬಾಡಿಗೆ ತರಿಸಿ, ಇಲ್ಲಿ ಬೇಡಿಕೆ ಪೂರೈಸುತ್ತಾರೆ ಎಂದು ಮಾಹಿತಿ ನೀಡಿದರು. ಖಾಸಗಿ ವಿಮಾನಗಳಲ್ಲಿ ಸುಮಾರು 10 ಜನ ಕೂರುವ ವ್ಯವಸ್ಥೆ ಇರುತ್ತದೆ. ಹೆಲಿಕಾಪ್ಟರ್‌ನಲ್ಲಿ 4-5 ಜನ ಕೂರಬಹುದು.

    ಬಿಸಿನೆಸ್ ಏರ್‌ಕ್ರಾಫ್ಟ್ ಆಪರೇಟರ್ಸ್ ಅಸೋಸಿಯೇಷನ್ ​​(ಬಿಎಒಎ) ವ್ಯವಸ್ಥಾಪಕ ನಿರ್ದೇಶಕ ಕ್ಯಾಪ್ಟನ್ ಆರ್‌ಕೆ ಬಾಲಿ ಪಿಟಿಐಗೆ ಮಾತನಾಡಿ, ಲೋಕಸಭೆ ಚುನಾವಣೆಯ ಸಮಯದಲ್ಲಿ ಖಾಸಗಿ ಚಾರ್ಟರ್ಡ್ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳ ಬೇಡಿಕೆ ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಶೇಕಡಾ 30 ರಿಂದ 40 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.

    2019ರಲ್ಲಿ ವಿಮಾನಗಳ ಮೇಲೆ ಬಿಜೆಪಿ 250 ಕೋಟಿರು. ಬಳಕೆ: 2019ರ ಲೋಕಸಭೆ ಚುನಾವಣೆ ಸಮಯದಲ್ಲಿ ಬಿಜೆಪಿ ಚುನಾವಣೆ ಪ್ರಚಾರದ ಕಾರ್ಯಕ್ಕೆಂದೇ ವಿಮಾನ ಹಾಗೂ ಹೆಲಿಕಾಪ್ಟರ್ ಬಾಡಿಗೆ ಪಡೆಯಲು ಒಟ್ಟು 250 ಕೋಟಿ ರು. ವೆಚ್ಚ ಮಾಡಿತ್ತು ಎಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ವರದಿಯಲ್ಲಿ ತಿಳಿಸಿತ್ತು.

    ಟಿ20 ವಿಶ್ವಕಪ್​: ಆಸ್ಟ್ರೇಲಿಯಾ ಟಿ20 ತಂಡಕ್ಕೆ ಹೊಸ ನಾಯಕನ ಆಯ್ಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts