More

    ವಿದ್ಯುತ್ ಖಾಸಗೀಕರಣ ರದ್ದತಿಗೆ ಆಗ್ರಹ

    ಮುಂಡರಗಿ: ಕಬ್ಬಿನ ದರ ನಿಗದಿಪಡಿಸಬೇಕು ಹಾಗೂ ವಿದ್ಯುತ್ ಖಾಸಗೀಕರಣ ರದ್ದುಗೊಳಿಸಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಆಶಪ್ಪ ಪೂಜಾರಿ ಮೂಲಕ ಪ್ರಧಾನ ಮಂತ್ರಿಗೆ ಮಂಗಳವಾರ ಮನವಿ ಸಲ್ಲಿಸಿದರು.
    ಸಂಘದ ಪ್ರಧಾನ ಕಾರ್ಯದರ್ಶಿ ವೀರನಗೌಡ ಪಾಟೀಲ ಮಾತನಾಡಿ, ‘ಕಬ್ಬಿನ ಎಫ್​ಆರ್​ಪಿ ದರವನ್ನು ಮೂರು ವರ್ಷಗಳಿಂದ ಏರಿಕೆ ಮಾಡಿಲ್ಲ. ಆದರೆ, ಕಬ್ಬು ಉತ್ಪಾದನೆ ವೆಚ್ಚ ಏರಿಕೆಯಾಗಿದೆ. ಕೇಂದ್ರ ಸರ್ಕಾರ 2018-19ರಲ್ಲಿ ಶೇ. 10ರಷ್ಟು ಇಳುವರಿಗೆ 2,850 ರೂಪಾಯಿ ನಿಗದಿಪಡಿಸಿತ್ತು. ರೈತರ ಆದಾಯ ದ್ವಿಗುಣ ಮಾಡುತ್ತೇವೆ ಎನ್ನುವ ಕೇಂದ್ರ ಸರ್ಕಾರ ರೈತರ ಉತ್ಪಾದನೆ ವೆಚ್ಚವನ್ನೂ ನಿಗದಿ ಮಾಡದೆ ರೈತರ ಕಣ್ಣಿಗೆ ಮಣ್ಣೆರಚುತ್ತಿದೆ. ತಕ್ಷಣವೇ ಪ್ರಸ್ತುತ ಸಾಲಿನ ಕಬ್ಬಿನ ದರ ಕನಿಷ್ಠ 3,200 ರೂಪಾಯಿಗೆ ನಿಗದಿಪಡಿಸಬೇಕು’ ಎಂದು ಒತ್ತಾಯಿಸಿದರು.
    ವಿದ್ಯುತ್ ಖಾಸಗೀಕರಣದಿಂದ ಖಾಸಗಿ ಕಂಪನಿಗಳು ಬಂದರೆ ರೈತರ ನೀರಾವರಿ ಪಂಪ್​ಸೆಟ್​ಗಳಿಗೆ ಮೀಟರ್ ಅಳವಡಿಕೆ ಮಾಡಿ ಕೃಷಿಗೆ ಉಚಿತ ವಿದ್ಯುತ್ ಪೂರೈಕೆ ನಿಲ್ಲಿಸುವ ಹುನ್ನಾರ ನಡೆಸುತ್ತವೆ. ವಿದ್ಯುತ್ ಖಾಸಗೀಕರಣ ಕೈಬಿಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸಲಾಗುತ್ತದೆ ಎಂದರು.
    ರೈತರಾದ ಸುರೇಶ ಹಲವಾಗಲಿ, ಪ್ರಕಾಶ ಸಜ್ಜನರ ಮಾತನಾಡಿದರು. ಶಂಕ್ರಪ್ಪ ಹಂಪಸಾಗರ, ಬಾಬೂಜಿ ಎಂ, ಶರಣಪ್ಪ ಚೆನ್ನಳ್ಳಿ, ಗರಡಪ್ಪ ಜಂತ್ಲಿ, ಈಶಪ್ಪ ಮಲ್ಲಶೆಟ್ಟಿ, ಶೇಖಪ್ಪ ಪೂಜಾರ, ಇ.ಬಿ. ಹಿರೇಗೌಡ್ರ, ದೇವಪ್ಪ ಹಾರಕರ, ಗಂಗಾಧರ ಮಚ್ಚೆನಹಳ್ಳಿ, ಈರಣ್ಣ ತಳವಾರ, ಈರಣ್ಣ ಹಡಪದ, ಶಮ್ುದ್ಧೀನ ಬರದೂರ, ಮಾಬುಸಾಬ್ ಬಳ್ಳಾರಿ, ಡಿ.ಇ. ಹಳ್ಳಿಕೇರಿ, ರಂಗಪ್ಪ ಗಾಂಜಿ, ಕೋಟೆಪ್ಪ ಶೀರನಹಳ್ಳಿ, ಆರ್.ಎಂ. ಬುಡೇನಾಯ್ಕರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts