More

    ಡೆಲ್ಲಿಗೆ ಸಾಟಿಯಾಗದ ಸನ್‌ರೈಸರ್ಸ್‌; ಫ್ಲೇಆಫ್ ಸನಿಹದಲ್ಲಿ ರಿಷಭ್ ಪಂತ್ ಪಡೆ

    ದುಬೈ: ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲೂ ಪ್ರಭುತ್ವ ಸಾಧಿಸಿದ ಹಾಲಿ ರನ್ನರ್‌ಅಪ್ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್-14ರ ಎರಡನೇ ಭಾಗದಲ್ಲಿ ಗೆಲುವಿನ ಆರಂಭ ಕಂಡಿದೆ. ರಿಷಭ್ ಪಂತ್ ಬಳಗ ಯುಎಇ ಚರಣದ ತನ್ನ ಮೊದಲ ಹಣಾಹಣಿಯಲ್ಲಿ ಸನ್‌ರೈಸರ್ಸ್‌ ಎದುರು 8 ವಿಕೆಟ್‌ಗಳಿಂದ ಜಯ ದಾಖಲಿಸಿತು. ಈ ಮೂಲಕ ಲೀಗ್‌ನಲ್ಲಿ 7ನೇ ಜಯ ದಾಖಲಿಸಿದ ಡೆಲ್ಲಿ ತಂಡ 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಮೂಲಕ ಪ್ಲೇಆಫ್ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿತು. ಮೊದಲ ಚರಣದ ಕಡೇ 2 ಪಂದ್ಯಗಳಲ್ಲೂ ಡೆಲ್ಲಿ ತಂಡ ಜಯ ಕಂಡಿತ್ತು. ಲೀಗ್‌ನಲ್ಲಿ 7ನೇ ಸೋಲು ಕಂಡ ಸನ್‌ರೈಸರ್ಸ್‌ ತಂಡದ ಪ್ಲೇಆಫ್ ಹಾದಿ ಮತ್ತಷ್ಟು ದುರ್ಗಮಗೊಂಡಿತು.

    ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್‌ ತಂಡ, ವೇಗಿಗಳಾದ ಕಗಿಸೊ ರಬಾಡ (37ಕ್ಕೆ 3), ಅನ್ರಿಚ್ ನೋಕಿಯ (12ಕ್ಕೆ 2) ಮಾರಕ ದಾಳಿಗೆ ನಲುಗಿ 9 ವಿಕೆಟ್‌ಗೆ 134 ರನ್ ಪೇರಿಸಲಷ್ಟೇ ಶಕ್ತವಾಯಿತು. ಈ ಸಾಧಾರಣ ಮೊತ್ತ ಬೆನ್ನಟ್ಟಿದ ಡೆಲ್ಲಿ ತಂಡ 17.5 ಓವರ್‌ಗಳಲ್ಲಿ 2 ವಿಕೆಟ್‌ಗೆ 139 ರನ್‌ಗಳಿಸಿ ಜಯದ ನಗೆ ಬೀರಿತು.

    ಸನ್‌ರೈಸರ್ಸ್‌ ಹೈದರಾಬಾದ್: 9 ವಿಕೆಟ್‌ಗೆ 134 (ಡೇವಿಡ್ ವಾರ್ನರ್ 0, ವೃದ್ಧಿಮಾನ್ ಸಾಹ 18, ಕೇನ್ ವಿಲಿಯಮ್ಸನ್ 18, ಮನೀಷ್ ಪಾಂಡೆ 17, ಅಬ್ದುಲ್ ಸಮದ್ 28, ರಶೀದ್ ಖಾನ್ 22, ಕಗಿಸೊ ರಬಾಡ 37ಕ್ಕೆ 3, ಅಕ್ಷರ್ ಪಟೇಲ್ 21ಕ್ಕೆ 2, ಅನ್ರಿಚ್ ನೋಕಿಯ 12ಕ್ಕೆ 2), ಡೆಲ್ಲಿ ಕ್ಯಾಪಿಟಲ್ಸ್ : 17.5 ಓವರ್‌ಗಳಲ್ಲಿ 2 ವಿಕೆಟ್‌ಗೆ 139 (ಶ್ರೇಯಸ್ ಅಯ್ಯರ್ 47*, ಶಿಖರ್ ಧವನ್ 42, ರಿಷಭ್ ಪಂತ್ 35*, ಖಲೀಲ್ ಅಹಮದ್ 33ಕ್ಕೆ 1, ರಶೀದ್ ಖಾನ್ 26ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts