More

    ಅವಳಿ ಒಲಿಂಪಿಕ್​ ಪದಕ ವಿಜೇತ ಪೈಲ್ವಾನ್​ ಸುಶೀಲ್​ ಕುಮಾರ್​ಗೆ ದೆಹಲಿ ಪೊಲೀಸರಿಂದ ಶಾಕ್​ ಮೇಲೆ ಶಾಕ್​..

    ನವದೆಹಲಿ: ಯುವ ಕುಸ್ತಿಪಟು ಕೊಲೆ ಪ್ರಕರಣದಲ್ಲಿ ಸಿಲುಕಿ ಪೊಲೀಸ್​ ಕಸ್ಟಡಿಯಲ್ಲಿರುವ ಅವಳಿ ಒಲಿಂಪಿಕ್​ ಪದಕ ವಿಜೇತ ಸುಶೀಲ್​ ಕುಮಾರ್​ ಅವರ ಸಶಸ್ತ್ರ ಪರವಾನಗಿಯನ್ನು ದೆಹಲಿ ಪೊಲೀಸರು ಅಮಾನತುಗೊಳಿಸಿದ್ದಾರೆ. ಮೇ 5 ರಂದು ಉತ್ತರ ದೆಹಲಿಯ ಛತ್ರಾಶಾಲ್​ ಸ್ಟೇಡಿಯಂ ಆವರಣದಲ್ಲಿ 23 ವರ್ಷದ ರೆಸ್ಲರ್​ ಸಾಗರ್​ ರಾಣಾ ಎಂಬುವರ ಕೊಲೆನಡೆದಿತ್ತು. ಈ ಕೊಲೆಗೆ ಸಂಬಂಧಪಟ್ಟ ಸುಶೀಲ್​ ಕುಮಾರ್​ ಅವರ ಸಹಚರ ಅಜಯ್​ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಸುಶೀಲ್​ ಕುಮಾರ್​ಗೆ ನೀಡಲಾಗಿದ್ದ, ಸಶಸ್ತ್ರ ಪರವಾನಗಿಯನ್ನು ಅಮಾನತುಗೊಳಿಸಲಾಗಿದ್ದು, ಲೈಸೆನ್ಸ್​ ರದ್ದು ಮಾಡುವ ಕುರಿತು ನೋಟಿಸ್​ ಜಾರಿ ಮಾಡಲಾಗಿದೆ ಎಂದು ಜಂಟಿ ಪೊಲೀಸ್​ ಆಯುಕ್ತ ಓಪಿ ಮಿಶ್ರಾ ತಿಳಿಸಿದ್ದಾರೆ.

    ಇದನ್ನೂ ಓದಿ: ಯುಎಇಯಲ್ಲಿ ಐಪಿಎಲ್​ ಖಚಿತಗೊಂಡ ಬೆನ್ನಲ್ಲೇ ಟ್ರೋಲ್​ ಆದ ಸುರೇಶ್ ರೈನಾ.

    ಇದಕ್ಕೂ ಮೊದಲು ಸುಶೀಲ್​ ಕುಮಾರ್​ ಕೊಲೆ ಪ್ರಕರಣದಲ್ಲಿ ಸಿಕ್ಕಿ ಬಿದ್ದ ಬಳಿಕ ನಾರ್ಥರ್ನ್​ ರೈಲ್ವೇಸ್​ ಇಲಾಖೆ ಸೇವೆಯಿಂದ ಅಮಾನತುಗೊಳಿಸಿತ್ತು. ಶನಿವಾರವಷ್ಟೇ ಸುಶೀಲ್​ ಕುಮಾರ್​ ಅವರ ಪೊಲೀಸ್​ ಕಸ್ಟಡಿ ಅವಧಿಯನ್ನು ದೆಹಲಿ ನ್ಯಾಯಾಲಯ ಮತ್ತೆ ನಾಲ್ಕು ದಿನಗಳ ಕಾಲ ವಿಸ್ತರಿಸಿದೆ. ಕಳೆದ ಭಾನುವಾರದಿಂದ 6 ದಿನಗಳ ಕಾಲ ದೆಹಲಿ ಪೊಲೀಸರ ಕಸ್ಟಡಿಗೆ ಸುಶೀಲ್​ ಕುಮಾರ್​ ಅವರನ್ನು ಒಪ್ಪಿಸಲಾಗಿತ್ತು.

    ಇದನ್ನೂ ಓದಿ:16 ಬಾರಿ ಡಬ್ಲ್ಯುಡಬ್ಲ್ಯುಇ ಚಾಂಪಿಯನ್​ಗೆ ಕ್ರಿಕೆಟ್​ ದಿಗ್ಗಜ ರಾಹುಲ್​ ದ್ರಾವಿಡ್​ ಮಾತೇ ಸ್ಫೂರ್ತಿ.

    ಮೇ 4ರಂದು ಛತ್ರಶಾಲಾ ಸ್ಟೇಡಿಯಂ ಹೊರಗೆ 23 ವರ್ಷದ ಪೈಲ್ವಾನ್​ ಸಾಗರ್​ ಕೊಲೆಯಾಗಿದ್ದರು. ಇದರ ಬೆನ್ನಲ್ಲೇ ಪ್ರಕರಣದ ಪ್ರಮುಖ ಆರೋಪಿ ಸುಶೀಲ್​ ತಲೆಮರೆಸಿಕೊಂಡಿದ್ದರು. ಸುಶೀಲ್​ 2008 ಮತ್ತು 2012ರ ಒಲಿಂಪಿಕ್ಸ್​ನಲ್ಲಿ ಪದಕ ಜಯಿಸಿದ್ದರು.

    ಹೊಸ ಬೈಕ್​ನಲ್ಲಿ ಪೋಸ್​ ನೀಡಲು ಹೋಗಿ ನೆಟ್ಟಿಗರಿಂದ ಕಾಲೆಳೆಸಿಕೊಂಡ ವೇಗದ ಬೌಲರ್ ನವದೀಪ್​ ಸೈನಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts