More

    ಲಾಕ್​ಡೌನ್​ ನಂತರ ಯುಮುನಾ ನದಿ ನೀರಿನ ಗುಣಮಟ್ಟ ಹೆಚ್ಚಾಗಿದೆ: ದೆಹಲಿ ಜಲಮಂಡಳಿ ಸ್ಪಷ್ಟನೆ

    ನವದೆಹಲಿ: ಎರಡನೇ ಮಹಾ ಯುದ್ಧದ ನಂತರ ವಿಶ್ವದಲ್ಲಿ ಅತೀ ದೊಡ್ಡ ಮಾನವ ವಿಪ್ಪತ್ತು ಹಾಗೂ ತೀವ್ರ ಆರ್ಥಿಕ ಬಿಕ್ಕಟ್ಟು ಸೃಷ್ಟಿಸಿರುವ ಕರೊನಾ ವೈರಸ್​ ಪರಿಸರ ಚೇತರಿಕೆಗೆ ನೆರವಾಗಿದೆ.

    ತೀವ್ರ ಮಾಲಿನ್ಯಗೊಂಡಿದ್ದ ಯುಮುನಾ ನದಿ ನೀರು ಗುಣಮಟ್ಟ ಲಾಕ್​ಡೌನ್​ ನಂತರ ಸುಧಾರಿಸುತ್ತಿದೆ ಎಂದು ದೆಹಲಿ ಜಲಮಂಡಳಿ ಉಪಾಧ್ಯಕ್ಷ ರಾಘವ್​ ಚಾದಾ ಅವರು ತಿಳಿಸಿದ್ದಾರೆ.

    ಲಾಕ್​ಡೌನ್​ ಮೊದಲು ಹಾಗೂ ನಂತರ ನದಿ ನೀರಿನ ಗುಣಮಟ್ಟವನ್ನು ದೆಹಲಿ ಜಲ ಮಂಡಳಿ ಪರೀಕ್ಷೆ ನಡೆಸಿದೆ. ಲಾಕ್​ಡೌನ್​ಗೂ ಮೊದಲು ನದಿ ನೀರಿಗೆ ಅಮೊನಿಯಾ ಸೇರಿದಂತೆ ವಿವಿಧ ರಾಸಾಯನಿಕಗಳು ಸೇರಿದ್ದವು. ಲಾಕ್​ಡೌನ್​ ನಂತರ ಕಾರ್ಖಾನೆಗಳು ಬಂದ್​ ಆಗಿರುವುದರಿಂದ ತ್ಯಾಜ್ಯ ನದಿ ನೀರು ಸೇರುತ್ತಿಲ್ಲ. ಹೀಗಾಗಿ ಅಮೊನಿಯಾ ಕಡಿಮೆಯಾಗಿದೆ ಎಂದು ರಾಘವ್​ ಹೇಳಿದ್ದಾರೆ.

    ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನೇಮಕ ಮಾಡಿದ ಯಮುನಾ ಮಾನಿಟರಿಂಗ್ ಸಮಿತಿ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಮತ್ತು ದೆಹಲಿ ಮಾಲಿನ್ಯ ನಿಯಂತ್ರಣ ಮಂಡಳಿಗೆ ಯಮುನಾ ನದಿ ನೀರಿನ ಗುಣಮಟ್ಟದ ಮೇಲೆ ಲಾಕ್​ಡೌನ್​ ಬೀರಿರುವ ಪರಿಣಾಮ ಪತ್ತೆ ಮಾಡುವಂತೆ ಸೂಚಿಸಿತ್ತು. ಹೀಗಾಗಿ ಯಮುನಾ ನದಿಯ ಹರಿಯುವ ವಿವಿಧ ಪ್ರದೇಶಗಳಲ್ಲಿ ನೀರು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ.

    ವಿವರವಾದ ವರದಿ ಲಭ್ಯವಾಗುತ್ತಲೇ ಅದನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ಸಲ್ಲಿಸಲಾಗುವುದು. ಈ ಬಗ್ಗೆ ಸಾರ್ವಜನಿಕರಿಗೂ ಮಾಹಿತಿ ನೀಡಲಾಗುವುದು ಎಂದರು.

    ಹರಿಯಾಣದಲ್ಲಿ ಹರಿಯುತ್ತಿರುವ ನದಿ ನೀರು ಕೂಡ ಸ್ವಚ್ಛವಾಗಿದೆ. ಸಾರ್ವಜನಿಕರು ನದಿ ನೀರಿನ ಗುಣಮಟ್ಟ ಹೆಚ್ಚಾಗಿರುವುದನ್ನು ಅರಿತು ವಿಡಿಯೋ ಹಾಗೂ ಫೋಟೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ ಮಾಡುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು. (ಏಜೆನ್ಸೀಸ್​)

    ಏಪ್ರಿಲ್​ 30ರವರೆಗೂ ಯಾವುದೇ ರೈಲು ಸಂಚಾರ ಇಲ್ಲ, ಮುಂಗಡ ಕಾಯ್ದಿರಿಸಿದವರಿಗೆ ಬರುತ್ತೆ ಸಂಪೂರ್ಣ ಹಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts