More

    ಜೆಎನ್​ಯು ಹಿಂಸಾಚಾರ| ಗೂಗಲ್​, ಆ್ಯಪಲ್​, ವಾಟ್ಸ್​ಆ್ಯಪ್​ ಸಂಸ್ಥೆಗಳಿಗೆ ದೆಹಲಿ ನ್ಯಾಯಾಲಯ ನೋಟಿಸ್​

    ನವದೆಹಲಿ: ಜೆಎನ್​ಯುನಲ್ಲಿ ಜನವರಿ 5ರಂದು ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಗೂಗಲ್​, ಆ್ಯಪಲ್​ ಮತ್ತು ವಾಟ್ಸ್​ಆ್ಯಪ್​ ಸಂಸ್ಥೆಗಳಿಗೆ ದೆಹಲಿ ನ್ಯಾಯಾಲಯ ನೋಟಿಸ್​ ನೀಡಿದೆ.

    ಜೆಎನ್​ಯುನ ಮೂವರು ಪ್ರಾಧ್ಯಾಪಕರು ಈ ಬಗ್ಗೆ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದು, ಅಂದಿನ ಘಟನೆಗಳ ಡೇಟಾವನ್ನು ಸೇವ್​ ಮಾಡಲು ಕೋರಿದ್ದರು. ಇದನ್ನು ಪರಿಗಣಿಸಿ ನ್ಯಾಯಾಲಯ ನೋಟಿಸ್​ ನೀಡಿದೆ.

    ಮೂವರು ಪ್ರಾಧ್ಯಾಪಕರು ಶುಕ್ರವಾರ ಸಿಸಿ ಕ್ಯಾಮರಾದ ವಿಡಿಯೋ ಮತ್ತು ಇತರ ಸಾಕ್ಷಿಗಳನ್ನು ಉಳಿಸಿಕೊಳ್ಳಬೇಕು ಎಂದು ಕೋರ್ಟ್​ ಮೆಟ್ಟಿಲೇರಿದ್ದರು.

    ಅಮೀತ್​ ಪರಮೇಶ್ವರನ್​, ಅತುಲ್​ ಸೂದ್​ ಮತ್ತು ಶುಕ್ಲ ವಿನಾಯಕ ಸಾವಂತ್​ ಎಂಬ ಪ್ರಾಧ್ಯಾಪಕರು ಅರ್ಜಿ ಸಲ್ಲಿಸಿ, ಅಲ್ಲಿ ಲಭ್ಯ ಇರುವ ಎಲ್ಲ ಸಾಕ್ಷ್ಯಗಳು ಮತ್ತು ವಾಟ್ಸ್​ಆ್ಯಪ್​ ಗ್ರೂಪ್​ಗಳಾದ “ಯುನಿಟಿ ಅಗೇನಿಸ್ಟ್​ ಲೆಫ್ಟ್​”, “ಫ್ರೆಂಡ್ಸ್​ ಆಫ್​ ಆರ್​ಎಸ್ಎಸ್’ ಸಂದೇಶ, ಫೊಟೋ, ವಿಡಿಯೋ, ಫೊನ್​ ನಂಬರ್​ಗಳನ್ನು ಸೇವ್​ ಮಾಡುವಂತೆ ಸೂಚಿಸಲು ಕೋರಿದ್ದರು.

    ಡೇಟಾ ಸೇವ್​ ಮಾಡುವಂತೆ ವಾಟ್ಸ್​ಆ್ಯಪ್​ಗೆ ಪತ್ರ ಬರೆಯಲಾಗಿದ್ದು, ಸಂಸ್ಥೆಯ ಉತ್ತರಕ್ಕಾಗಿ ಕಾಯಲಾಗುತ್ತಿದೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಕೋರ್ಟ್​ಗೆ ತಿಳಿಸಿದರು. ಹಾಗೂ ಸಿಸಿ ಟಿವಿಯ ವಿಡಿಯೋಗಳನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.

    ಜನವರಿ 5 ರಂದು ಜೆಎನ್​ಯು ವಿವಿ ಆವರಣಕ್ಕೆ ನುಗ್ಗಿದ ಮುಸುಕುಧಾರಿ ಗುಂಪು ವಿದ್ಯಾರ್ಥಿ ಮತ್ತು ಪ್ರಾಧ್ಯಾಪಕರ ಮೇಲೆ ಹಲ್ಲೆ ನಡೆಸಿತ್ತು. ಅಲ್ಲದೆ ಅಲ್ಲಿನ ಹಾಸ್ಟೆಲ್​ನ ಮೇಲೆ ಕಲ್ಲು ತೂರಾಟ ನಡೆಸಿತ್ತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts