More

    ಕಾಂಗ್ರೆಸ್​ ನಾಯಕ ಸಲ್ಮಾನ್​ ಖುರ್ಷಿದ್​ ಪುಸ್ತಕದ ನಿಷೇಧ ಕೋರಿದ್ದ ಅರ್ಜಿ ವಜಾ

    ನವದೆಹಲಿ: ಹಿಂದುತ್ವವನ್ನು ಉಗ್ರ ಸಂಘಟನೆಗಳ ಜಿಹಾದಿ ಇಸ್ಲಾಮಿಗೆ ಹೋಲಿಸಿ ಬರೆದಿದ್ದಾರೆನ್ನಲಾದ ಕಾಂಗ್ರೆಸ್​ ನಾಯಕ ಸಲ್ಮಾನ್​ ಖುರ್ಷಿದ್​ ಅವರ ಪುಸ್ತಕದ ಮೇಲೆ ನಿಷೇಧ ಹೇರಲು ದೆಹಲಿ ಹೈಕೋರ್ಟ್​ ನಿರಾಕರಿಸಿದೆ. ಖುರ್ಷಿದ್​​ರ ‘ಸನ್‌ರೈಸ್ ಓವರ್ ಅಯೋಧ್ಯ: ನೇಷನ್‌ಹುಡ್ ಇನ್ ಅವರ್ ಟೈಮ್ಸ್’ ಪುಸ್ತಕದ ಕೆಲವು ಅಂಶಗಳು ಒಂದು ವರ್ಗದ ಜನರ ಭಾವನೆಗಳಿಗೆ ಧಕ್ಕೆ ತರುವಂಥವು ಎಂದು ವಾದಿಸಿದ್ದ ರಿಟ್​ ಅರ್ಜಿಯೊಂದನ್ನು ನ್ಯಾಯಾಲಯ ವಜಾಗೊಳಿಸಿದೆ ಎಂದು ವರದಿ ತಿಳಿಸಿದೆ.

    ಹಿಂದುತ್ವದ ‘ರೋಬಸ್ಟ್​ ವರ್ಷನ್​’ ಐಸಿಸ್ ಮತ್ತು ಬೊಕೊ ಹರಾಮ್‌ನಂಥ ಭಯೋತ್ಪಾದಕ ಗುಂಪುಗಳ ಜಿಹಾದಿಸ್ಟ್ ಇಸ್ಲಾಂನಂತೆ ಎಂಬ ಹೇಳಿಕೆಯ ಮೂಲಕ ಮಾಜಿ ವಿದೇಶಾಂಗ ಸಚಿವ ಖುರ್ಷಿದ್​​ರ ಪುಸ್ತಕ ವಿವಾದ ಹುಟ್ಟುಹಾಕಿತ್ತು. ವಾಕ್​​ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಅನಿರ್ಬಂಧಿತವಲ್ಲ. ಯಾರಿಗೂ ಇನ್ನೊಬ್ಬರ ಭಾವನೆಗಳನ್ನು ನೋಯಿಸುವ ಹಕ್ಕಿರುವುದಿಲ್ಲ. ಆದ್ದರಿಂದ ಪುಸ್ತಕವನ್ನು ನಿಷೇಧಿಸಬೇಕು ಎಂದು ಅರ್ಜಿದಾರರು ಕೋರಿದ್ದರು ಎನ್ನಲಾಗಿದೆ.

    ಇದನ್ನೂ ಓದಿ: ಈ ಕನ್ನಡ ಸಿನಿಮಾವನ್ನು ನೀವು ನೋಡಲೆಬೇಕೆಂದರು ಸುಧಾಮೂರ್ತಿ, ಯಾವುದು ಆ ಸಿನಿಮಾ?

    ಅರ್ಜಿದಾರರು ಪುಸ್ತಕದ ಕೆಲವು ಅಂಶಗಳನ್ನು ಮಾತ್ರ ಪ್ರಸ್ತಾಪಿಸಿದ್ದು, ಇಡೀ ಪುಸ್ತಕವನ್ನು ನ್ಯಾಯಾಲಯದ ಮುಂದಿರಿಸಲಾಗಿಲ್ಲ. ಮೇಲಾಗಿ ಜನರಿಗೆ ಈ ಪುಸ್ತಕ ಚೆನ್ನಾಗಿಲ್ಲ; ನೀವು ಕೊಳ್ಳಬೇಡಿ, ಓದಬೇಡಿ ಎನ್ನುವ ಅವಕಾಶ ನಿಮಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು ಎಂದು ವರದಿ ಹೇಳಿದೆ. (ಏಜೆನ್ಸೀಸ್)

    ಈ ರಾಜ್ಯಕ್ಕಿದು 5ನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ! ಜೇವರ್​ ಏರ್​ಪೋರ್ಟ್​​ಗೆ ಶಿಲಾನ್ಯಾಸ

    ಸಿಖ್ಖರ ಬಗ್ಗೆ ನಾಲಿಗೆ ಹರಿಬಿಟ್ಟ ಕಂಗನಾಗೆ ದೆಹಲಿ ಬುಲಾವ್​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts