More

    ಮರ್ಕಜ್​ ಮಸೀದಿಯಲ್ಲಿ 50 ಜನಕ್ಕೆ ನಮಾಜ್ ಮಾಡಲು ಅವಕಾಶ : ಹೈಕೋರ್ಟ್

    ನವದೆಹಲಿ : ಬರುವ ರಮಜಾನ್ ಹಬ್ಬದ ಹಿನ್ನೆಲೆಯಲ್ಲಿ ದೆಹಲಿಯ ನಿಜಾಮುದ್ದೀನ್ ಮರ್ಕಜ್ ಮಸೀದಿಯಲ್ಲಿ 50 ಜನರಿಗೆ ದಿನಕ್ಕೆ 5 ಬಾರಿ ನಮಾಜ್ ಸಲ್ಲಿಸಲು ಅವಕಾಶ ನೀಡುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ. ಮಸೀದಿಯ ಮೊದಲನೇ ಮಹಡಿಯಲ್ಲಿ ನಿಗದಿತ ಸ್ಥಳಗಳಲ್ಲಿ ಸಾಮಾಜಿಕ ಅಂತರ ಪಾಲಿಸಿ ನಮಾಜ್ ಮಾಡಲು ಅನುಮತಿ ನೀಡುವಂತೆ ನಿಜಾಮುದ್ದೀನ್ ಪೊಲೀಸರಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.

    ರಮಜಾನ್ ತಿಂಗಳ ಆರಂಭದ ಹಿನ್ನೆಲೆಯಲ್ಲಿ ಮರ್ಕಜ್​ ಮಸೀದಿಯಲ್ಲಿ ನಮಾಜ್ ಮಾಡಲು ಅವಕಾಶ ನೀಡಬೇಕೆಂದು ದೆಹಲಿ ವಕ್ಫ್ ಬೋರ್ಡ್ ರಿಟ್ ಅರ್ಜಿ ಸಲ್ಲಿಸಿತ್ತು. ಕರೊನಾ ಹಿನ್ನೆಲೆಯಲ್ಲಿ ಡೆಲ್ಲಿ ಡಿಸಾಸ್ಟರ್ ಮ್ಯಾನೇಜ್​ಮೆಂಟ್ ಅಥಾರಿಟಿ (ಡಿಡಿಎಂಎ) ದೆಹಲಿ ನಗರದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಿಷೇಧಿಸಿರುವ ಕಾರಣ ಮರ್ಕಜ್ ಮಸೀದಿಯು ತೆರೆಯಲು ಅವಕಾಶ ನೀಡುವಂತಿಲ್ಲ ಎಂದು ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸ್ ಅರ್ಜಿಯನ್ನು ವಿರೋಧಿಸಿದ್ದವು.

    ಇದನ್ನೂ ಓದಿ: ಹೆಚ್ಚುತ್ತಿರುವ ಕರೊನಾ: ಪಶ್ಚಿಮ ಬಂಗಾಳ ಚುನಾವಣೆ ಬಗ್ಗೆ ಮಹತ್ವದ ಆದೇಶ ಹೊರಡಿಸಿದ ಚುನಾವಣಾ ಆಯೋಗ

    ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಮುಕ್ತ ಗುಪ್ತ, ಡಿಡಿಎಂಎ ಸಾರ್ವಜನಿಕರಿಗೆ ಧಾರ್ಮಿಕ ಸ್ಥಳಗಳನ್ನು ಮುಚ್ಚುವ ಯಾವುದೇ ಆದೇಶ ಹೊರಡಿಸಿಲ್ಲವಾದ್ದರಿಂದ ನಿಜಾಮುದ್ದೀನ್ ಪ್ರದೇಶದಲ್ಲಿರುವ ಅಲಾಮಿ ಮರ್ಕಜ್ ಬಂಗ್ಲೇವಾಲಿ ಮಸೀದಿಯಲ್ಲಿ ನಮಾಜ್ ಮಾಡಲು ಅವಕಾಶ ನೀಡಬಹುದು ಎಂದು ಅಭಿಪ್ರಾಯಪಟ್ಟರು. ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಿ 50 ಜನರಿಗೆ ಮಾತ್ರ ನಮಾಜ್ ಮಾಡುವುದಕ್ಕೆ ಅವಕಾಶ ನೀಡಲು ಆದೇಶಿಸಿದರು.

    ಮಸೀದಿಯ ಇನ್ನೂ ಮೂರು ಮಹಡಿಗಳಲ್ಲಿಯೂ ನಮಾಜ್​​ಗೆ ಅವಕಾಶ ಕೋರಿದ ಅರ್ಜಿದಾರರ ಅಹವಾಲನ್ನು ತಿರಸ್ಕರಿಸಿದ ಕೋರ್ಟ್, ಮಸೀದಿಯಲ್ಲಿ ನಮಾಜ್ ಮಾಡುವುದು ಅವಶ್ಯಕ. ಆದರೆ ಜನರ ಸುರಕ್ಷತೆಯನ್ನೂ ಕಾಪಾಡಬೇಕಾದ್ದರಿಂದ ಹೆಚ್ಚಿನ ಜನರಿಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದಿತು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts