More

    ವಿದೇಶಿ ನೆರವು ಬಾಕ್ಸ್​ಗಳಲ್ಲಿ ಕೂತು ಜಂಕ್​ ಆಗಲು ಬಂದಿಲ್ಲ : ದೆಹಲಿ ಹೈಕೋರ್ಟ್​

    ನವದೆಹಲಿ: ವೈದ್ಯಕೀಯ ಸಲಕರಣೆಗಳ ವಿದೇಶಿ ನೆರವು ಕರೊನಾದಿಂದ ಬಳಲುತ್ತಿರುವ ಜನರ ಅನುಕೂಲಕ್ಕಾಗಿ ಇರುವುದು, ಯಾವುದೋ ಸಂಸ್ಥೆಯ ಪೆಟ್ಟಿಗೆಗಳಲ್ಲಿ ಕೂತು ‘ಜಂಕ್’ ಆಗಲು ಬಂದಿಲ್ಲ ಎಂದು ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿದೆ.

    ದೆಹಲಿಯ ಕರೊನಾ ಚಿಕಿತ್ಸಾ ಸೌಲಭ್ಯಗಳ ಬಗ್ಗೆ ನಡೆಯುತ್ತಿರುವ ವಿಚಾರಣೆಯಲ್ಲಿ ಅಮಿಕಸ್​ ಕ್ಯೂರಿ ಆಗಿರುವ ಹಿರಿಯ ವಕೀಲ ರಾಜಶೇಖರ್ ರಾವ್, ವಿದೇಶದಿಂದ ಸಹಾಯಾರ್ಥವಾಗಿ ಬಂದಿರುವ ವೈದ್ಯಕೀಯ ಉಪಕರಣಗಳ ವಿತರಣೆಯ ಬಗ್ಗೆ ಇಂದು ಕಳವಳ ವ್ಯಕ್ತಪಡಿಸಿದರು. ನಗರದ ಲೇಡಿ ಹಾರ್ಡಿಂಜ್ ಮೆಡಿಕಲ್ ಕಾಲೇಜಿಗೆ ಅಗತ್ಯವಿಲ್ಲದಿದ್ದರೂ 260 ಆಕ್ಸಿಜನ್ ಕಾನ್ಸಂಟ್ರೇಟರ್​ಗಳು ತಲುಪಿವೆ ಎಂದು ತಿಳಿಸಿದ ಅವರು, ಈ ರೀತಿಯಾಗಿ ಒಟ್ಟುರಾಶಿ ವಿತರಣೆ ನಡೆದರೆ ಅಗತ್ಯ ಇರುವವರಿಗೆ ತಲುಪುವುದಿಲ್ಲ ಎಂದರು.

    ಇದನ್ನೂ ಓದಿ: ಇನ್ನೂ ಬರಲಿದೆಯಂತೆ ಕರೊನಾ 3ನೇ ಅಲೆ ! ಸರ್ಕಾರದ ವೈಜ್ಞಾನಿಕ ಸಲಹೆಗಾರರ ಎಚ್ಚರಿಕೆ

    ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ರೇಖಾ ಪಲ್ಲಿ ಅವರ ನ್ಯಾಯಪೀಠವು ಕೇಂದ್ರ ಸರ್ಕಾರಕ್ಕೆ ವಿವಿಧ ಆಸ್ಪತ್ರೆಗಳಿಗೆ ವಿದೇಶಿ ನೆರವನ್ನು ವಿತರಿಸುವುದಕ್ಕೆ ಸಂಬಂಧಿಸಿದಂತೆ ಯಾವ ವಿಧಾನ ಅನುಸರಿಸಲಾಗುತ್ತಿದೆ ಎಂದು ವಿವರಣೆ ಕೇಳಿತು. ಸಾರ್ವಜನಿಕರಿಗೆ ಸ್ವಯಂ ಸೇವೆಯಲ್ಲಿ ತೊಡಗಿರುವ ಗುರುದ್ವಾರಗಳು ಮತ್ತು ಎನ್​ಜಿಒಗಳಿಗೆ ಈ ಉಪಕರಣಗಳನ್ನು ವಿತರಿಸುವ ಬಗ್ಗೆ ಚಿಂತಿಸಲು ಸಲಹೆ ನೀಡಿತು.

    “ವಿದೇಶಿ ಸಹಾಯ ಬಂದಿರುವುದು ಜನರಿಗಾಗಿ. ಅವರಿಗೆ ಅತ್ಯಂತ ಅಗತ್ಯವಿರುವೆಡೆ ಲಭ್ಯವಾಗದೆ ಯಾವುದೋ ಸಂಸ್ಥೆಯಲ್ಲಿ ಬಾಕ್ಸ್​ಗಳಲ್ಲಿ ತುಂಬಿ ಬಿದ್ದಿದ್ದರೆ ಏನೂ ಪ್ರಯೋಜನವಿಲ್ಲ” ಎಂದು ನ್ಯಾಯಪೀಠ ಹೇಳಿತು. ವಿದೇಶಿ ನೆರವನ್ನು ವಿತರಿಸುವುದಕ್ಕೆ ಪಾಲಿಸುತ್ತಿರುವ ಎಸ್​ಒಪಿ ಬಗ್ಗೆ ಮಾಹಿತಿ ಒದಗಿಸುವುದಾಗಿ ಸರ್ಕಾರ ತಿಳಿಸಿತು. (ಏಜೆನ್ಸಿಸ್)

    ಕರೊನಾ ಪೀಡಿತ ತಂದೆಗೆ ನೀರು ಕುಡಿಸಲು ಸೆಣಸಾಡಿದ ಮಗಳು ! ಮನ ಕಲಕುವ ವಿಡಿಯೋ

    ಸಿಕ್ಕಿದ್ದಕ್ಕಿಂತ ಹೆಚ್ಚು ಡೋಸ್ ಲಸಿಕೆ ನೀಡಿತು ಈ ರಾಜ್ಯ! ನರ್ಸ್​ಗಳ ಕಾರ್ಯಕ್ಷಮತೆಯನ್ನು ಹೊಗಳಿದ ಸಿಎಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts