More

    ನಮ್ಮ ಆಸ್ಪತ್ರೆಗಳಿಗೆ ಹೊರಟ ಆಕ್ಸಿಜನ್ಅನ್ನು ದೆಹಲಿ ಸರ್ಕಾರ ಕದ್ದಿದೆ : ಹರಿಯಾಣ ಸಚಿವರ ಆರೋಪ

    ಫರೀದಾಬಾದ್ : ಹಲವಾರು ರಾಜ್ಯಗಳಲ್ಲಿ ಹೆಚ್ಚುತ್ತಿರುವ ಕರೊನಾ ಪ್ರಕರಣಗಳು ಮತ್ತು ಔಷಧೀಯ ಆಮ್ಲಜನಕದ ಕೊರತೆಯ ಮಧ್ಯೆ, ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಅವರು, ದೆಹಲಿ ಸರ್ಕಾರವು ಹರಿಯಾಣದ ಫರಿದಾಬಾದ್ ಆಸ್ಪತ್ರೆಗಳಿಗೆ ಬರುತ್ತಿರುವ ಟ್ಯಾಂಕರ್‌ನಿಂದ ಆಮ್ಲಜನಕವನ್ನು ಕದ್ದಿದೆ ಎಂದು ಆರೋಪಿಸಿದ್ದಾರೆ. ಮುಂದೆ ಇಂತಹ ಘಟನೆಗಳನ್ನು ತಪ್ಪಿಸಲು, ತಮ್ಮ ರಾಜ್ಯಕ್ಕೆ ತೆರಳುವ ಎಲ್ಲಾ ಆಮ್ಲಜನಕ ಟ್ಯಾಂಕರ್‌ಗಳಿಗೆ ಹರಿಯಾಣ ಪೊಲೀಸ್ ಪಡೆಯ ಬೆಂಗಾವಲು ನೀಡುವಂತೆ ವಿಜ್ ಸೂಚನೆಗಳನ್ನು ನೀಡಿದ್ದಾರೆ ಎನ್ನಲಾಗಿದೆ.

    ದೇಶದ ರಾಜಧಾನಿ ದೆಹಲಿಯಲ್ಲಿ ಹೆಚ್ಚುತ್ತಿರುವ ಕರೊನಾ ರೋಗಿಗಳ ಶುಶ್ರೂಷೆಗಾಗಿ ಹೆಚ್ಚಿನ ಆಕ್ಸಿಜನ್​ ಪೂರೈಕೆ ಮಾಡಬೇಕೆಂದು ದೆಹಲಿ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಾ ಬಂದಿದೆ. ಇದೀಗ ಸರಣಿ ಟ್ವೀಟ್​ಗಳಲ್ಲಿ, ವಿಜ್​ ಅವರು, ಫರೀದಾಬಾದ್​​ನ ಆಸ್ಪತ್ರೆಗಳಿಗೆ ಹೊರಟಿದ್ದ ಆಕ್ಸಿಜನ್ ಟ್ಯಾಂಕರ್​ಅನ್ನು ಮಂಗಳವಾರ ದೆಹಲಿಯಲ್ಲಿ ನಿಲ್ಲಿಸಿ, ಆಕ್ಸಿಜನ್ ತೆಗೆದುಕೊಂಡಿರುವ ಘಟನೆ ನಡೆದಿದೆ ಎಂದು ಆರೋಪಿಸಿದ್ದಾರೆ.

    ಇದನ್ನೂ ಓದಿ: ಆಂಬ್ಯುಲೆನ್ಸ್ ಮಾದರಿಯಲ್ಲಿ ಆಕ್ಸಿಜನ್ ಟ್ಯಾಂಕರ್​​ಗಳ ಸುಗಮ ಸಂಚಾರ; ಆಮ್ಲಜನಕ ಸ್ಥಾವರ ಸ್ಥಾಪನೆ

    “ಫರೀದಾಬಾದ್​ನ ಕೆಲವು ಆಸ್ಪತ್ರೆಗಳಿಗೆ ಆಕ್ಸಿಜನ್ ವಿತರಿಸಲು ಹೊರಟಿದ್ದ ಟ್ಯಾಂಕರ್​ಅನ್ನು ನಿನ್ನೆ ದೆಹಲಿಯಲ್ಲಿ ದೆಹಲಿ ಸರ್ಕಾರದ ಕೆಲವು ಜನ ನಿಲ್ಲಿಸಿರುವುದು ನನ್ನ ಗಮನಕ್ಕೆ ಬಂದಿದೆ. ಸರ್ಕಾರಗಳು ಬಲವಂತವಾಗಿ ಈ ರೀತಿ ಆಕ್ಸಿಜನ್ಅನ್ನು ತೆಗೆದುಕೊಳ್ಳಲು ಆರಂಭಿಸಿದರೆ ಅರಾಜಕತೆಗೆ ಕಾರಣವಾಗುತ್ತದೆ. ಇದು ತುಂಬಾ ಖಂಡನಾರ್ಹ” ಎಂದಿದ್ದಾರೆ.

    “ಸದ್ಯಕ್ಕೆ ಹರಿಯಾಣದಲ್ಲಿ ಆಕ್ಸಿಜನ್ ಪೂರೈಕೆ ಸಾಕಷ್ಟಿದೆ. ಹರಿಯಾಣದ ಪ್ಲಾಂಟ್​ಗಳಲ್ಲಿ 270 ಎಂಟಿ ಆಕ್ಸಿಜನ್ ಉತ್ಪಾದನೆಯಾಗುತ್ತಿದ್ದರೆ ನಮ್ಮ ಇಂದಿನ ಬಳಕೆ 60 ಎಂಟಿ ಇದೆ. ನಮಗೆ ದೆಹಲಿಗೆ ಆಕ್ಸಿಜನ್ ಪೂರೈಸಬೇಕೆಂಬ ಒತ್ತಡ ಇದೆ. ಆದರೆ ನಾವು ಮೊದಲು ನಮ್ಮ ರಾಜ್ಯದ ಅಗತ್ಯ ಈಡೇರುವುದನ್ನು ಖಾತ್ರಿಪಡಿಸಿಕೊಂಡು ನಂತರ ಹೆಚ್ಚಿನದನ್ನು ಬೇರೆ ರಾಜ್ಯಗಳಿಗೆ ಕಳುಹಿಸಲು ಇಚ್ಛಿಸುತ್ತೇವೆ. ಈಗಾಗಲೇ ರಾಜಸ್ತಾನದಿಂದ ನಮಗೆ ಸರಬರಾಜು ಮಾಡುತ್ತಿದ್ದ ಆಕ್ಸಿಜನ್​ ಪೂರೈಕೆ ನಿಂತಿದೆ. ಹಿಮಾಚಲ್ ಪ್ರದೇಶವು ಹರಿಯಾಣಕ್ಕೆ ಆಕ್ಸಿಜನ್ ಕಳುಹಿಸುತ್ತಿತ್ತು, ಅದನ್ನು ನಿನ್ನೆ ದೆಹಲಿಯಲ್ಲಿ ತಡೆದಿದ್ದಾರೆ” ಎಂದು ವಿಜ್​ ವಿವರಿಸಿದ್ದಾರೆ. (ಏಜೆನ್ಸೀಸ್)

    ದೇವಸ್ಥಾನದಲ್ಲಿ ಸಿಕ್ಕಿತು ಪೂಜಾರಿಗಳ ತಲೆ ಕಡಿದ ದೇಹ ! ಬೆಚ್ಚಿಬೀಳಿಸುತ್ತೆ ಈ ಘಟನೆ

    ಆಕ್ಸಿಜನ್ ಕೊರತೆ ನೀಗಿಸಲು ಟಾಟಾ ಸಹಾಯ ಹಸ್ತ ! 24 ಕ್ರಯೋಜೆನಿಕ್ ಕಂಟೇನರ್​ಗಳ ಆಮದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts