More

    ದೆಹಲಿಯಲ್ಲಿ ಡೆಂಗ್ಯೂ ಪ್ರಕರಣಗಳ ಏರಿಕೆ!; 5 ವರ್ಷಗಳಲ್ಲಿ ಇದೇ ಅಧಿಕ ಎಂದ ಸರ್ಕಾರ

    ನವದೆಹಲಿ: ಜುಲೈ 22 ರವರೆಗೆ ದೆಹಲಿಯಲ್ಲಿ ಒಟ್ಟು ಡೆಂಗ್ಯೂ ಪ್ರಕರಣಗಳ ಸಂಖ್ಯೆ 187ಕ್ಕೆ ತಲುಪಿದ್ದು, 5 ವರ್ಷಗಳಲ್ಲಿ ಇದೇ ಅತ್ಯಧಿಕ. ಹಾಗಾಗಿ ಶಾಲೆಗಳಲ್ಲಿ ಮತ್ತು ಸಾಮಾನ್ಯ ಜನರಲ್ಲಿ ರೋಗದ ಕುರಿತು ಅಭಿಯಾನಗಳನ್ನು ನಡೆಸಲು ಈಗಾಗಲೇ ದೆಹಲಿ ಸರ್ಕಾರ ಅಧಿಕಾರಿಗಳಿಗೆ ವಿಶೇಷ ಸೂಚನೆ ನೀಡಿದೆ ಎಂದು ಆರೋಗ್ಯ ಸಚಿವ ಸೌರಭ್ ಭಾರದ್ವಾಜ್ ಹೇಳಿದ್ದಾರೆ.

    ಇದನ್ನೂ ಓದಿ: ಶವದ ಸಹಿತ ಪಲ್ಟಿಯಾದ ಆ್ಯಂಬುಲೆನ್ಸ್; ಬೆಂಗಳೂರಿನಿಂದ ಕಲಬುರಗಿಗೆ ಹೋಗುತ್ತಿದ್ದಾಗ ಅಪಘಾತ 

    ಶಾಲೆಗಳಲ್ಲಿ ಮತ್ತು ಸಾಮಾನ್ಯ ಜನರಲ್ಲಿ ಡೆಂಗ್ಯೂ ವೈರಸ್​​ ಬಗ್ಗೆ ಅಭಿಯಾನ ನಡೆಸಲು ನಾವು ಆರೋಗ್ಯ ಇಲಾಖೆ ಮತ್ತು ಡಿಐಪಿಗೆ ವಿಶೇಷ ಸೂಚನೆ ನೀಡಿದ್ದೇವೆ. ಡೆಂಗ್ಯೂ ಪ್ರಕರಣಗಳಿಗೆ ಆಸ್ಪತ್ರೆಗಳಲ್ಲಿ ಬೆಡ್​ ವ್ಯವಸ್ಥೆಗಳನ್ನು ಕೂಡ ಮಾಡಿಕೊಳ್ಳಲಾಗುತ್ತಿದೆ. ನಾನು ಇಂದು ಎಂಸಿಡಿ ಕಮಿಷನರ್ ಅವರೊಂದಿಗೆ ಈ ಕುರಿತು ಚರ್ಚೆ ನಡೆಸಿದ್ದೇನೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.

    ಭಾರೀ ಮಳೆಯಿಂದ ದೆಹಲಿಯಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾದ ಬಳಿಕ ಡೆಂಗ್ಯೂ ವೈರಸ್​​ ಉಲ್ಬಣಗೊಂಡಿದೆ ಎಂದು ಹೇಳಲಾಗಿದೆ,(ಏಜೆನ್ಸೀಸ್).

    ಒಂದೂವರೆ ತಿಂಗಳಲ್ಲಿ 3 ಕೋಟಿ ರೂ. ನಿವ್ವಳ ಲಾಭ ಗಳಿಸಿದ ರೈತ ದಂಪತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts