More

    ಆಕ್ಸಿಜನ್ ಅಗತ್ಯವನ್ನು ನಾಲ್ಕು ಪಟ್ಟು ಹೆಚ್ಚಿಸಿ ಹೇಳಿತ್ತು ದೆಹಲಿ ಸರ್ಕಾರ! ಸುಪ್ರೀಂ ಕೋರ್ಟ್​ ತಂಡ ಬಯಲು ಮಾಡಿದೆ ಸತ್ಯ!

    ನವದೆಹಲಿ : ಕರೊನಾ ಎರಡನೇ ಅಲೆಯು ತಾರಕಕ್ಕೇರಿದ ಸಮಯದಲ್ಲಿ ದೆಹಲಿಯಲ್ಲಿ ಮೆಡಿಕಲ್ ಆಕ್ಸಿಜನ್​ಗೆ ಹಾಹಾಕಾರ ಎದ್ದಿತ್ತು. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​ ಅವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಇತರ ರಾಜ್ಯಗಳಿಂದ ಕೂಡ ಆಕ್ಸಿಜನ್ ಪೂರೈಕೆ ಪಡೆದರು. ಆದರೆ, ದೆಹಲಿ ಸರ್ಕಾರ ಅಗತ್ಯವಿದ್ದ ಪ್ರಮಾಣಕ್ಕಿಂತ ನಾಲ್ಕು ಪಟ್ಟು ಹೆಚ್ಚು ಬೇಡಿಕೆಯನ್ನು ತೋರಿಸಿತ್ತು ಎಂದು ಇದೀಗ ಸುಪ್ರೀಂ ಕೋರ್ಟ್​ ತಂಡವೊಂದು ವರದಿ ನೀಡಿದೆ. ದೆಹಲಿ ಆಸ್ಪತ್ರೆಗಳು ಒದಗಿಸಿದ ಮಾಹಿತಿಗಳಲ್ಲಿ ಲೋಪದೋಷಗಳಿವೆ ಎಂದು ಬೆಟ್ಟುಮಾಡಿದೆ.

    ದೆಹಲಿ ಸರ್ಕಾರವು ಆಕ್ಸಿಜನ್ ಅಗತ್ಯವನ್ನು ನಾಲ್ಕು ಪಟ್ಟಷ್ಟು ಉತ್ಪ್ರೇಕ್ಷೆ ಮಾಡಿ ಹೇಳಿದೆ. “ಬೆಡ್​ ಫಾರ್ಮುಲ ಪ್ರಕಾರ ಲೆಕ್ಕ ಮಾಡಲಾದ ಬಳಕೆ 289 ಎಂಟಿ ಮಾತ್ರ ಇದ್ದರೆ, ಸರ್ಕಾರದ ಬೇಡಿಕೆ ನಾಲ್ಕು ಪಟ್ಟು ಹೆಚ್ಚು ಅಂದರೆ 1,140 ಮೆಟ್ರಿಕ್​ ಟನ್​ಗಳಷ್ಟು ಇತ್ತು. ಆಕ್ಸಿಜನ್​ನ ಈ ಹೆಚ್ಚುವರಿ ಪೂರೈಕೆಯು ಆಕ್ಸಿಜನ್​ ಅಗತ್ಯವಿದ್ದ ಇತರ ರಾಜ್ಯಗಳಿಗೆ ತೊಂದರೆ ಉಂಟುಮಾಡಿತು” ಎಂದು ಸುಪ್ರೀಂ ಕೋರ್ಟ್​ ಪಾನೆಲ್​ನ ಮಧ್ಯಂತರ ವರದಿ ತಿಳಿಸಿದೆ.

    ಇದನ್ನೂ ಓದಿ: ಲವರ್‌ ಜತೆ ಓಡಿಹೋಗಿದ್ದಕ್ಕೆ ಜೈ ಎಂದ ಕೋರ್ಟ್‌- ಆದೇಶ ಕೇಳಿ ಸುಸ್ತಾದ ಗುಟ್ಕಾಪ್ರಿಯ ಪತಿ!

    ದೆಹಲಿಯ ಸರಾಸರಿ ಆಕ್ಸಿಜನ್​ ಬಳಕೆಯು 284 ರಿಂದ 372 ಎಂ.ಟಿ.ಗಳಷ್ಟಿತ್ತು. ಆದರೆ, ಕಡಿಮೆ ಬೆಡ್​ಗಳಿದ್ದರೂ ಕೂಡ ದೆಹಲಿಯ ನಾಲ್ಕು ಆಸ್ಪತ್ರೆಗಳು ಅತ್ಯಧಿಕ ಆಕ್ಸಿಜನ್ ಬಳಕೆಯನ್ನು ತೋರಿಸಿವೆ. ದ ಸಿಂಘಾಲ್ ಹಾಸ್ಪಿಟಲ್, ಅರುಣ ಆಸಿಫ್ ಅಲಿ ಹಾಸ್ಪಿಟಲ್, ಇಸಿಐಸಿ ಮಾಡೆಲ್ ಹಾಸ್ಪಿಟಲ್ ಮತ್ತು ಲೈಫ್​ರೇ ಹಾಸ್ಪಿಟಲ್​ – ಈ ನಾಲ್ಕು ಕಡಿಮೆ ಬೆಡ್​​ಗಳ ಆಸ್ಪತ್ರೆಗಳು ಹೆಚ್ಚು ಬಳಕೆ ತೋರಿ ತಪ್ಪು ಮಾಹಿತಿ ನೀಡಿದ್ದವು. ಇದರಿಂದಾಗಿ ದೆಹಲಿಯ ಆಕ್ಸಿಜನ್​ ಅಗತ್ಯವು ಉತ್ಪ್ರೇಕ್ಷೆ ಮಾಡಲ್ಪಟ್ಟಿತು ಎಂದು ವರದಿ ಹೇಳಿದೆ. (ಏಜೆನ್ಸೀಸ್)

    VIDEO | ಬಿಜೆಪಿಯಿಂದ ಟಿಎಂಸಿ ಸೇರಿದವರಿಗೆ ಸ್ಯಾನಿಟೈಸರ್ ಸಿಂಪಡಿಸಿ ‘ಶುದ್ಧೀಕರಣ’!

    ಟ್ವಿಟರ್ ಇಂಡಿಯ ಎಂಡಿಗೆ ಕರ್ನಾಟಕ ಹೈಕೋರ್ಟ್​ ರಿಲೀಫ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts