More

    ರೈತರ ಸಮಸ್ಯೆ ಬಗೆಹರಿಸುವಲ್ಲಿ ಸರ್ಕಾರ ವಿಫಲ

    ಸಾಗರ: ದೆಹಲಿಯಲ್ಲಿ ಒಂದು ತಿಂಗಳಿನಿಂದ ರೈತರು ಕೃಷಿ ಮತ್ತು ಎಪಿಎಂಸಿ ಕಾಯ್ದೆ ತಿದ್ದುಪಡಿ ಖಂಡಿಸಿ ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆಗೆ ಬೆಂಬಲಿಸಿ ಸಾಗರದಲ್ಲಿ ವಿವಿಧ ಸಂಘಟನೆಗಳು ಎಸಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಿದವು.

    ಸಾಮಾಜಿಕ ಕಾರ್ಯಕರ್ತ ಶಿವಾನಂದ ಕುಗ್ವೆ ಮಾತನಾಡಿ, ಆಳುವ ಸರ್ಕಾರಗಳು ರೈತರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಈತನಕ ಸಫಲತೆ ಕಾಣದಿರುವುದು ಖಂಡನೀಯ. ಕೇಂದ್ರ ಸರ್ಕಾರದ ಕಾಯ್ದೆ ತಿದ್ದುಪಡಿ ನೀತಿಯಿಂದ ಸಣ್ಣ ಮತ್ತು ಅತಿಸಣ್ಣ ರೈತರು ತೀವ್ರ ಸಂಕಷ್ಟಕ್ಕೆ ಒಳಾಗುತ್ತಾರೆ. ರೈತರ ಕೃಷಿಭೂಮಿ ಬಂಡವಾಳಶಾಹಿಗಳು, ಕೈಗಾರಿಕೋದ್ಯಮಿಗಳ ಕೈಗೆ ಹೋಗುತ್ತದೆ ಎಂದರು

    ರೈತರು ಕಾಯ್ದೆ ತಿದ್ದುಪಡಿ ಕೈಬಿಡುವಂತೆ ಒತ್ತಾಯ ಮಾಡಿದರೂ ಕೇಂದ್ರ ಸರ್ಕಾರ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಈ ಹಿನ್ನೆಲೆಯಲ್ಲಿ ರೈತರ ಹೋರಾಟ ಬೆಂಬಲಿಸಿ ಅನಿರ್ದಿಷ್ಠಾವಧಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

    ಹೋರಾಟಗಾರ ವಾಮದೇವ ಗೌಡ ಮಾತನಾಡಿ, ಇಡೀ ದೇಶದ ರೈತರು ಕೃಷಿ, ಎಪಿಎಂಸಿ ಮತ್ತು ಕಾರ್ವಿುಕ ಕಾಯ್ದೆ ತಿದ್ದುಪಡಿ ವಿರುದ್ಧವಿದ್ದಾರೆ. ಆದರೆ ನಮ್ಮನ್ನಾಳುವ ಸರ್ಕಾಗಳು ಸುಗ್ರೀವಾಜ್ಞೆ ಮೂಲಕ ಕಾಯ್ದೆ ಜಾರಿಗೆ ತರಲು ಮುಂದಾಗಿರುವ ನೀತಿ ಅವೈಜ್ಞಾನಿಕ. ತಕ್ಷಣ ಕಾಯ್ದೆ ತಿದ್ದುಪಡಿ ನಿರ್ಧಾರ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

    ರೈತ ಸಂಘದ ಎನ್.ಡಿ.ವಸಂತಕುಮಾರ್, ಕಾಂಗ್ರೆಸ್ ಪ್ರಮುಖ ಮಹಮ್ಮದ್ ಖಾಸಿಂ, ಪ್ರಮುಖರಾದ ರಾಮಣ್ಣ ಹಸಲರು, ವೈ.ಎನ್.ಹುಬ್ಬಳ್ಳಿ, ರವಿ ಜಂಬಗಾರು, ಹೊಯ್ಸಳ ಗಣಪತಿಯಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts