More

    ದೆಹಲಿ ಚುನಾವಣೆ: ದೇಶದ ಇತರೆ ಭಾಗದಲ್ಲಿರುವ ದೆಹಲಿ ಮತದಾರರಿಗೆ ಸ್ಪೈಸ್​ಜೆಟ್​ ನೀಡಲಿದೆ ಉಚಿತ ಟಿಕೆಟ್​

    ನವದೆಹಲಿ: ಮುಂಬರುವ ದೆಹಲಿ ವಿಧಾನಸಭೆ ಚುನಾವಣೆಗೆ ಸ್ಪೈಸ್​ಜೆಟ್​ ವಿಮಾನ ಸಂಸ್ಥೆಯು ವಿನೂತನ ಕಾರ್ಯಕ್ಕೆ ಮುಂದಾಗಿದ್ದು, ಮತದಾನ ಮಾಡಲು ತವರಿಗೆ ಆಗಮಿಸುವ ಮತದಾರರಿಗೆ ಉಚಿತ ಟಿಕೆಟ್​ ನೀಡುವುದಾಗಿ ಆಫರ್​ ನೀಡಿದೆ.

    ನಮ್ಮ ಶ್ರೇಷ್ಠ ಪ್ರಜಾಪ್ರಭುತ್ವದಲ್ಲಿ ನಮ್ಮ ಹಕ್ಕನ್ನು ಚಲಾಯಿಸಲು ಯಾವುದೇ ಅಡ್ಡಿಗಳು ಇರಬಾರದೆಂಬ ವಿನೂತನ ಕಲ್ಪನೆಯೊಂದಿಗೆ ಸ್ಪೈಸ್​​ ಡೆಮಾಕ್ರೆಸಿ (#SpiceDemocracy) ಎಂಬ ಹ್ಯಾಶ್​ಟ್ಯಾಗ್​ನೊಂದಿಗೆ ವಿಮಾನ ಸಂಸ್ಥೆಯು ಜಾಗೃತಿ ಕಾರ್ಯಕ್ಕೆ ಮುಂದಾಗಿದೆ. ನೀವು ದೆಹಲಿ ಮತದಾರರಾಗಿದ್ದರೆ ಸ್ಪೈಸ್​ಜೆಟ್​ ನೀಡಿರುವ ವೆಬ್​ಸೈಟ್​ ಲಿಂಕ್​ನಲ್ಲಿ ನಿಮ್ಮ ಮಾಹಿತಿಯನ್ನು ನೋಂದಾಯಿಸಿಕೊಂಡು ಉಚಿತ ಟಿಕೆಟ್​ ಪಡೆದುಕೊಳ್ಳಬಹುದಾಗಿದೆ ಎಂದು ಸ್ಪೈಸ್​ಜೆಟ್​ ಟ್ವೀಟ್​ ಮೂಲಕ ತಿಳಿಸಿದೆ.

    ಜನವರಿ 31ರಿಂದ ನೋಂದಣಿ ಕಾರ್ಯವನ್ನು ಆರಂಭಿಸಲಾಗಿದ್ದು, ಫೆ. 5ಕ್ಕೆ ಕೊನೆಯಾಗಲಿದೆ. ಅದಕ್ಕೂ ಮುನ್ನ ನೀವು ನೋಂದಣಿ ಮಾಡಿಕೊಂಡರೆ ಉಚಿತವಾಗಿ ವಿಮಾನ ಹಾರಾಟ ನಡೆಸುವ ಜತೆಗೆ ಪ್ರಜಾಪ್ರಭುತ್ವ ಹಕ್ಕನ್ನು ಚಲಾಯಿಸುವ ಡಬಲ್​ ಅವಕಾಶ ನಿಮ್ಮದಾಗಲಿದೆ.

    ಈ ಬಗ್ಗೆ ತಿಳಿಸಿರುವ ಸ್ಪೈಸ್​ಜೆಟ್​ ವಿಮಾನ ಸಂಸ್ಥೆಯ ಚೇರ್ಮನ್​​ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್​ ಅಜಯ್​ ಸಿಂಗ್​, ಮತದಾನ ನಮ್ಮ ಪ್ರಜಾಪ್ರಭುತ್ವದ ಅಂಗವಾಗಿದೆ. ದುರಾದೃಷ್ಟವಶಾತ್​ ಅನೇಕರು ಉದ್ಯೋಗದಿಂದಾಗಿ ಸ್ವಂತ ಮನೆಯನ್ನು ಬಿಟ್ಟು ಬೇರೆಡೆ ಜೀವನ ಸಾಗಿಸುತ್ತಿರುತ್ತಾರೆ. ಅಂತಹವರು ಮತದಾನದಲ್ಲಿ ಪಾಲ್ಗೊಳ್ಳಲು ಕೆಲವೊಮ್ಮೆ ಸಾಧ್ಯವಾಗುವುದಿಲ್ಲ. ಆದರೆ, ಸ್ಪೈಸ್​ಜೆಟ್​ ಈ ಬಾರಿ ಒಂದು ವಿಭಿನ್ನ ಅವಕಾಶವನ್ನು ನೀಡಿದೆ. ಭಾರತದ ಯಾವುದೇ ಮೂಲೆಯಿಂದ ನೀವು ದೆಹಲಿಗೆ ಆಗಮಿಸಬಹುದು. ಟಿಕೆಟ್​ ಅನ್ನು ನಾವು ನೀಡಲಿದ್ದೇವೆ. ಈ ಮೂಲಕ ಸ್ಪೈಸ್​ಜೆಟ್​ ಬಲವಾದ ಭಾರತೀಯ ಪ್ರಜಾಪ್ರಭುತ್ವವನ್ನು ನಿರ್ಮಾಣ ಮಾಡಲು ಸಹಕಾರಿಯಾಗಲಿದೆ ಎಂದು ಭಾವಿಸಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts