More

    ಶುಗರ್​ ಲೆವೆಲ್ ಹೆಚ್ಚಿಸಿಕೊಳ್ಳಲು ಮಾವಿನಹಣ್ಣು, ಸ್ವೀಟ್ಸ್​ ಸೇವಿಸ್ತಿದ್ದಾರೆ! ಇದು ಜಾಮೀನಿಗಾಗಿ ಗಾಳ ಎಂದ ಇಡಿ

    ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಮ್ಮ ದೇಹದ ಸಕ್ಕರೆ ಪ್ರಮಾಣ ಹೆಚ್ಚಿಸಿಕೊಳ್ಳಲು ಮಾವಿನಹಣ್ಣು, ಸಿಹಿತಿಂಡಿಗಳು ಸೇರಿದಂತೆ ಚಹಾವನ್ನು ನಿರಂತರವಾಗಿ ಸೇವಿಸುತ್ತಿದ್ದಾರೆ. ಇದರಿಂದ ತಮ್ಮ ಶುಗರ್​ ಲೆವಲ್​ ಹೆಚ್ಚು ಮಾಡಿಕೊಂಡು, ತದನಂತರ ಅನಾರೋಗ್ಯದ ಕಾರಣ ಮುಂದಿಟ್ಟು ಜಾಮೀನು ಪಡೆಯಲು ಷಡ್ಯಂತ್ರ ರೂಪಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಇಂದು ದೆಹಲಿ ನ್ಯಾಯಾಲಯಕ್ಕೆ ತಿಳಿಸಿದೆ.

    ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾಮೀನು ಪಡೆಯುವ ಸಲುವಾಗಿ ಕೇಜ್ರಿವಾಲ್ ತಮ್ಮ ದೇಹದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಬಯಸಿದ್ದು, ಹೀಗಾಗಿ ಮಾವಿನಹಣ್ಣು, ಸ್ವೀಟ್ಸ್​ ಸೇರಿದಂತೆ ಟೀ ಸೇವನೆಯನ್ನು ಹೆಚ್ಚಾಗಿ ಮಾಡುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯದ ವಿಶೇಷ ವಕೀಲ ಜೊಹೆಬ್ ಹೊಸೈನ್ ವಿಶೇಷ ನ್ಯಾಯಾಧೀಶ ಕಾವೇರಿ ಬವೇಜಾಗೆ ತಿಳಿಸಿದರು.

    ವರ್ಚುವಲ್ ಕಾನ್ಫರೆನ್ಸಿಂಗ್ ಮೂಲಕ ಜೈಲಿನಲ್ಲಿರುವ ತಮ್ಮ ಸಾಮಾನ್ಯ ವೈದ್ಯರನ್ನು ಸಂಪರ್ಕಿಸಲು ಅನುಮತಿ ಕೋರಿ ಕೇಜ್ರಿವಾಲ್ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ಅವರ ರಕ್ತದಲ್ಲಿನ ಸಕ್ಕರೆಯ ಮಟ್ಟವು ಏರುಪೇರಾಗುತ್ತಿದೆ ಮತ್ತು ಆದ್ದರಿಂದ, ಅವರು ತಮ್ಮ ನಿಯಮಿತ ವೈದ್ಯರನ್ನು ಸಂಪರ್ಕಿಸಲು ಬಯಸುತ್ತಾರೆ ಎಂದು ಅವರು ಹೇಳಿದ್ದಾರೆ. ಆರಂಭದಲ್ಲಿ ಕೇಜ್ರಿವಾಲ್ ಪರ ವಾದ ಮಂಡಿಸಿದ ವಕೀಲ ವಿವೇಕ್ ಜೈನ್, ಬೇರೆ ಅರ್ಜಿ ಸಲ್ಲಿಸಲು ಈ ಅರ್ಜಿಯನ್ನು ಹಿಂಪಡೆಯಲಾಗುತ್ತಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.

    ಇದಾದ ಬಳಿಕ ಅರ್ಜಿಯಲ್ಲಿ ಕೇಜ್ರಿವಾಲ್​ರ ಮಧುಮೇಹದ ಮಟ್ಟದಲ್ಲಿ ಆತಂಕಕಾರಿ ಹೆಚ್ಚಳ ಕಂಡುಬಂದಿದೆ ಎಂಬ ವಿಷಯದ ಬಗ್ಗೆ ಇಡಿ ಕಾಳಜಿ ವಹಿಸಿದೆ ಎಂದು ಜೊಹೆಬ್ ಹೇಳಿದರು. “ನಾವು ಜೈಲು ಅಧಿಕಾರಿಗಳಿಗೆ ಪತ್ರ ಬರೆದಿದ್ದೇವೆ ಮತ್ತು ಅವರು ತೆಗೆದುಕೊಳ್ಳುತ್ತಿರುವ ಡಯಟ್ ಚಾರ್ಟ್ ಮತ್ತು ಔಷಧಿಗಳು ಯಾವುವು ಎಂದು ಕೇಳಿದ್ದೇವೆ. ಏಪ್ರಿಲ್ 01ರಂದು ಅರವಿಂದ್ ಕೇಜ್ರಿವಾಲ್ ಮನೆಯಲ್ಲಿ ಬೇಯಿಸಿದ ಆಹಾರವನ್ನು ಸೇವಿಸಲು ಅನುಮತಿಸಿದ್ದನ್ನು ದಯವಿಟ್ಟು ಗಮನಿಸಿ. ಅವರು ಹೆಚ್ಚಿನ ಮಧುಮೇಹವಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಮಾವಿನಹಣ್ಣು, ಸಿಹಿತಿಂಡಿಗಳು ಮತ್ತು ಸಕ್ಕರೆ ಚಹಾವನ್ನು ಸೇವಿಸುತ್ತಿದ್ದಾರೆ. ಇದೆಲ್ಲಾ ಜಾಮೀನು ಪಡೆಯಲು ಮಾಡಿರುವ ಗಾಳ” ಎಂದು ಜೊಹೆಬ್ ಹೇಳಿದ್ದಾರೆ.

    ಸದ್ಯ ನ್ಯಾಯಾಲಯವು ಅರ್ಜಿಯನ್ನು ವಿಲೇವಾರಿಗೊಳಿಸಿದ್ದು, ನಾಳೆಗೆ ವಿಷಯವನ್ನು ಮುಂದೂಡಿದೆ. ಕೇಜ್ರಿವಾಲ್ ಅವರ ಆಹಾರ ಸೇರಿದಂತೆ ವೈದ್ಯಕೀಯ ವರದಿಯನ್ನು ಸಲ್ಲಿಸುವಂತೆ ತಿಹಾರ್ ಜೈಲಿನ ಅಧಿಕಾರಿಗಳಿಗೆ ಕೋರ್ಟ್​ ಸೂಚಿಸಿದೆ. ನಾಳೆ ಮಧ್ಯಾಹ್ನ 2 ಗಂಟೆಗೆ ಈ ಪ್ರಕರಣದ ವಿಚಾರಣೆ ನಡೆಯಲಿದೆ,(ಏಜೆನ್ಸೀಸ್).

    4 ಗಂಟೆಗಳ ಕಾಲ ಅವರಿಬ್ಬರು ಹೀಗೆ ಇದ್ರು! ಅದನ್ನು ನೋಡಿ… ಪ್ರಯಾಣಿಕ ಹರಿಬಿಟ್ಟ ದೃಶ್ಯ ನೋಡಿ ದಂಗಾದ ನೆಟ್ಟಿಗರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts