More

    ರಾಮಮಂದಿರ ಭೂಮಿಪೂಜೆ ವೀಕ್ಷಿಸಲು ದೆಹಲಿಯಾದ್ಯಂತ ಎಲ್​ಇಡಿ ಸ್ಕ್ರೀನ್​ಗಳ ಅಳವಡಿಕೆಗೆ ಮುಂದಾದ ಬಿಜೆಪಿ

    ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಭೂಮಿ ಪೂಜೆ ದಿನ ಹತ್ತಿರ ಆಗುತ್ತಿದ್ದು, ಭರ್ಜರಿ ಸಿದ್ಧತೆಯೂ ನಡೆಯುತ್ತಿದೆ.

    ಕರೊನಾ ಸೋಂಕಿನ ಪ್ರಮಾಣ ಹೆಚ್ಚಾಗಿದ್ದರಿಂದ ಭೂಮಿಪೂಜೆಗೆ ದಯವಿಟ್ಟು ಆಗಮಿಸಬೇಡಿ. ನಿಮ್ಮ ಮನೆಯ ಟಿವಿಗಳಲ್ಲೇ ಕಾರ್ಯಕ್ರಮ ನೋಡಿ. ಅಂದು ಸಂಜೆ ದೀಪ ಬೆಳಗಿ ಎಂದು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ ಮನವಿ ಮಾಡಿದೆ. ದೇಶದ ವಿವಿಧೆಡೆಯಿಂದ ರಾಮನ ಭಕ್ತರು ಅಂದು ಅಯೋಧ್ಯೆಗೆ ಹೋಗುವುದನ್ನು ತಪ್ಪಿಸುವುದು ಹೇಗೆಂಬ ಆತಂಕವೂ ಕಾಡುತ್ತಿದೆ.
    ಈ ಮಧ್ಯೆ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ನಗರದಾದ್ಯಂತ ಅಲ್ಲಲ್ಲಿ ಎಲ್​ಇಡಿ ಸ್ಕ್ರೀನ್​ಗಳನ್ನು ಅಳವಡಿಸಲು ಬಿಜೆಪಿ ನಿರ್ಧರಿಸಿದೆ. ಇದರಿಂದ ದೆಹಲಿ ಜನರು ರಾಮಮಂದಿರ ಭೂಮಿ ಪೂಜೆ ಸಮಾರಂಭವನ್ನು ಎಲ್​ಇಡಿಯ ದೊಡ್ಡ ಪರದೆಯ ಮೇಲೆ ವೀಕ್ಷಿಸಬಹುದಾಗಿದೆ.

    ಬಿಜೆಪಿ ಅಧ್ಯಕ್ಷ ಆದೇಶ್​ ಕುಮಾರ್ ಗುಪ್ತಾ ಇಂದು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆಗಸ್ಟ್​ 5ರಂದು ನಡೆಯಲಿರುವ ಭೂಮಿ ಪೂಜೆ ಒಂದು ಐತಿಹಾಸಿಕ ಸಮಾರಂಭ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರೂ ಪಾಲ್ಗೊಳ್ಳಲಿದ್ದಾರೆ. ಈ ಸಮಾರಂಭವನ್ನು ಜನರು ಇಲ್ಲಿಂದಲೇ ನೇರ ಪ್ರಸಾರದಲ್ಲಿ ಕಣ್ತುಂಬಿಕೊಳ್ಳಲು ಬಿಜೆಪಿಯಿಂದ ವ್ಯವಸ್ಥೆ ಮಾಡಲಾಗುವುದು. 70 ವಿಧಾನಸಭಾ ಕ್ಷೇತ್ರಗಳಲ್ಲಿ ಮುಖಂಡರು, ಕಾರ್ಯಕರ್ತರೆಲ್ಲ ಒಟ್ಟಾಗಿ, ದೊಡ್ಡದೊಡ್ಡ ಎಲ್​ಇಡಿ ಸ್ಕ್ರೀನ್​ಗಳನ್ನು ಅಳವಡಿಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪಂಜಾಬ್​​ನಲ್ಲಿ ಮಾರುಕಟ್ಟೆಗೆ ಬಂತು ಹೊಸ ಇಮ್ಯೂನಿಟಿ ಬೂಸ್ಟರ್​ ಹಾಲು…!

    ಅಷ್ಟೇ ಅಲ್ಲ, ಆಗಸ್ಟ್​ 5ರಂದು ಸಂಜೆ ಪ್ರತಿಯೊಬ್ಬ ಬಿಜೆಪಿ ಮುಖಂಡ, ಕಾರ್ಯಕರ್ತನ ಮನೆಯಲ್ಲೂ ದೀಪ ಬೆಳಗಲಾಗುವುದು ಎಂದು ಹೇಳಿದ್ದಾರೆ.

    ರಾಮಮಂದಿರ ಭೂಮಿ ಪೂಜೆಯನ್ನು ನಾವು ದೀಪಾವಳಿಯಂತೆ ಆಚರಿಸುತ್ತೇವೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ರಾಜೇಶ್​ ಭಾಟಿಯಾ ತಿಳಿಸಿದ್ದಾರೆ. (ಏಜೆನ್ಸೀಸ್​)

    ಈದ್ಗಾ ಮೈದಾನದಲ್ಲಿ ಬೇಡ…ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿ: ತೆಲಂಗಾಣ ವಕ್ಫ್​ ಮಂಡಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts