blank

ಫೇಸ್​ಬುಕ್​ ಖಾತೆ ರದ್ದುಗೊಳಿಸಿ, ಇಲ್ಲವೇ ಸೇನೆಯಿಂದ ಹೊರನಡಿಯಿರಿ!

blank

ನವದೆಹಲಿ: ಇಲ್ಲ ನಿಮ್ಮ ಫೇಸ್​ಬುಕ್​ ಖಾತೆಯನ್ನು ಡಿಲೀಟ್​ ಮಾಡಿ. ಇಲ್ಲವೇ ಭಾರತೀಯ ಸೇನಾಪಡೆಯ ಹುದ್ದೆಗೆ ರಾಜೀನಾಮೆ ನೀಡಿ ಮನೆಗೆ ಹೋಗಿ ಎಂದು ಭಾರತೀಯ ಸೇನಾಪಡೆಯ ಹಿರಿಯ ಅಧಿಕಾರಿಯೊಬ್ಬರಿಗೆ ದೆಹಲಿ ಹೈಕೋರ್ಟ್​ ತಾಕೀತು ಮಾಡಿದೆ.

ಫೇಸ್​ಬುಕ್​ ಮತ್ತು ಇನ್​ಸ್ಟಾಗ್ರಾಂ ಸೇರಿ ಸಾಮಾಜಿಕ ಜಾಲತಾಣದ ಎಲ್ಲ ಖಾತೆಗಳನ್ನು ಡಿಲೀಟ್​ ಮಾಡುವುದನ್ನು ಎಲ್ಲ ಅಧಿಕಾರಿಗಳು ಮತ್ತು ಯೋಧರಿಗೆ ಕಡ್ಡಾಯಗೊಳಿಸಿ ಭಾರತೀಯ ಸೇನಾಪಡೆ ಆದೇಶ ಹೊರಡಿಸಿದೆ. iದನ್ನು ಪ್ರಶ್ನಿಸಿ ಲೆಫ್ಟಿನೆಂಟ್​ ಕರ್ನಲ್​ ಪಿ.ಕೆ. ಚೌಧರಿ ಎಂಬುವರು ಸೇನಾಪಡೆಯ ಈ ನಿರ್ಧಾರದ ವಿರುದ್ಧ ಮಧ್ಯಂತರ ತಡೆಕೋರಿ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ಫೇಸ್​ಬುಕ್​ ಮತ್ತು ಇನ್​ಸ್ಟಾಗ್ರಾಂ ಸೇರಿ ಸಾಮಾಜಿಕ ಜಾಲತಾಣದ ಖಾತೆಗಳನ್ನು ರದ್ದುಗೊಳಿಸುವುದರಿಂದ ತಾವು ಇದುವರೆಗೂ ಸಾಧಿಸಿರುವ ಸಂಪರ್ಕ ಮತ್ತು ಗಳಸಿರುವ ಗೆಳೆತನಗಳೆಲ್ಲವೂ ಕೈತಪ್ಪಿ ಹೋಗುತ್ತದೆ. ಮತ್ತೆ ಇವನ್ನು ಪಡೆದುಕೊಳ್ಳಬೇಕು ಎಂದರೆ ತುಂಬಾ ಕಷ್ಟವಾಗುತ್ತದೆ. ಆದ್ದರಿಂದ ಫೇಸ್​ಬುಕ್​ ಖಾತೆಯನ್ನು ಹೊಂದಿರಲು ಅವಕಾಶ ಮಾಡಿಕೊಡುವಂತೆ ಭಾರತೀಯ ಸೇನಾಪಡೆಗೆ ಸೂಚಿಸುವಂತೆ ಅರ್ಜಿಯಲ್ಲಿ ಅವರು ಮನವಿ ಮಾಡಿಕೊಂಡಿದ್ದರು.

ಇದನ್ನೂ ಓದಿ: ರಾಜ್ಯರಾಜಧಾನಿಯಲ್ಲಿ ಪೊಲೀಸರ ಜತೆ ಕೆಲಸ ಮಾಡುವಾಸೆಯೆ?- ಇಲ್ಲಿದೆ ಅವಕಾಶ!

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ರಾಜೀವ್​ ಸಹಾಯ್​ ಮತ್ತು ಆಶಾ ಮೆನನ್​ ಅವರಿದ್ದ ನ್ಯಾಯಪೀಠ, ರಾಷ್ಟ್ರದ ಭದ್ರತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸೇನೆಯ ಎಲ್ಲ ಸಿಬ್ಬಂದಿಗೂ ಅನ್ವಯವಾಗುವಂತೆ ಫೇಸ್​ಬುಕ್​ ಖಾತೆಗಳನ್ನು ರದ್ದುಗೊಳಿಸಬೇಕೆಂಬ ಕಡ್ಡಾಯ ನಿಯಮವನ್ನು ಭಾರತೀಯ ಸೇನಾಪಡೆ ಜಾರಿಗೊಳಿಸಿದೆ. ಆದ್ದರಿಂದ, ಫೇಸ್​ಬುಕ್​ ಖಾತೆಯನ್ನು ಹೊಂದಿರುವುದು ಇಲ್ಲವೇ ಸೇನಾಪಡೆಯ ಹುದ್ದೆಯಲ್ಲಿ ಮುಂದುವರಿಯವುದು, ಎರಡರಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ಲೆ.ಕ. ಪಿ.ಕೆ. ಚೌಧರಿ ಅವರಿಗೆ ಸೂಚನೆ ನೀಡಿತು.​

ಜೂನ್​ 6ರಂದು ಹೊಸ ಸಾಮಾಜಿಕ ಜಾಲತಾಣ ನೀತಿಯನ್ನು ಜಾರಿಗೊಳಿಸಿರುವ ಭಾರತೀಯ ಸೇನಾಪಡೆ, ಫೇಸ್​ಬುಕ್​ ಮತ್ತು ಇನ್​ಸ್ಟಾಗ್ರಾಂ ಸೇರಿ 87 ಸಾಮಾಜಿಕ ಜಾಲತಾಣಗಳಲ್ಲಿನ ಖಾತೆಗಳನ್ನು ರದ್ದುಗೊಳಿಸುವುದನ್ನು ಕಡ್ಡಾಯಗೊಳಿಸಿದೆ. ಅಧಿಕಾರಿಗಳು ಮತ್ತು ಯೋಧರು ಸೇರಿ ಎಲ್ಲರಿಗೂ ಈ ನಿಯಮ ಅನ್ವಯವಾಗುತ್ತದೆ.

ಮದುವೆ ನಿರಾಕರಿಸಿದಕ್ಕೆ ಕುಪಿತನಾಗಿ ಪ್ರೇಯಸಿಯನ್ನು ಇರಿದು ಕೊಂದೇ ಬಿಟ್ಟ!

Share This Article

ಮಗು ಜನಿಸಿದ ಎಷ್ಟು ತಿಂಗಳ ಬಳಿಕ ಉಪ್ಪಿನ ಆಹಾರ ನೀಡಬೇಕು?; ತಜ್ಞರು ಹೇಳೊದೇನು? | Salty Food

Salty Food : ಹುಟ್ಟಿದ ಮಗುವನ್ನು ದೊಡ್ಡದಾಗಿ ಬೆಳೆಯುವವರಿಗೂ ನೋಡಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಬಟ್ಟೆ…

ಸನ್‌ಸ್ಕ್ರೀನ್, ಸೀರಮ್‌ಗಳನ್ನು ಬಳಸುತ್ತೀರಾ? ಹಾಗಿದ್ರೆ ಕ್ಯಾನ್ಸರ್​​ ಬರಬಹುದು ಎಚ್ಚರ! Glow Skin

Glow Skin | ನಮ್ಮ ಸ್ಕಿನ್​ ಗ್ಲೋ ಆಗಿ ಕಾಣಬೇಕೆಂದು ಮಹಿಳೆಯರು ಮಾಡುವ ಪ್ರಯತ್ನ ಒಂದೆರಡಲ್ಲ.…

ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಕಾಲಿನಿಂದ ತುಳಿಯಬೇಡಿ!  ನೀವು ಖಂಡಿತವಾಗಿಯೂ ಆರ್ಥಿಕ ತೊಂದರೆಗೆ ಸಿಲುಕುವಿರಿ.. Vasthu Tips

Vasthu Tips: ಹಿರಿಯರು ಹೇಳಿದ್ದನ್ನು  ಅನೇಕ ಜನರು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ನಾವು ಕೆಲವು ವಸ್ತುಗಳನ್ನು ದೇವರು…