More

    ಯೋಧನ ಪುತ್ಥಳಿ ಸ್ಥಾಪನೆ ವಿಳಂಬ

    ಗೌಡಪ್ಪ ಬನ್ನೆ ಶಿಗ್ಗಾಂವಿ

    ತಾಲೂಕಿನ ಮುಗಳಿ ಗ್ರಾಮದ ಹುತಾತ್ಮ ಯೋಧ ಚಂದ್ರು ಡವಗಿ ಅವರ ಸ್ಮಾರಕ ನಿರ್ವಣವಾಗಿದ್ದು, ಪುತ್ಥಳಿ ಸ್ಥಾಪನೆಗೆ ಇನ್ನೆಷ್ಟು ದಿನ ಕಾಯಬೇಕು ಎಂದು ಗ್ರಾಮಸ್ಥರು, ಕುಟುಂಬಸ್ಥರು ಪ್ರಶ್ನಿಸುತ್ತಿದ್ದಾರೆ.

    2002ರಲ್ಲಿ ವೆಲ್ಲಿಂಗ್ಟನ್​ನಲ್ಲಿರುವ ಮದ್ರಾಸ್ ರೆಜಿಮೆಂಟ್ ಸೆಂಟರ್ ಮೂಲಕ ಸೇವೆ ಆರಂಭಿಸಿದ್ದ ಚಂದ್ರು ಡವಗಿ ಅವರು, ಕೋಲ್ಕತಾದ ಡೆರಕ್​ಪುರ, ಜಮ್ಮು ಮತ್ತು ಕಾಶ್ಮೀರದ ಕುಪ್ವಾಡ್, ಗುಜರಾತ್​ನ ಜಾಮನಗರ, ಆಸ್ಸಾಂನ ತೇಜಪುರ, ಆಂಧ್ರಪ್ರದೇಶದ ಹೈದರಾಬಾದ್ ಸೇರಿ ಒಟ್ಟು 14 ವರ್ಷ ಸೇವೆ ಸಲ್ಲಿಸಿದ್ದರು. ಬಳಿಕ, 2018ರ ಫೆಬ್ರವರಿ 2ರಂದು ಅರುಣಾಚಲ ಪ್ರದೇಶದ ಪೆಂಗಾ ಎಂಬಲ್ಲಿ ಸಂಭವಿಸಿದ ಅವಘಡದಲ್ಲಿ ಯೋಧ ಚಂದ್ರು ಡವಗಿ ಹುತಾತ್ಮರಾಗಿದ್ದರು. ಲ್ಯಾನ್ಸ್ ನಾಯಕ ಹುದ್ದೆಯಲ್ಲಿದ್ದ ಅವರ ಅಂತ್ಯಕ್ರಿಯೆ 2018ರ ಫೆಬ್ರವರಿ 5ರಂದು ಮುಗಳಿ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಗಿತ್ತು. ಇದಕ್ಕೂ ಮುನ್ನ ನಡೆದ ಯೋಧನ ಪಾರ್ಥಿವ ಶರೀರದ ಮೆರವಣಿಗೆಯಲ್ಲಿ ಅಂದು ಸಚಿವ ಬಸವರಾಜ ಬೊಮ್ಮಾಯಿ ಅವರು ಪಾಲ್ಗೊಂಡು ಶಿಗ್ಗಾಂವಿಯಿಂದ ಮುಗಳಿ ಗ್ರಾಮದವರೆಗೆ ನಾಲ್ಕು ಕಿ.ಮೀ ಕಾಲ್ನಡಿಗೆಯೇ ಬಂದಿದ್ದರು. ಸಾವಿರಾರು ಸಂಖ್ಯೆಯಲ್ಲಿ ಜನ ನೆರೆದಿದ್ದರು. ಹುತಾತ್ಮ ಯೋಧನ ಸಮಾಧಿ, ಸ್ಮಾರಕ ನಿರ್ವಣಕ್ಕೆ ಖುದ್ದು ಆಸಕ್ತಿ ವಹಿಸಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ, ನಿರ್ವಿುತಿ ಕೇಂದ್ರದ ಮೂಲಕ ಕಾಮಗಾರಿ ಚುರುಕುಗೊಳಿಸಿದ್ದಾರೆ. ಆದರೆ, ಅಧಿಕಾರಿಗಳು ಪುತ್ಥಳಿ ಸ್ಥಾಪಿಸಲು ವಿಳಂಬ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಅಸಮಾಧಾನಗೊಂಡಿದ್ದಾರೆ.

    ಯೋಧ ಚಂದ್ರು ಡವಗಿ ಹುತಾತ್ಮರಾಗಿ ಮೂರು ವರ್ಷ ಗತಿಸಿದೆ. ಹುತಾತ್ಮರಾಗಿರುವ ಸ್ಥಳ ಅರುಣಾಚಲ ಪ್ರದೇಶದ ಪೆಂಗಾದಲ್ಲಿ ಕೇವಲ ಆರು ತಿಂಗಳು ಅವಧಿಯಲ್ಲಿ ಸ್ಮಾರಕ ನಿರ್ವಣಗೊಂಡಿದೆ. ಆದರೆ, ತವರು ನೆಲದಲ್ಲಿ ಇನ್ನೂ ಸ್ಮಾರಕ ಕಾಮಗಾರಿ ಮಂದಗತಿಯಲ್ಲಿ ಸಾಗಿರುವುದು ಬೇಸರದ ಸಂಗತಿ.

    ನನ್ನ ಮಗ ತೀರಿಕೊಂಡು ಮೂರು ವರ್ಷವಾಯಿತು. ಪುತ್ಥಳಿ ಇನ್ನೂ ಬಂದಿಲ್ಲ. ಈ ಕುರಿತು ಗ್ರಾಮಸ್ಥರು ಅಧಿಕಾರಿಗಳ ಗಮನ ಸೆಳೆಯಬೇಕಿದೆ.

    | ಬಸಪ್ಪ ಡವಗಿ, ಹುತಾತ್ಮ ಚಂದ್ರು ಡವಗಿ ತಂದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts