More

    ಎಸ್​ಎಸ್​ಎಲ್​ಸಿ ಪಾಸಾಗದಿದ್ದರೂ ಸಿಗುತ್ತೆ ಐಟಿಐ ಕೋರ್ಸ್​ಗಳಿಗೆ ಪ್ರವೇಶ, ಸ್ವತಃ ಸಿಎಂ ನೀಡಿದ ಭರವಸೆಯಿದು

    ಚಂಡಿಗಢ್​: ಕರ್ನಾಟಕದಲ್ಲಿ ಪ್ರತಿವರ್ಷ ಜೂನ್​ಗೆ ನೂತನ ಶೈಕ್ಷಣಿಕ ವರ್ಷಾರಂಭವಾಗುತ್ತದೆ. ಆದರೆ ಹಲವು ರಾಜ್ಯಗಳಲ್ಲಿ ಏಪ್ರಿಲ್​ನಲ್ಲಿಯೇ ಶಾಲೆಗಳು ಮರು ಆರಂಭವಾಗುತ್ತವೆ.

    ಅಂದರೆ, ಈಗಾಗಲೇ ಪರೀಕ್ಷೆಗಳು ನಡೆದು ಫಲಿತಾಂಶಗಳು ಪ್ರಕಟವಾಗಿ ಶಾಲಾ- ಕಾಲೇಜುಗಳು ಕಾರ್ಯಾರಂಭಿಸಬೇಕಿತ್ತು. ಆದರೆ, ಕರೊನಾದಿಂದಾಗಿ ದೇಶದ ಬಹುತೇಕ ರಾಜ್ಯಗಳಲ್ಲಿ 10ನೇ ಹಾಗೂ 12ನೇ ತರಗತಿ ಪರೀಕ್ಷೆಗಳೇ ನಡೆದಿಲ್ಲ. ಹೀಗಾಗಿ ಕಾಲೇಜು ಹಾಗೂ ಇತರ ಕೋರ್ಸ್​ಗಳ ಪ್ರವೇಶಕ್ಕೆ ತೊಂದರೆಯಾಗಿದೆ.

    ಹರಿಯಾಣದಲ್ಲಿ ಮಾರ್ಚ್​ 18ರಂದು ಪರೀಕ್ಷೆಯನ್ನು ಮುಂದೂಡಿ, ಮಾರ್ಚ್​ 19ರಿಂದ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
    ಏಪ್ರಿಲ್​ 1ರಿಂದಲೇ ಆರಂಭವಾಗಬೇಕಿದ್ದ, ಶಾಲೆ-ಕಾಲೇಜುಗಳು ಇನ್ನೂ ಶುರುವಾಗದಿರುವುದು ವಿದ್ಯಾರ್ಥಿಗಳ ಹಾಗೂ ಪಾಲಕರ ಚಿಂತೆಗೆ ಕಾರಣವಾಗಿವೆ. ಈ ಕಾರಣದಿಂದಾಗಿ ರಾಜ್ಯದ ಜನರನ್ನುದ್ದೇಶಿಸಿ ಸಿಎಂ ಮನೋಹರ್​ ಲಾಲ್​ ಖಟ್ಟರ್​ ಮಾತನಾಡಿದ್ದಾರೆ. ವಿದ್ಯಾರ್ಥಿಗಳ ಹಿತ ಕಾಯವುದಾಗಿ ಭರವಸೆ ನೀಡಿದ್ದಾರೆ. ಸದ್ಯದ ಲಾಕ್​ಡೌನ್​ ಅವಧಿಯಲ್ಲಿ ಹೆಚ್ಚಿನ ಸಮಯವನ್ನು ಅಧ್ಯಯನದಲ್ಲಿ ತೊಡಗಿಕೊಳ್ಳುವಂತೆ ಮನವಿ ಮಾಡಿದ್ದಾರೆ.

    ವಿದ್ಯಾರ್ಥಿಗಳಿಗಾಗಿ ಈಗಾಗಲೇ ದೂರದರ್ಶನದ ಮೂಲಕ ಪಾಠಗಳನ್ನು ಬಿತ್ತರಿಸಲಾಗುತ್ತಿದೆ. ಕೇಬಲ್​ ಹಾಗೂ ಸ್ಥಳೀಯ ವಾಹಿನಿಗಳನ್ನು ಈ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿದೆ. 52 ಲಕ್ಷ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ.
    ಹಿಂದಿನ ಶೈಕ್ಷಣಿಕ ಸಾಧನೆ ಹಾಗೂ ಮಾರ್ಚ್​ 18ರವರೆಗೆ ನಡೆದ ಪರೀಕ್ಷೆಗಳ ಆಧಾರದಲ್ಲಿ 1-9ನೇ ತರಗತಿ ವರೆಗಿನ ಮಕ್ಕಳನ್ನು ಮುಂದಿನ ತರಗತಿಗಳಿಗೆ ಬಡ್ತಿ ನೀಡಲು ಸರ್ಕಾರ ಈಗಾಗಲೇ ಆದೇಶ ನೀಡಿದೆ. ಆದರೆ, 10ನೇ ತರಗತಿ ಪರೀಕ್ಷೆಗಳು ನಡೆಯದ ಕಾರಣ ಪಿಯು ಕಾಲೇಜುಗಳಿಗೆ ಪ್ರವೇಶ ಶುರುವಾಗಿಲ್ಲ.

    ಪ್ರತಿವರ್ಷ 60-70 ಸಾವಿರ ಮಕ್ಕಳು 10ನೇ ತರಗತಿ ನಂತರ ಐಟಿಐ ಕೋರ್ಸ್​ಗಳಿಗೆ ಪ್ರವೇಶ ಪಡೆಯುತ್ತಾರೆ. ಜುಲೈ ವೇಳೆಗಾಗಲೇ ಪ್ರವೇಶ ಮುಗಿದು ಆಗಸ್ಟ್​ ಹೊತ್ತಿಗೆ ತರಗತಿಗಳು ಆರಂಭವಾಗುತ್ತಿದ್ದವು. ಒಟ್ಟು 83 ಟ್ರೇಡ್​ಗಳಿದ್ದು, ಆ ಪೈಕಿ 30-35 ಟ್ರೇಡ್​ಗಳಿಗೆ 10ನೇ ತರಗತಿಯಲ್ಲಿ ಗಣಿತ ಹಾಗೂ ಸೈನ್ಸ್​ ವಿಷಯಗಳನ್ನು ಉತ್ತೀರ್ಣರಾಗುವುದು ಕಡ್ಡಾಯವಾಗಿದೆ. ಒಂದು ವೇಳೆ ಈ ವಿಷಯಗಳ ಪರೀಕ್ಷೆ ನಡೆಸುವುದು ವಿಳಂಬವಾದಲ್ಲಿ ಆ ವಿಷಯಗಳಿಗೆ ಹಾಜರಾಗದೇ ಐಟಿಐಗೆ ಪ್ರಾತಿನಿಧಿಕ ಪ್ರವೇಶ ಕಲ್ಪಿಸಲು ಸರ್ಕಾರ ಚಿಂತನೆ ನಡೆಸಿದಿದೆ ಎಂದು ಖಟ್ಟರ್​ ಹೇಳಿದ್ದಾರೆ.

    ಈ ನಿಟ್ಟಿನಲ್ಲಿ ಅಂತಿಮ ನಿರ್ಧಾರವನ್ನು ಕೂಡಲೇ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.
    ಒಂದು ವೇಳೆ ರಾಜ್ಯದಲ್ಲೂ ಎಸ್​ಎಸ್​ಎಲ್​ಸಿ ಪರೀಕ್ಷೆ ವಿಳಂಬವಾದರೆ ಇಂಥದ್ದೇ ನಿರ್ಧಾರ ಕೈಗೊಳ್ಳಲಾಗುತ್ತದೆಯೇ ಎಂಬ ಕುತೂಹಲ ಮೂಡಿದೆ.
    ಶುಲ್ಕ ವಿನಾಯ್ತಿ ನೀಡಿ: ಖಾಸಗಿ ಶಾಲೆಗಳು ಮೂರು ತಿಂಗಳ ಬದಲಾಗಿ ಒಂದು ತಿಂಗಳ ಶುಲ್ಕ ಪಡೆಯಲಿ ಜತೆಗೆ, ಸಾರಿಗೆ ವೆಚ್ಚ ವಿಧಿಸದಂತೆಯೂ ಸೂಚಿಸಿದ್ದಾರೆ.

    ಲಾಕ್​​ಡೌನ್​ ಆಗಿ ಮನೆಯಲ್ಲಿದ್ದವರಿಗೆ ನಿಮ್ಮೂರಲ್ಲೇ ಉದ್ಯೋಗಾವಕಾಶ ಎಲ್ಲ ಜಿಲ್ಲೆಗಳಲ್ಲೂ ಬೇಕಾಗಿದ್ದಾರೆ ತಾಂತ್ರಿಕ ಸಹಾಯಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts