More

    ಗೋಕರ್ಣದ ಮಠಗಳಲ್ಲಿ ದೇವತಾ ಆರಾಧನೆ 22ರಂದು

    ಗೋಕರ್ಣ: ಜ.22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮನ ಪ್ರಾಣಪ್ರತಿಷ್ಠೆ ನಿಮಿತ್ತ ಇಲ್ಲಿನ ಉಪಾಧಿವಂತರ ಸಂಘ, ಶ್ರೀಕೃಷ್ಣ ವೇದ ಪ್ರತಿಷ್ಠಾನ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಮುಖರು ಶ್ರೀರಘೂತ್ತಮ ಮಠ ಸಭಾಂಗಣದಲ್ಲಿ ಸಭೆ ನಡೆಸಿದರು.

    ಅಂದು ಬೆಳಗ್ಗೆ 15ಕ್ಕೂ ಅಧಿಕ ಇಲ್ಲಿನ ಎಲ್ಲ ಪ್ರಮುಖ ಪುರಾಣ ಪ್ರಸಿದ್ಧ ಮಂದಿರಗಳಲ್ಲಿ ಶ್ರೀರಾಮ ಸಂಬಂಧಿತ ವಿವಿಧ ಹೋಮ-ಹವನ, ಜಪ-ಪಾರಾಯಣ ಮತ್ತು ವಿಶೇಷ ಪೂಜೆ-ಪ್ರಾರ್ಥನೆ ಸಲ್ಲಿಸುವುದು. ಜತೆಗೆ ಗೋಕರ್ಣದ ಎಲ್ಲ ಪ್ರಧಾನ ಮಠಗಳಲ್ಲಿ ವಿಶೇಷ ದೇವತಾ ಆರಾಧನೆಗೆ ಸಭೆಯಲ್ಲಿ ನಿರ್ಧರಿಸಲಾಯಿತು.

    ಮಧ್ಯಾಹ್ನ ಶ್ರೀರಘೂತ್ತಮ ಮಠದಲ್ಲಿ ಋತ್ವಿಕ್ ಭೋಜನ ನಡೆಯಲಿದೆ. ಸಂಜೆ ಶ್ರೀ ಮಹಾಬಲೇಶ್ವರ ಮಂದಿರದಲ್ಲಿ ದೀಪಾರಾಧನೆ ಏರ್ಪಡಿಸಲಾಗಿದೆ. ಜತೆಗೆ ಪುರಾಣ ಪ್ರಸಿದ್ಧ ವಿಶಾಲ ಕೋಟಿತೀರ್ಥಕ್ಕೆ ವಿಶೇಷ ಶೃಂಗಾರ ಮತ್ತು ದೀಪೋತ್ಸವ ಆಯೋಜಿಸಲಾಗಿದೆ. ಈ ಎಲ್ಲ ಕಾರ್ಯಕ್ರಮಗಳ ಹೊಣೆಯನ್ನು ವಿವಿಧ ಸಂಘಟನೆಗಳ ಪ್ರಮುಖರಿಗೆ ವಹಿಸಿಕೊಡಲಾಯಿತು.

    ಸಭೆಯಲ್ಲಿ ಶ್ರೀಮಹಾಬಲೇಶ್ವರ ಮಂದಿರ ಪ್ರಧಾನ ಅರ್ಚಕ ಅಮೃತೇಶ ಹಿರೇ, ಉಪಾಧಿವಂತ ಮಂಡಳಾಧ್ಯಕ್ಷ ರಮೇಶ ಪ್ರಸಾದ, ಕಾರ್ಯದರ್ಶಿ ಬಾಲಕೃಷ್ಣ ಜಂಭೆ, ಶ್ರೀಕೃಷ್ಣ ವೇದ ಪ್ರತಿಷ್ಠಾನ ಅಧ್ಯಕ್ಷ ಶಿವರಾಮ ಮಯ್ಯರ್, ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಗಣಪತಿ ಜೈರಾಮ ಗಾಯತ್ರಿ, ಮಹಾಬಲ ಉಪಾಧ್ಯ, ಪರಮೇಶ್ವರ ಮಾರ್ಕಾಂಡೆ, ನೃಸಿಂಹ ದೇವರು ಜೋಶಿ, ದತ್ತಾತ್ರೇಯ ಹಿರೇಗಂಗೆ, ರಾಮಚಂದ್ರ ಮಾಸ್ಕೇರಿ ಮುಂತಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts