More

    ಲಡಾಖ್​​ಗೆ ಹೊರಟ್ರು ರಕ್ಷಣಾ ಸಚಿವ ರಾಜನಾಥ್ ಸಿಂಗ್

    ನವದೆಹಲಿ: ಚೀನಾ, ಪಾಕಿಸ್ತಾನಗಳು ಗಡಿ ಭಾಗದಲ್ಲಿ ಉಂಟುಮಾಡಿರುವ ಸಂಘರ್ಷ ಪರಿಸ್ಥಿತಿ ಮತ್ತು ಆ ನಂತರದ ಬೆಳವಣಿಗೆಗಳಿಗೆ ಪೂರಕವಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಲಡಾಖ್​ಗೆ ಹೊರಟಿದ್ದಾರೆ. ಎರಡು ದಿನಗಳ ಪ್ರವಾಸ ಇದಾಗಿದ್ದು, ಇಂದು ಲಡಾಖ್​ನಲ್ಲಿದ್ದರೆ ನಾಳೆ ಶ್ರೀನಗರದಲ್ಲಿ ಇರಲಿದ್ದಾರೆ. ಚೀಫ್ ಆಫ್​ ಡಿಫೆನ್ಸ್ ಸ್ಟಾಫ್​ ಜನರಲ್ ಬಿಪಿನ್ ರಾವತ್​, ಸೇನಾ ಮುಖ್ಯಸ್ಥ ಜನರ ಮನೋಜ್ ಮುಕುಂದ್ ನರವಣೆ ಸಚಿವರ ಜತೆಗೆ ಪ್ರವಾಸದಲ್ಲಿದ್ದಾರೆ.

    ಚೀನಾ ಸೇನೆ ಎಲ್​ಎಸಿಯಲ್ಲಿ ಅತಿಕ್ರಮಿತ ಪ್ರದೇಶದಿಂದ ಹಿಂದಡಿ ಇರಿಸುವುದಾಗಿ ಒಪ್ಪಿಕೊಂಡ ಬೆನ್ನಲ್ಲೇ ನಡೆಯುತ್ತಿರುವ ರಕ್ಷಣಾ ಸಚಿವರ ಈ ಪ್ರವಾಸ ಮಹತ್ವದ್ದೆನಿಸಿದೆ. ಅಷ್ಟೇ ಅಲ್ಲ, ಲಡಾಖ್​ನಲ್ಲಿ ಬಿಕ್ಕಟ್ಟು ಏರ್ಪಟ್ಟ ನಂತರದಲ್ಲಿ ಲಡಾಖ್​ಗೆ ಇದು ರಕ್ಷಣಾ ಸಚಿವರ ಮೊದಲ ಭೇಟಿಯೂ ಹೌದು. ಈ ಸಂದರ್ಭದಲ್ಲಿ ಅವರು ಅಟಲ್ ಟನೆಲ್​ (ರೋಹ್ಟಂಗ್ ಟನೆಲ್​)ಗೂ ಭೇಟಿ ನೀಡುವ ನಿರೀಕ್ಷೆ ಇದೆ. ಈ ಸುರಂಗ ಮಾರ್ಗ ಲೇಹ್-ಮನಾಲಿ ರಾಷ್ಟ್ರೀಯ ಹೆದ್ದಾರಿಯಲ್ಲಿದ್ದು, ಪೂರ್ವ ಪೀರ್ ಪಂಜಾಲ್​ ವಲಯದಲ್ಲಿದೆ.

    ಇದೇ ವೇಳೆ ಸಚಿವರು, ಎಲ್​ಎಸಿಯಲ್ಲಿನ ಗ್ರೌಂಡ್ ಸಿಚುಯೇಷನ್​ ರಿಪೋರ್ಟ್​ ಪಡೆದುಕೊಳ್ಳಲಿದ್ದಾರೆ. ಇತ್ತೀಚಿನ ಬೆಳವಣಿಗೆಗಳ ಕುರಿತ ಮಾಹಿತಿಯನ್ನು ಸೇನೆಯ ವರಿಷ್ಠರು ಸಚಿವರಿಗೆ ನೀಡಲಿದ್ದು, ಒಟ್ಟಾರೆ ಪರಿಸ್ಥಿತಿಯ ಅವಲೋಕನ ಸಭೆಯಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)

    ಚೀನಾ ಸೇನೆ ಹಿಂಪಡೆತ: ಎಲ್​ಎಸಿ ಸಮೀಪ ನಿರಂತರ ಪರಿಶೀಲನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts