More

    ದೀಪಾವಳಿ ಪೂಜಾ ಮುಹೂರ್ತಗಳು: ಸೂಡಿ ಜುಕ್ತಿಹಿರೇಮಠ ಪ್ರಕಟಣೆ

    ಗದಗ: ಶನಿವಾರ ಧನು ತ್ರಯೋದಶಿ ದಿನ ಜಲಪೂರ್ಣೋತ್ಸವ (ನೀರು ತುಂಬುವ ಹಬ್ಬ) ಇದ್ದು ಶುಕ್ರವಾರ ರಾತ್ರಿ ನೀರು ತುಂಬಿಸಿ, ಪೂಜಿಸಿ, ನ. 12(ಶನಿವಾರ) ಬೆಳಗ್ಗೆ 5.20ಕ್ಕೆ ತೈಲಾಭ್ಯಂಜನ ಮಾಂಗಲೀಕ ಸ್ನಾನ ಮಾಡಬೇಕು ಮತ್ತು ರಾತ್ರಿ ಯಮ ದೀಪವನ್ನು ದಕ್ಷಿಣ ದಿಕ್ಕಿಗೆ ಮುಖ ಮಾಡಿ ಇಡಬೇಕು ಎಂದು ಸೂಡಿ ಜುಕ್ತಿ ಹಿರೇಮಠ ಶ್ರೀಗಳು ತಿಳಿಸಿದ್ದಾರೆ.
    ಈ ಕುರಿತು ಪ್ರಕಟಣೆ ನೀಡಿರುವ ಅವರು, ನ.12ರಂದು (ನರಕ ಚತುರ್ದಶಿ) ಮಧ್ಯಾಹ್ನ 2.51ಕ್ಕೆ ಅಮವಾಸ್ಯೆ ಆರಂಭ ಆಗುವ ಹಿನ್ನೆಲೆ ಸಂಜೆ ಪೂಜೆ ಮಾಡುವುದು ಯೋಗ್ಯ. ಸಂಜೆ 6.30 ರಿಂದ 7.30ರ ವರೆಗೆ ಮತ್ತು ರಾತ್ರಿ 8.20 ರಿಂದ 10.44ರ ವರೆಗೆ ಪೂಜೆಗೆ ಯೋಗ್ಯ ಕಾಲ ಎಂದು ತಿಳಿಸಿದ್ದಾರೆ.
    ನ.13 ರಂದು ಬೆಳಗ್ಗೆ 5 ರಿಂದ 6 ಗಂಟೆ ಮತ್ತು 9.30 ರಿಂದ 10.30ರ ವರೆಗೆ ಮಹಾಲಕ್ಷ್ಮಿ ಪೂಜೆ, ಕುಬೇರ ಪೂಜೆ ಹಾಗೂ ಅಮವಾಸ್ಯೆ ಪೂಜೆ ಮಾಡಲು ಶುಭ ಕಾಲ. ಮಧ್ಯಾಹ್ನ 2.57ಕ್ಕೆ ಅಮವಾಸ್ಯೆ ಸರಿಯುವುದು. ಸಂಜೆ 6 ಗಂಟೆ ಒಳಗಾಗಿ ಮಹಾಲಕ್ಷ್ಮಿ ಉತ್ತರಿ ಪೂಜೆ ಮಾಡಲು ಶುಭ ಳಿಗೆ ಆಗಿದೆ. ನ.14ರ ದೀಪಾವಳಿ ಪಾಡ್ಯ ಪೂಜೆಯ ದಿನ ಬೆಳಗ್ಗೆ 4.30 ರಿಂದ 6 ಗಂಟೆ ವರೆಗೆ ತುಲಾಲಗ್ನ, 8 ರಿಂದ 9ರ ವರೆಗೆ ಅಮೃತವೇಳೆ, 10.45 ರಿಂದ 12 ಗಂಟೆವರೆಗೆ ಮಕರ ಲಗ್ನ ಶುಭವಾಗಿದೆ. ಈ ನಡುವೆ ಬೆಳಗ್ಗೆ 9 ರಿಂದ 10.30ರ ವರೆಗೆ ಯಮಗಂಡಕಾಲ ಇದೆ ಎಂದು ತಿಳಿಸಿರುವ ಶ್ರೀಗಳು, ರಾತ್ರಿ 8.25 ರಿಂದ 9.10 ವರೆಗೆ ಮತ್ತು 10 ರಿಂದ 12 ಗಂಟೆವರೆಗೆ ಮಹಾಲಕ್ಷ್ಮಿ, ಸರಸ್ವತಿ ಹಾಗೂ ಕುಬೇರ ಉತ್ತರಿ ಪೂಜೆಗೆ ಶುಭ ಕಾಲ ಮತ್ತು ನ.15 ರಂದು ಬೆಳಗ್ಗೆ 7.10 ರಿಂದ 8.50ರ ವರೆಗೆ ಲಕ್ಷಿ$್ಮ, ಸರಸ್ವತಿ ಹಾಗೂ ಕುಬೇರ ಉತ್ತರಿ ಪೂಜೆ ಶುಭ ಎಂದು ಪ್ರಕಟಣೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts