More

    ಹಕ್ಕುಪತ್ರ ವಿತರಿಸುವಂತೆ ಒತ್ತಾಯ

    ಕಾರಟಗಿ: ತಾಲೂಕಿನ ಹುಳ್ಕಿಹಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಹುಳ್ಕಿಹಾಳ ಕ್ಯಾಂಪ್‌ನಲ್ಲಿ ಮೂರು ದಶಕಗಳಿಂದ ವಾಸಿಸುವ ನಿವಾಸಗಳಿಗೆ ಹಕ್ಕುಪತ್ರ ವಿತರಿಸುವಂತೆ ನಿವಾಸಿಗಳು ತಹಸಿಲ್ದಾರ ಎಂ.ಕುಮಾರಸ್ವಾಮಿಗೆ ಬುಧವಾರ ಮನವಿ ಪತ್ರ ಸಲ್ಲಿಸಿದರು.

    ಇದನ್ನೂ ಓದಿ: ಬಡವರಿಗೆ ಹಕ್ಕುಪತ್ರ ವಿತರಿಸಲು ಕ್ರಮ

    ಕ್ಯಾಂಪ್‌ನಲ್ಲಿ ಎರಡು ನೂರು ಕುಟುಂಬಗಳು ವಾಸ ಮಾಡುತ್ತಿವೆ. 1996ರಲ್ಲಿ ಮಲ್ಲಿಕಾರ್ಜುನ ನಾಗಪ್ಪನವರು ಸಚಿವರಾಗಿದ್ದ ವೇಳೆ ಸರ್ವೇ ನಂ. 72/*/1ರಲ್ಲಿ ಸರ್ಕಾರ 9 ಎಕರೆ ಜಾಗ ಒದಗಿಸಿ ವಲಸೆ ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಿತ್ತು.

    ಅದರೆ, ಹಕ್ಕುಪತ್ರ ಸೇರಿ ಯಾವುದೇ ದಾಖಲೆಗಳನ್ನು ನೀಡಿಲ್ಲ. ಗ್ರಾಪಂನಲ್ಲೂ 9 ಮತ್ತು 11ಎ ಫಾರಂ ನೀಡುತ್ತಿಲ್ಲ. ಇದರಿಂದಾಗಿ ಬಡಕುಟುಂಬಗಳು ಸಾಲಸೌಲಭ್ಯ, ಪರಭಾರೆ, ನಿವೇಶನದ ಮೇಲೆ ಯಾವುದೇ ಸೌಲಭ್ಯಗಳು ದೊರೆಯದಿದ್ದರಿಂದ ಪರದಾಡುತ್ತಿದ್ದಾರೆ.

    ಸರ್ಕಾರ ಕ್ಯಾಂಪ್ ಗಳನ್ನು ಕಂದಾಯ ಗ್ರಾಮ ಮಾಡಬೇಕೆಂದು ಆದೇಶಿಸಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳು ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ. ಕಂದಾಯ ಗ್ರಾಮಕ್ಕಾಗಿ ಹಲವು ಬಾರಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು ಪ್ರಯೋಜನವಾಗಿಲ್ಲ.

    ಕೂಡಲೇ ತಹಸಿಲ್ದಾರ್ ಕ್ಯಾಂಪ್ ಅನ್ನು ಕಂದಾಯ ಗ್ರಾಮ ಮಾಡುವ ಮೂಲಕ ನಿವಾಸಿಗಳಿಗೆ ಅಗತ್ಯ ದಾಖಲೆಗಳನ್ನು ನೀಡಲು ಮುಂದಾಗಬೇಕು. ಒಂದು ವೇಳೆ ಕಾಲಹರಣ ಮಾಡಿದ್ದೇ ಆದಲ್ಲಿ ತಹಸಿಲ್ ಕಚೇರಿ ಮುಂದೆ ಎರಡು ನೂರು ಕುಟುಂಬಗಳು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಆಗ್ರಹಿಸಿದರು.

    ಬಸಲಿಂಗಪ್ಪ, ಕೇಶಪ್ಪ ಗಂಗಾವತಿ, ಶಿವಪುತ್ರಪ್ಪ, ಲಕ್ಷ್ಮಣ ಅಂಬಿಗ, ಬಾಳಪ್ಪ ದಿಂಡೂರ, ನಾಗರಾಜ ಬೂದಿಹಾಳ, ಶರಣು ಸುಂಕದ, ಹನುಮಂತಪ್ಪ ಗ್ವಾದಿ, ಮಂಜುನಾಥ ಶಿಡ್ಲಗೇರಿ, ಶಿವರಾಜ, ಶರಣಪ್ಪ ಅಣ್ಣಿಗೇರಿ, ಮಂಜುನಾಥ ಬಿಂಜವಾಡಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts