More

    ತಡವಲಗಾದಲ್ಲಿ ದೇವಾಲಯಗಳ ಲೋಕಾರ್ಪಣೆ ಕಾರ್ಯಕ್ರಮ

    ಇಂಡಿ: ತಾಲೂಕಿನ ಸುಕ್ಷೇತ್ರ ತಡವಲಗಾ ಗ್ರಾಮದ ಜೋಡುಗುಡಿಯ ಮರುಳಸಿದ್ದೇಶ್ವರ ಹಾಗೂ ನಂದಿಬಸವೇಶ್ವರ ನೂತನ ದೇವಾಲಯಗಳ ಲೋಕಾರ್ಪಣೆ ಅಂಗವಾಗಿ ಹಲವು ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಡವಲಗಾ ಹಿರೇಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ತಿಳಿಸಿದರು.

    ತಡವಲಗಾದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡಜನರ ಒಳಿತಿಗಾಗಿ ಸರ್ವಧರ್ಮ ಸಾಮೂಹಿಕ ವಿವಾಹ, ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನ, ಕುಂಭೋತ್ಸವ ಹಾಗೂ ಲಕ್ಷ ದೀಪೋತ್ಸವ ಸೇರಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

    ನ. 24ರಂದು ಬೆಳಗ್ಗೆ ಐದು ಗಂಟೆಗೆ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ನೂತನ ಮೂರ್ತಿಗಳಿಗೆ ರುದ್ರಾಭಿಷೇಕ, ಪ್ರಾಣ ಪತ್ರಿಷ್ಠಾಪನೆ, ಹೋಮ, ಹವನ ಹಾಗೂ ಪೂಜಾ ಕೈಂಕರ್ಯಗಳು ಹಾಗೂ ಸಂಜೆ 5ಕ್ಕೆ ಧರ್ಮಸಭೆ ಮತ್ತು ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ.

    ನ. 25ರಂದು ಬೆಳಗ್ಗೆ 8ಕ್ಕೆ ರಾಜ್ಯಮಟ್ಟದ ಕ್ರಿಕೆಟ್, ಕಬಡ್ಡಿ, ಹಾಗೂ ವಾಲಿಬಾಲ್ ಪಂದ್ಯಾವಳಿ ಉದ್ಘಾಟನೆ ಹಾಗೂ ಸಂಜೆ 7ಕ್ಕೆ ಗಂಗಾವತಿ ಪ್ರಾಣೇಶ, ಬಸವರಾಜ ಮಾಮನಿ, ನರಸಿಂಹ ಜೋಶಿ ತಂಡದಿಂದ ನಗೆ ಸಂಭ್ರಮ ಹಾಗೂ ಪ್ರಶಸ್ತಿ ವಿತರಣಾ ಸಮಾರಂಭ ನಡೆಯಲಿದೆ.

    ನ. 26ರಂದು ಬೆಳಗ್ಗೆ 11ಕ್ಕೆ ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನ ಮಧ್ಯಾಹ್ನ 2ಕ್ಕೆ ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನ ಸಂಕೀರ್ಣಗೋಷ್ಠಿ ಮಧ್ಯಾಹ್ನ 4ಕ್ಕೆ ಕವಿಗೋಷ್ಠಿ ಮತ್ತು ಸಂಜೆ 6ಕ್ಕೆ ಸಮಾರೋಪ ಸಮಾರಂಭ ಹಾಗೂ ಪುರಾಣ ಮಂಗಲೋತ್ಸವ, ನಡೆಯಲಿದೆ.

    ನ. 27ರಂದು ಬೆಳಗ್ಗೆ 8ಕ್ಕೆ ತಡವಲಗಾ ಗ್ರಾಮದ ಮೂಲ ಮರುಳಸಿದ್ದೇಶ್ವರ ದೇವಾಲಯದಿಂದ ಸಕಲ ವಾದ್ಯ-ವೈಭವದೊಂದಿಗೆ ಉಜ್ಜಯಿನಿ, ಶ್ರೀಶೈಲ, ಕಾಶಿ, ಜಗದ್ಗುರು ಮಹಾಸನ್ನಿಧಿಯವರ ಅಡ್ಡಪಲ್ಲಕ್ಕಿ ಮಹೋತ್ಸವ ಮತ್ತು 1008 ಸುಮಂಗಲೆಯರಿಂದ ಕುಂಭೋತ್ಸವ ಹಾಗೂ ಕಳಸಾರೋಣ, ಸಾಮೂಹಿಕ ವಿವಾಹ ಹಾಗೂ ಸರ್ವಧರ್ಮ ಸಭೆ ನಡೆಯಲಿದೆ. ಸಂಜೆ 7ಕ್ಕೆ ಲಕ್ಷ ದೀಪೋತ್ಸವ ಹಾಗೂ ಜಾತ್ರಾ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.

    ತಡವಲಗಾದ ಶಿವಾನಂದ ಶಾಸ್ತ್ರಿಗಳು, ಚಂದ್ರಶೇಖರ ರೂಗಿ, ರಮೇಶ ಹೊಸಮನಿ, ಅಶೋಕ ಮಿರ್ಜಿ, ಮಳಸಿದ್ದಪ್ಪ ಖಸ್ಕಿ, ಸಾಹೇಬಗೌಡ ಇಂಡಿ, ಮಲ್ಲಿಕಾರ್ಜುನ ಇಂಡಿ, ಕುತ್ಬುದ್ದಿನ್ ಬಾಗವಾನ, ಬಸವರಾಜ ಚವಡಿಹಾಳ, ರಾಜು ಧಡೇದ, ರಾಜಶೇಖರ ಹೊಸಮನಿ, ಮುತ್ತು ಹಿರೇಮಠ, ಮಲ್ಕಪ್ಪ ಮಂದೃಪ, ನಂದು ಸಾರವಾಡ, ರಮೇಶ ಅಳ್ಳೊಟ್ಟಿ, ಶಂಕ್ರಪ್ಪ ಮೇತ್ರಿ, ಪ್ರಕಾಶ ಮಿರಗಿ, ಶ್ರೀಧರ ಮಸಳಿ, ಮೈಬೂಬ ಮೌಸಾವಳಿಗಿ, ಸಚಿನ ಇಂಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts