More

    118 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ಘೋಷಣೆ

    ರಾಮನಗರ: ಜಿಲ್ಲೆಯ ನಾಲ್ಕು ತಾಲೂಕುಗಳ 118 ಗ್ರಾಮ ಪಂಚಾಯಿತಿಗಳಿಗೆ ಡಿ.22 ಮತ್ತು 27ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.

    ಚುನಾವಣಾ ಆಯೋಗ ಈ ಸಂಬಂಧ ಸೋಮವಾರ ದಿನಾಂಕ ಘೋಷಿಸಿದ್ದು, ಮೊದಲ ಹಂತದಲ್ಲಿ ಡಿ.22ರಂದು ರಾಮನಗರ ತಾಲೂಕಿನ 20 ಗ್ರಾಪಂಗಳು ಹಾಗೂ ಕನಕಪುರ ತಾಲೂಕಿನ 36 ಗ್ರಾಪಂಗಳಿಗೆ ಚುನಾವಣೆ ನಡೆಯಲಿದೆ. 2ನೇ ಹಂತದಲ್ಲಿ ಡಿ.27ರಂದು ಚನ್ನಪಟ್ಟಣ ತಾಲೂಕಿನ 32 ಗ್ರಾಪಂಗಳು ಹಾಗೂ ಮಾಗಡಿ ತಾಲೂಕಿನ 30 ಗ್ರಾಪಂಗಳಿಗೆ ಚುನಾವಣೆ ನಡೆಯಲಿದೆ.

    ನೀತಿ ಸಂಹಿತೆ: ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಿದ್ದು, ಡಿ. 31ರ ಸಂಜೆ 5 ಗಂಟೆವರೆಗೆ ಜಾರಿಯಲ್ಲಿರುತ್ತದೆ. ಪ್ರತಿ ಮತಗಟ್ಟೆಯಲ್ಲಿ ಮತದಾರರ ಸಂಖ್ಯೆಯನ್ನು ಸಾವಿರಕ್ಕೆ ಮಿತಿಗೊಳಿಸಲಾಗಿದೆ. ಮತದಾರರು ಮಾಸ್ಕ್ ಧರಿಸಿ, ಪರಸ್ಪರ ಅಂತರ ಕಾಯ್ದುಕೊಂಡು ಸ್ಯಾನಿಟೈಸ್ ಮಾಡಿಕೊಂಡು ಮತದಾನ ಮಾಡಬೇಕು. ಮತದಾನದ ಕೊನೆಯ ಒಂದು ಗಂಟೆ ಅವಧಿಯಲ್ಲಿ ಕೋವಿಡ್ ಸೋಂಕಿತರು ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ.

    ಮಹಿಳಾ ಮತದಾರರೇ ಹೆಚ್ಚು

    ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಒಟ್ಟು 1059 ಮತಗಟ್ಟೆಗಳಿದ್ದು, 942 ಮೂಲ ಮತಗಟ್ಟೆಗಳು ಮತ್ತು 117 ಸಹಾಯಕ ಮತಗಟ್ಟೆಗಳಿರಲಿವೆ. 3,14,186 ಪುರುಷ ಹಾಗೂ 3,16,243 ಮಹಿಳಾ ಮತದಾರರು, 26 ಇತರರು ಒಟ್ಟು 6,30,455 ಮತದಾರರು ಹಕ್ಕು ಚಲಾಯಿಸಲಿದ್ದಾರೆ. ವಿಶೇಷ ಎಂದರೆ ಪುರುಷರಿಗಿಂತ 2,057 ಮಹಿಳಾ ಮತದಾರರು ಹೆಚ್ಚಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts