More

    ಕೊಡವ ಲ್ಯಾಂಡ್ ವಿರುದ್ಧ ಹೋರಾಟಕ್ಕೆ ನಿರ್ಧಾರ


    ಕೊಡಗು : ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ ವಾರ್ಷಿಕ ಸಭೆಯನ್ನು ಸಂಘದ ಅಧ್ಯಕ್ಷ ಎಸ್.ಎಂ.ಚಂಗಪ್ಪ ಅಧ್ಯಕ್ಷತೆಯಲ್ಲಿ ಭಾನುವಾರ ಸೋಮವಾರಪೇಟೆ ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಲಾಗಿತ್ತು.


    ಹೈಕೋರ್ಟ್ ಹಿರಿಯ ವಕೀಲ ಡಾ.ಸುಬ್ರಮಣ್ಯ ಸ್ವಾಮಿ ಕೊಡವ ಭೌಗೋಳಿಕ ರಾಜಕೀಯ ಸ್ವಾಯತ್ತತೆ(ಕೊಡವ ಲ್ಯಾಂಡ್) ಕುರಿತಂತೆ ಹೂಡಿರುವ ಪಿಐಎಲ್ ಮೊಕದ್ದಮೆ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಕೊಡವ ಲ್ಯಾಂಡ್ ಹೋರಾಟ ಎಂಬುದು ಜಿಲ್ಲೆಯಲ್ಲಿ ಜನಾಂಗೀಯ ಘರ್ಷಣೆ ಮತ್ತು ಅಶಾಂತಿಗೆ ಕಾರಣವಾಗಬಹುದು.

    ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಬಲಾಢ್ಯರಾದವರು, ಪರಿಶಿಷ್ಟವರ್ಗದ ಸ್ಥಾನಮಾನ ಕೇಳುವುದು, ನಿಜವಾದ ಬುಡಕಟ್ಟು ಜನಾಂಗದವರ ಮೀಸಲಾತಿಯನ್ನು ಕಿತ್ತುಕೊಳ್ಳುವ ಪ್ರಯತ್ನ ಎಂದು ವಿ.ಪಿ.ಶಶಿಧರ್ ಪ್ರತಿಪಾದಿಸಿದರು. ಕೊಡವ ಲ್ಯಾಂಡ್ ಸ್ಥಾಪನೆಯಾದರೆ ಜಿಲ್ಲೆಯಲ್ಲಿ ಇತರ ಜನಾಂಗದವರು ರಾಜಕೀಯವಾಗಿ ಅನ್ಯಾಯಕ್ಕೆ ಒಳಗಾಗಬೇಕಾಗುತ್ತದೆ. ಮೀಸಲಾತಿಯಲ್ಲೂ ತಾರಾತಮ್ಯವಾಗುವ ಆತಂಕವಿದೆ ಎಂದು ಹೇಳಿದರು.


    ಕೊಡಗಿನ ಮೂಲನಿವಾಸಿ ಹಾಗೂ ಇತರ ಸಮುದಾಯದವರನ್ನು ಒಗ್ಗೂಡಿಸಿ ಕೊಡವಲ್ಯಾಂಡ್ ವಿರುದ್ಧ ಹೋರಾಡಲು ವೇದಿಕೆ ಸೃಷ್ಟಿಸಬೇಕೆಂದು ಎಸ್.ಬಿ.ಭರತ್ ಕುಮಾರ್, ಬಿ.ಜೆ.ದೀಪಕ್, ಎಚ್.ಕೆ.ಮಾದಪ್ಪ, ವಿಮಲಾ ಸೇರಿದಂತೆ ಮತ್ತಿತರು ಸಲಹೆ ನೀಡಿದರು. ಈಗಾಗಲೇ ಜಿಲ್ಲೆಯ ವಿವಿಧ ಜನಾಂಗದ ಪ್ರಮುಖರ ಸಭೆ ಕರೆಯಲಾಗಿದೆ. ಮುಂದಿನ 20 ದಿನದೊಳಗೆ ಮತ್ತೊಂದು ಸಭೆ ಕರೆದು ಎಲ್ಲ ವಿಚಾರವನ್ನು ಚರ್ಚೆ ಮಾಡಲಾಗುವುದು. ಹೈಕೋರ್ಟ್‌ನಲ್ಲಿ ಕಾನೂನು ಹೋರಾಟ ಮುಂದುವರಿಸಲಾಗುವುದು ಎಂದು ಅಧ್ಯಕ್ಷ ಎಸ್.ಎಂ.ಚಂಗಪ್ಪ ಸಭೆಗೆ ತಿಳಿಸಿದರು.


    ಕೊಡವ ಭೌಗೋಳಿಕ ರಾಜಕೀಯ ಸ್ವಾಯತ್ತತೆಯ ಬಗ್ಗೆ ಜಿಲ್ಲೆಯ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು ಸ್ಪಷ್ಟನೆ ನೀಡಬೇಕು. ಈ ಬಗ್ಗೆ ಜನಪ್ರತಿನಿಧಿಗಳಿಗೆ ಲಿಖಿತ ಮನವಿ ಸಲ್ಲಿಸುವಂತೆ ಸಭೆಯಲ್ಲಿದ್ದವರು ಅಧ್ಯಕ್ಷರಿಗೆ ತಿಳಿಸಿದರು.
    ನಮ್ಮ ಜನಾಂಗದ ಅಸ್ತಿತ್ವಕ್ಕೆ ಧಕ್ಕೆಯಾದಾಗ ಇಡೀ ಸಮುದಾಯ ಒಗ್ಗಟ್ಟಾಗಿ ಹೋರಾಟ ಮಾಡಬೇಕು. ಕಾನೂನು ರೀತಿಯಲ್ಲೂ ವ್ಯವಸ್ಥಿತ ಹೋರಾಟ ಮಾಡಲೇಬೇಕು ಎಂದು ರಾಜ್ಯ ಒಕ್ಕಲಿಗರ ಸಂಘದ ಸದಸ್ಯ ಹರಪಳ್ಳಿ ರವೀಂದ್ರ ಹೇಳಿದರು.


    ಚಿಂತಕ ಪ್ರ.ಕೆ.ಎಸ್.ಭಗವಾನ್ ಅವರು ಸಭೆಯೊಂದರಲ್ಲಿ ಒಕ್ಕಲಿಗರ ಜನಾಂಗದ ಬಗ್ಗೆ ಅವಹೇಳನಕಾರಿ ಪದ ಬಳಸಿದ್ದಾರೆ. ಇದಕ್ಕೆ ಖಂಡನಾ ನಿರ್ಣಯ ಕೈಗೊಳ್ಳಬೇಕು ಎಂದು ಕೆ.ಟಿ.ಪರಮೇಶ್ ಹೇಳಿದರು. ಖಂಡನಾ ನಿರ್ಣಯ ಕೈಗೊಂಡರೆ ಸಾಲದು ಪ್ರತಿಭಟನೆ ಮಾಡಬೇಕೆಂದು ಕೆ.ಎಂ.ಲೋಕೇಶ್, ಬಿ.ಜೆ.ದೀಪಕ್ ಒತ್ತಾಯಿಸಿದರು. ಸೋಮವಾರ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ, ಕ್ರಮಕ್ಕೆ ಆಗ್ರಹಿಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು.


    2023ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಗೊಂದಳ್ಳಿ ಗ್ರಾಮದ ಮೃದು ಪ್ರವೀಣ್(ಶೇ.99.36), ತಾಕೇರಿ ಗ್ರಾಮದ ಅನುಜ್ ಸೋಮಯ್ಯ(98.72), ಯಡೂರು ಗ್ರಾಮದ ಧನ್ಯಾ ಸತೀಶ್(97.12), ಯಡೂರು ಗ್ರಾಮದ ಡಿ.ಸಿ.ತಿಲಕ್(96.8), ಹಾರಳ್ಳಿ ಗ್ರಾಮದ ನಿತಿನ್ ದೇವರಾಜ್(96), ಮಡಿಕೇರಿ ಹೇಮಾಶ್ರೀ ಚಂದ್ರಶೇಖರ್(95.04)ಗೆ ಪ್ರೋತ್ಸಾಹ ಧನ ನೀಡಿ ಸನ್ಮಾನಿಸಲಾಯಿತು.


    ಸಂಘದ ಉಪಾಧ್ಯಕ್ಷ ವಿ.ಪಿ. ಸುರೇಶ್, ಪಿ.ಕೆ.ರವಿ, ಕೆ.ಪಿ.ನಾಗರಾಜ್, ಕಾರ್ಯದರ್ಶಿ ಎಸ್.ಎಲ್.ಬಸವರಾಜ್, ಪದಾಧಿಕಾರಿಗಳಾದ ಟಿ.ಆರ್.ಪುರುಷೋತ್ತಮ್, ಜಾನಕಿ ವೆಂಕಟೇಶ್, ಬಸವರಾಜ್, ಮೋಹನ್, ಭುವನೇಂದ್ರ, ಧರ್ಮಪ್ಪ, ಸವಿತಾ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts