More

    8ರಿಂದ ಅಸಹಕಾರ ಚಳವಳಿಗೆ ನಿರ್ಧಾರ

    ರಟ್ಟಿಹಳ್ಳಿ: ಶಿಕಾರಿಪುರ ಏತ ನೀರಾವರಿ ಯೋಜನೆಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು ಮತ್ತು ತುಂಗಾ ಮೇಲ್ದಂಡೆ ಯೋಜನೆಗೆ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ವಿತರಿಸಬೇಕು ಎಂದು ಅನೇಕ ಬಾರಿ ಪ್ರತಿಭಟನೆ ನಡೆಸಿದರೂ ಸರ್ಕಾರ ಮೊಂಡುತನ ಪ್ರದರ್ಶಿಸುತ್ತಿದೆ. ಹೀಗಾಗಿ ಫೆ. 8ರಿಂದ ಅಸಹಕಾರ ಚಳವಳಿ ನಡೆಸಲು ನಿರ್ಧರಿಸಲಾಗಿದೆ ಎಂದು ವಕೀಲ ಎಸ್.ಡಿ. ಹಿರೇಮಠ ಹೇಳಿದರು.

    ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಏರ್ಪಡಿಸಿದ್ದ ನಮ್ಮ ಭೂಮಿ ನಮ್ಮ ಹಕ್ಕು ಹೋರಾಟ ಸಮಿತಿ ಮತ್ತು ರೈತರ ಸಭೆಯಲ್ಲಿ ಅವರು ಮಾತನಾಡಿದರು. ಸರ್ಕಾರ ರೈತರಿಗೆ ತಪ್ಪು ಮಾಹಿತಿ ನೀಡುತ್ತಿದೆ. ಹಣದ ಆಮಿಷವೊಡ್ಡಿ ರೈತರ ಜಮೀನು ಕಬಳಿಸುತ್ತಿದೆ. ಶಿಕಾರಿಪುರ ತಾಲೂಕಿನ ಉಡಗಣಿ, ತಾಳಗುಂದ, ಹೊಸೂರು ಕೆರೆಗಳಿಗೆ ನೀರು ತುಂಬಿಸಲು ರಟ್ಟಿಹಳ್ಳಿ ಮತ್ತು ಹಿರೇಕೆರೂರು ತಾಲೂಕಿನ ರೈತರ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುತ್ತಿದೆ. ರೈತರು ಒಪ್ಪದಿದ್ದರೂ ಬಲವಂತಪಡಿಸಲಾಗುತ್ತಿದೆ. ಈಗಾಗಲೇ ಈ ಯೋಜನೆಗೆ ಅಂದಾಜು 2-3 ಕಿ.ಮೀಯಷ್ಟು ಕಾಮಗಾರಿ ನಡೆಯುತ್ತಿದೆ. ಶೇ. 60ರಷ್ಟು ಕಾಮಗಾರಿ ಮುಕ್ತಾಯ ಮಾಡಿದ್ದೇವೆ ಎಂದು ಅಧಿಕಾರಿಗಳು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಆಕೋಶ ವ್ಯಕ್ತಪಡಿಸಿದರು.

    ತುಂಗಾ ಮೇಲ್ದಂಡೆ ಯೋಜನೆಗೆ ಭೂಮಿ ಕಳೆದುಕೊಂಡ ರೈತರಿಗೆ ಸರ್ಕಾರ ಪರಿಹಾರ ನೀಡುತ್ತಿಲ್ಲ. ಸರ್ಕಾರ ಕೂಡಲೆ ನಮ್ಮ ಬೇಡಿಕೆಗೆ ಸ್ಪಂದಿಸಬೇಕು. ಇಲ್ಲವಾದರೆ ಯಾರ ಒತ್ತಡಕ್ಕೂ ಮಣಿಯದೇ ಫೆ.8ರಿಂದ ಅಸಹಕಾರ ಚಳವಳಿ ಹಮ್ಮಿಕೊಳ್ಳಲಾಗುವುದು. ಒಂದು ವೇಳೆ ನಮ್ಮನ್ನು ಬಂಧಿಸಿದರೂ ಜೈಲಿನಲ್ಲಿಯೇ ಚಳವಳಿ ಮುಂದುವರಿಸುತ್ತೇವೆ ಎಂದು ಎಚ್ಚರಿಸಿದರು.ರೈತ ಮುಖಂಡರಾದ ವಿನಯ ಪಾಟೀಲ, ರಾಜಶೇಖರ ಪಾಟೀಲ, ಬಸವರಾಜ ಶಿರಗಂಬಿ, ವೀರಭದ್ರಪ್ಪ ಬಣಕಾರ, ಶೇಖರಗೌಡ್ರ ಪಾಟೀಲ, ಟಿಪ್ಪುಸಾಬ ಕೋಟಿಹಾಳ, ಹುಸೇನಸಾಬ ಬಿಲ್ಲಹಳ್ಳಿ, ಸುಭಾಷ ಸುತ್ತಕೋಟಿ, ಗುರು ಹಿರೇಮಠಯ್ಯ, ಕೆ.ವಿ.ಹಂಚಿನ ಮನಿ, ಮಂಜುನಾಥ ಕತ್ತಗಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts