More

    ಬೀದಿ ನಾಯಿಗಳ ದಾಳಿಗೆ ಕುರಿಗಳ ಸಾವು

    ಇಂಡಿ: ಬೀದಿ ನಾಯಿಗಳು ದಾಳಿ ನಡೆಸಿ ಐದು ಕುರಿಗಳನ್ನು ಸಾಯಿಸಿ, ಮೂರು ಕುರಿಗಳನ್ನು ಗಾಯಗೊಳಿಸಿದ್ದು, ಕುರಿಗಳನ್ನು ಕಳೆದುಕೊಂಡಿರುವ ಕುರಿಗಾರರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ ಅವರಿಗೆ ಪಟ್ಟಣದ ಚವಡಿಹಾಳ ರಸ್ತೆಯ ಪಕ್ಕದ ಜಮೀನಿನ ರೈತರು ಒತ್ತಾಯಿಸಿದರು.

    ದತ್ತು ಹೆಳವರ ಎಂಬುವವರು ತಮ್ಮ ಕುಟುಂಬದ ನಿರ್ವಹಣೆಗಾಗಿ ಕುರಿ ಸಾಕಾಣಿಕೆಯನ್ನೇ ಅವಲಂಬಿಸಿದ್ದಾರೆ. ಇದೀಗ ಬೀದಿ ನಾಯಿಗಳ ಕೃತ್ಯದಿಂದ ಕುರಿಗಳನ್ನು ಕಳೆದುಕೊಂಡು ಬೀದಿಗೆ ಬಂದಿದ್ದಾರೆ ಎಂದು ರೈತರು ತಿಳಿಸಿದರು.

    ದತ್ತು ಹೆಳವರ ಅವರು ಎಂದಿನಂತೆ ಕುರಿಗಳನ್ನು ಮೇಯಲು ಹೊರಗಡೆ ಬಿಟ್ಟಿದ್ದಾರೆ. ಆಗ ಕುರಿಗಳ ಮೇಲೆ ಏಕಾಏಕಿ ದಾಳಿ ನಡೆಸಿದ ಸುಮಾರು 50ರಿಂದ 60 ಬೀದಿ ನಾಯಿಗಳ ಹಿಂಡು ಸಿಕ್ಕಸಿಕ್ಕ ಕುರಿಗಳನ್ನು ಕಚ್ಚಿವೆ. ವಿಷಯ ತಿಳಿದು ಸ್ಥಳಕ್ಕೆ ಹೋಗುವ ವೇಳೆಗೆ ನಾಯಿಗಳು ಓಡಿ ಹೋಗಿದ್ದವು. ಅಷ್ಟರಲ್ಲಾಗಲೇ ನಾಯಿಗಳು 5 ಕುರಿಗಳ ಕುತ್ತಿಗೆಗೆ ಕಚ್ಚಿ ರಕ್ತ ಕುಡಿದು ಸಾಯಿಸಿವೆ. 3 ಕುರಿಗಳು ನಾಯಿಗಳ ದಾಳಿಗೆ ಗಂಭೀರ ಗಾಯಗೊಂಡಿವೆ. ಕುರಿಗಳಿಂದಲೇ ನಮ್ಮ ಕುಟುಂಬದ ಜೀವನ ಸಾಗುತ್ತಿತ್ತು. ಈ ಘಟನೆಯಿಂದ ನಮ್ಮ ಪರಿಸ್ಥಿತಿ ಚಿಂತಾಜನಕ ಸ್ಥಿತಿಯಲ್ಲಿದೆ. ದಯವಿಟ್ಟು ನಮಗೆ ಸರ್ಕಾರದಿಂದ ಪರಿಹಾರ ನೀಡಬೇಕು ಎಂದು ಕುರಿ ಮಾಲೀಕ ದತ್ತು ಹೇಳವರ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ ಅವರಿಗೆ ಮನವಿ ಮಾಡಿದರು.

    ಕುರಿಗಳ ಮೇಲೆ ದಾಳಿ ಮಾಡಿದ ನಾಯಿಗಳು ಕೆಲವೊಮ್ಮೆ ಮನುಷ್ಯನ ಮೇಲೆ ದಾಳಿ ಮಾಡಿವೆ. ಚಿಕ್ಕಮಕ್ಕಳು ವೃದ್ದರ ಮೇಲೆ ದಾಳಿ ಮಾಡಿದರೆ ಯಾರು ಜವಾಬ್ದಾರರು ಎಂದು ಪುರಸಭೆ ಮುಖ್ಯಾಧಿಕಾರಿ ಮೇಲೆ ಸಾರ್ವಜನಿಕರು ಹರಿಹಾಯ್ದರು.

    ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ ಮಾತನಾಡಿ, ಬೀದಿ ನಾಯಿಗಳನ್ನು ಹಿಡಿಯಲು ಕಲರ್ಬುಗಿಯ ತಜ್ಞರನ್ನು ಕರಿಯಿಸಿ ನಾಯಿಗಳನ್ನು ಸ್ಥಳಾಂತರ ಮಾಡುತ್ತೇವೆ. ಕುರಿ ಮಾಲೀಕರಿಗೆ ಐದು ದಿನಗಳೊಗಾಗಿ ಸೂಕ್ತ ಪರಿಹಾರ ಕೊಡುವದಾಗಿ ಭರವಸೆ ನೀಡಿದರು.
    ಮಲ್ಲು ಗುಡ್ಲ, ಅಶೋಕ ಅಕಲಾದಿ, ಮಹೇಶ ಹೂಗಾರ, ಮಳಗಪ್ಪ ಪೂಜಾರಿ, ಸಿದಗೊಂಡ ಪೂಜಾರಿ, ನಿಂಗಪ್ಪ ಪೂಜಾರಿ, ಶ್ರೀಶೈಲ ಪೂಜಾರಿ, ಸಿದ್ದಪ್ಪ ಬಗಲಿ, ನಾನಸುರ ಜಾಧವ, ಅಪ್ಪು ಮಡಿವಾಳ, ದ್ಯಾವಪ್ಪ ಪೂಜಾರಿ ಹಾಗೂ ಕುರಿ ಮಾಲೀಕರು ಮನವಿ ಸಲ್ಲಿಸುವ ಸಮಯದಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts