More

    ಪ್ಯಾನ್​ ಕಾರ್ಡ್​​ಗೆ ಆಧಾರ್ ಲಿಂಕ್: ಸಿಹಿ ಸುದ್ದಿ ನೀಡಿದ ತೆರಿಗೆ ಇಲಾಖೆ

    ಬೆಂಗಳೂರು: PAN (Permanent Account Number) ಕಾರ್ಡ್​ ಇಂದಿನ ದಿನಮಾನಗಳಲ್ಲಿ ಪ್ರತಿಯೊಬ್ಬರಿಗೂ ಅಗತ್ಯವಾಗಿದೆ. ಬ್ಯಾಂಕಿಂಗ್ ಹಾಗೂ ಹಣಕಾಸಿನ ವ್ಯವಹಾರಗಳಿಗಂತೂ ಪ್ಯಾನ್​ ಕಾರ್ಡ್​ ಬೇಕೆ ಬೇಕು. ಪ್ಯಾನ್​ ಕಾರ್ಡ್​ಗೆ ಆಧಾರ್ ಕಾರ್ಡ್​ ಲಿಂಕ್ ಮಾಡಲೇಬೇಕು ಎಂಬ ನಿಯಮವನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಮಾರ್ಚ್ 31 ಪ್ಯಾನ್​ ಕಾರ್ಡ್​​ನ್ನು ಆಧಾರ್​ಗೆ ಲಿಂಕ್ ಮಾಡಲು ಕೊನೆಯ ದಿನವಾಗಿತ್ತು. ಇದೀಗ ಈ ಗಡುವನ್ನು ಆಧಾಯ ತೆರಿಗೆ ಮೂರು ತಿಂಗಳುವರೆಗೆ ವಿಸ್ತರಿಸಿದೆ. ಜೂನ್ 30ರವರೆಗೆ ಅವಕಾಶ ನೀಡಿದೆ.

    ಕೋವಿಡ್ ಕಾರಣದಿಂದಾಗಿ ಮತ್ತೊಮ್ಮೆ ಮೂರು ತಿಂಗಳು ಅವಕಾಶ ನೀಡಲಾಗಿದೆ ಎಂದು ಕೇಂದ್ರ ತೆರಿಗೆ ಇಲಾಖೆ ಹೇಳಿದೆ.

    ಜೂನ್ 30 ರ ಒಳಗಾಗಿ ನೀವು ನಿಮ್ಮ ಪ್ಯಾನ್​ ಕಾರ್ಡ್​ಗೆ ಆಧಾರ್​ ನಂಬರ್​ನ್ನು ಲಿಂಕ್​ ಮಾಡದಿದ್ದರೇ, ನಿಮ್ಮ ಪ್ಯಾನ್​ ಕಾರ್ಡ್​ ಇದ್ದೂ ಇಲ್ಲದಂತಾಗುತ್ತದೆ. ಅಂದರೆ ಅದನ್ನು ತೆರಿಗೆ ಇಲಾಖೆ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಈಗಾಗಲೇ ಸರ್ಕಾರ ಹಲವು ಬಾರಿ ಪ್ಯಾನ್​ ಕಾರ್ಡ್​ಗೆ ಆಧಾರ್​ ಲಿಂಕ್ ಮಾಡುವ ಗಡುವನ್ನು ನೀಡಿ ವಿಸ್ತರಿಸುತ್ತಾ ಬಂದಿದೆ. ಮಾರ್ಚ್ 31 ಕೊನೆ ಎಂದು ಹೇಳಿದೆ. ಅಷ್ಟರ ಒಳಗಾಗಿ ಲಿಂಕಿಂಗ್ ಪ್ರಕ್ರಿಯೆಯನ್ನು ಮಾಡಿಕೊಳ್ಳಬೇಕಾಗಿದೆ.

    ಪ್ಯಾನ್​ ಕಾರ್ಡ್​ಗೆ ಆಧಾರ್ ಲಿಂಕ್ ಮಾಡುವುದು ಬಹಳ ಸುಲಭ: https://www.incometaxindiaefiling.gov.in/home ವೆಬ್​ಸೈಟಿಗೆ ಹೋಗಿ Link Aadhaar ಮೇಲೆ ಕ್ಲಿಕ್ ಮಾಡಿದರೇ ಅಲ್ಲಿನ ಕೆಲವು ಸುಲಭವಾದ ಪ್ರಕ್ರಿಯೆಗಳನ್ನು ಮುಗಿಸಿದರೆ ನಿಮ್ಮ ಪ್ಯಾನ್​ ಕಾರ್ಡ್​ ಆಧಾರ್​ಗೆ ಲಿಂಕ್ ಆಗುತ್ತದೆ. ಅಲ್ಲದೇ ಎಸ್​ಎಂಎಸ್ ಮೂಲಕವೂ ಪ್ಯಾನ್​ ಕಾರ್ಡ್​​ನ್ನು ಲಿಂಕ್ ಮಾಡಬಹುದು. ಈ ಪಾರ್ಮಾಟ್​​ನಲ್ಲಿ UIDPAN (12-digit Aadhaar number) (10-digit PAN) and send it to 567678 or 56161. ತೆರಿಗೆ ಇಲಾಖೆ ಕಚೇರಿಗೆ ಹೋಗಿಯೂ ನೀವು ಸಂಬಂಧಿಸಿದ ಅರ್ಜಿ ತುಂಬಿ ಕೊಡುವ ಮೂಲಕವೂ ಪ್ಯಾನ್​ಗೆ ಆಧಾರ್ ಲಿಂಕ್ ಮಾಡಬಹುದು.

    18 ಕೋಟಿಗೂ ಅಧಿಕ ಪ್ಯಾನ್ ಕಾರ್ಡ್​ಗಳು ಅನೂರ್ಜಿತಗೊಳ್ಳಲಿವೆ!

    ಪ್ಯಾನ್‌ ಕಾರ್ಡ್‌ಗೆ ಕನ್ನ ಹಾಕಿ ಐದು ಲಕ್ಷ ವಂಚನೆ! ಟೆಕ್ಕಿ ಕಕ್ಕಾಬಿಕ್ಕಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts