More

    ಸಂಕಷ್ಟದಲ್ಲೂ ಸಾಲ ಡಿಸಿಸಿ ಬ್ಯಾಂಕ್ ನೀಡಲು ಸಿದ್ಧ ; ನಿರ್ದೇಶಕ ವೆಂಕಟಶಿವಾರೆಡ್ಡಿ ಹೇಳಿಕೆ

    ಬಾಗೇಪಲ್ಲಿ : ಡಿಸಿಸಿ ಬ್ಯಾಂಕ್ 100 ಕೋಟಿ ರೂ. ಸಾಲ ನೀಡಲು ಸಿದ್ಧವಿದೆ, ರೈತರು, ಮಹಿಳಾ ಸ್ವಹಾಯ ಸಂಘಗಳು ಈ ಸೌಲಭ್ಯ ಸದುಪಯೋಗಪಡಿಸಿಕೊಂಡು ಅಭಿವೃದ್ಧಿ ಹೊಂದಬೇಕೆಂದು ಬ್ಯಾಂಕ್ ನಿರ್ದೇಶಕ ವಿ.ವೆಂಕಟಶಿವಾರೆಡ್ಡಿ ತಿಳಿಸಿದರು.

    ಪಟ್ಟಣದ ಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ಸೋಮವಾರ ಯಲ್ಲಂಪಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರ ಸಂಘದ ಮಹಿಳಾ ಸ್ವಹಾಯ ಸಂಘಗಳಿಗೆ 1.5 ಕೋಟಿ ರೂ. ಸಾಲದ ಚೆಕ್ ವಿತರಿಸಿ ಮಾತನಾಡಿ, ಕರೊನಾ ಸಂಕಷ್ಟದ ನಡುವೆಯೂ ಸ್ವಸಹಾಯ ಸಂಘಗಳು ಮತ್ತು ರೈತರಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಸಕಾಲಕ್ಕೆ ಸಾಲ ವಿತರಣೆ ಮಾಡಲಾಗುತ್ತಿದೆ. ಪಡೆದ ಸಾಲವನ್ನು ಹೈನುಗಾರಿಕೆ, ಕುರಿ ಸಾಕಾಣಿಕೆ ಅಥವಾ ಇನ್ನಿತರ ಉದ್ದೇಶಗಳಿಗೆ ಬಳಿಸಿಕೊಳ್ಳಬೇಕೆ ಹೊರತು ದುರುಪಯೋಗ ಆಗಬಾರದು ಎಂಬ ಎಚ್ಚರಿಕೆ ನೀಡಿದರು.

    ಸಕಾಲಕ್ಕೆ ಸಾಲ ಮರು ಪಾವತಿ ಮಾಡುವ ಮೂಲಕ ಉಳಿದವರಿಗೂ ಸೌಲಭ್ಯ ಸಿಗುವಂತಾಗಲು ಸಹಕರಿಸುವಂತೆ ತಿಳಿಸಿದ ವೆಂಕಟಶಿವಾರೆಡ್ಡಿ ಕಾನೂನು ಚೌಕಟ್ಟಿನಲ್ಲಿ ಯಾವುದೇ ಉದ್ದೇಶಕ್ಕೆ ಬೇಕಾದರೂ ಬ್ಯಾಂಕ್‌ನಿಂದ ಸಾಲ ನೀಡಲು ಸಿದ್ಧರಿದ್ದೇವೆ ಎಂದು ತಿಳಿಸಿದರು.

    ಯಲ್ಲಂಪಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರ ಸಂಘದ 34 ಸೀಶಕ್ತಿ ಸಂಘಗಳ ಸದಸ್ಯರಿಗೆ 1.50 ಕೋಟಿ ರೂ. ಸಾಲ ನೀಡಲಾಗಿದ ಎಂದು ಶಾಖೆ ವ್ಯವಸ್ಥಾಪಕ ಚೇತನ್ ಕುಮಾರ್ ತಿಳಿಸಿದರು. ಯಲ್ಲಂಪಲ್ಲಿ ವಿಎಸ್‌ಎಸ್‌ಎನ್ ಅಧ್ಯಕ್ಷ ಎ.ಕೃಷ್ಣಪ್ಪ, ಉಪಾಧ್ಯಕ್ಷ ನಾರಾಯಣರೆಡ್ಡಿ, ನಿರ್ದೇಶಕರಾದ ಸೂರ್ಯನಾರಾಯಣರೆಡ್ಡಿ, ನಾರಾಯಣಮ್ಮ, ಬಿ.ವಿ.ನಾಗರಾಜು, ಎಚ್.ತಿಪ್ಪಣ್ಣ, ಚಿನ್ನಪ್ಪಯ್ಯ, ಚಿಕ್ಕಮುನಿಸ್ವಾಮಿ, ಮುನಿಸ್ವಾಮಿ, ಮಂಜುನಾಥ, ಬೈಯ್ಯಮ್ಮ, ಕದಿರಪ್ಪ ಹಾಗೂ ಕಾರ್ಯನಿರ್ವಣಾಧಿಕಾರಿ ಬಿ.ಎನ್.ಮುನೇಂದ್ರಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts