More

    ಖಾಸಗಿ ಸ್ಕ್ಯಾನಿಂಗ್​ ಸೆಂಟರ್​ಗೆ ಡಿಸಿ ಭೇಟಿ, ಪರಿಶೀಲನೆ

    ಕೋಲಾರ: ನಗರದಲ್ಲಿ ಖಾಸಗಿ ಸ್ಕ್ಯಾನಿಂಗ್​ ಸೆಂಟರ್​ಗಳಿಗೆ ಜಿಲ್ಲಾಧಿಕಾರಿ ಅಕ್ರಂ ಪಾಷಾ ಗುರುವಾರ ದಿಢೀರನೆ ಭೇಟಿ ಪರಿಶೀಲಿಸಿದರು.

    ಸ್ಕ್ಯಾನಿಂಗ್​ ಸೆಂಟರ್​ಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಅಕ್ರಂ ಪಾಷ, ನೋಂದಣಿ ಪುಸ್ತಕ ವೀಸಿದರು, ಆನಂರತರ ಸ್ಕ್ಯಾನಿಂಗ್​ ಮಾಡಲಾಗಿರುವ ವರದಿ ಕುರಿತು ವೈದ್ಯರಿಂದ ಮಾಹಿತಿ ಪಡೆದುಕೊಂಡು, ನಿಯಮಗಳನ್ನು ಉಲ್ಲಂಘಿಸಿರುವ ಪ್ರಕರಣಗಳು ಕಂಡು ಬಂದರೆ ಕ್ರಮಕೈಗೊಳ್ಳಲಾಗುವುದು ಎಂದು ಡಿಸಿ ಎಚ್ಚರಿಕೆ ನೀಡಿದರು.
    ಭ್ರೂಣ ಲಿಂಗ ಪತ್ತೆ ಮಾಡುವುದು ಅಪರಾಧ, ಇಂತಹ ಪ್ರಕರಣಗಳು ರಾಜ್ಯದ ಕೆಲ ಕಡೆ ವರದಿಯಾಗಿವೆ. ಜಿಲ್ಲೆಯಲ್ಲಿ ಸೂಕ್ಷ್ಮತೆಯಿಂದ ಸ್ಕ್ಯಾನಿಂಗ್​ ಸೆಂಟರ್​ಗಳು ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
    ಅಪ್ರಪ್ತ ವಯಸ್ಸಿನ ಗರ್ಭಿಣಿಯರು ಸ್ಕ್ಯಾನಿಂಗ್​ಗಾಗಿ ಸೆಂಟರ್​ಗೆ ಬಂದರೆ ಕೂಡಲೇ ಆರೋಗ್ಯ ಇಲಾಖೆ ಮತ್ತು ತಮಗೆ ಮಾಹಿತಿ ನೀಡಬೇಕು, ಲಿಂಗ ಪತ್ತೆ ಮಾಡಿಕೊಡಿ ಎಂದು ಸಾರ್ವಜನಿಕರು ಒತ್ತಾಯಿಸಿದರು ವೈದ್ಯರು ಸಹಕರಿಸಬಾರದು ಎಂದು ಹೇಳಿದರು.
    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್​, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಚಂದನ್​ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts