More

    ಜಿಲ್ಲಾಡಳಿತಕ್ಕೆ ಸೋಂಕಿತರೇ ತಲೆನೋವು ; ಹಳ್ಳಿಗಳಿಗೆ ವಾಪಸಾದ ವಲಸಿಗರು

    ತುಮಕೂರು : ಬೆಂಗಳೂರು ಸೇರಿ ರಾಜ್ಯದ ವಿವಿಧ ಭಾಗದಲ್ಲಿ ಉದ್ಯೋಗಕ್ಕಾಗಿ ನೆಲೆಸಿ, ಕರೊನಾ ಕಾರಣಕ್ಕೆ ಜಿಲ್ಲೆಗೆ 40 ಸಾವಿರಕ್ಕೂ ಹೆಚ್ಚು ಜನರು ವಾಪಸಾಗಿದ್ದಾರೆ. ಇದೀಗ ಹಳ್ಳಿಗಳೂ ಹಾಟ್‌ಸ್ಪಾಟ್‌ಗಳಾಗಿವೆ.

    ಜಿಲ್ಲೆಯ 136 ಗ್ರಾಪಂ ವ್ಯಾಪ್ತಿಯಲ್ಲಿ ಕನಿಷ್ಠ 20ಕ್ಕೂ ಹೆಚ್ಚು ಜನರಿಗೆ ಸೋಂಕು ದೃಢವಾಗಿದ್ದು ಬಹುತೇಕರು ಎಂದಿನ ಉದಾಸೀನತೆ ತೋರುತ್ತಿರುವುದು ಜಿಲ್ಲಾಡಳಿತಕ್ಕೆ ತಲೆನೋವು ತಂದಿದೆ. ಸೋಂಕಿತರು ಎಷ್ಟೇ ಆರೋಗ್ಯವಾಗಿದ್ದರೂ ಪರೀಕ್ಷೆ ಮಾಡಿಕೊಂಡು ಕ್ವಾರಂಟೈನ್ ಆಗುವುದು ಸೋಂಕಿನ ಕೊಂಡಿ ಕತ್ತರಿಸಲು ಸಾಧ್ಯವಾಗಲಿದೆ.

    ತುಮಕೂರು, ಗುಬ್ಬಿ, ಶಿರಾ ತಾಲೂಕಿನ ಬಹುತೇಕ ಗ್ರಾಪಂಗಳಲ್ಲಿ ಸೋಂಕು ಹೆಚ್ಚಾಗಿದೆ. ಗ್ರಾಪಂ ಮಟ್ಟದ ಟಾಸ್‌‌ಕೆೆರ್ಸ್ ನಾಮ್‌ಕೇವಾಸ್ತೆಗೆ ರಚನೆಯಾಗಿದ್ದು ಗ್ರಾಮಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿಲ್ಲ ಎಂದು ದೂರಿದೆ. ಸೀಮಿತ ಸಂಖ್ಯೆಯಲ್ಲಿರುವ ಪೊಲೀಸರಿಂದ ಹಳ್ಳಿಗಳಲ್ಲಿ ಜನತಾಕರ್ಯ್ೂ ಕಟ್ಟುನಿಟ್ಟಿನ ಜಾರಿ ಅಸಾಧ್ಯವಾಗಿದ್ದು ಜನರೇ ಎಚ್ಚೆತ್ತುಕೊಂಡರಷ್ಟೇ ಜನರು ಭವಿಷ್ಯದ ಅಪಾಯದಿಂದ ತಪ್ಪಿಸಿಕೊಳ್ಳಲು ಸಾಧ್ಯ.

    ಜಿಲ್ಲಾಡಳಿತ ೋಷಿಸಿರುವ 136 ಗ್ರಾಪಂಗಳ ಜತೆಗೆ ಚಿಕ್ಕನಾಯಕನಹಳ್ಳಿ ತಾಲೂಕಿನ ತೀರ್ಥಪುರ, ಕುಣಿಗಲ್ ತಾಲೂಕು ಬೇಗೂರು, ಪಾವಗಡ ತಾಲೂಕಿನ ನಲಿಗಾನಹಳ್ಳಿ ಹಾಗೂ ತಿಪಟೂರು ತಾಲೂಕಿನ ಬಳವನೇರಳು, ಹಿಡಿಸ್ಕೆರೆ, ಮತ್ತಿಹಳ್ಳಿ ಗ್ರಾಪಂಗಳ ವ್ಯಾಪ್ತಿಯ ಗ್ರಾಮಗಳಲ್ಲಿಯೂ ಸೋಂಕು ಜಾಸ್ತಿಯಾಗುತ್ತಿದ್ದು ಜನರು ಮತ್ತಷ್ಟು ಎಚ್ಚರವಾಗಿರಬೇಕಿದೆ.

    ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರಿನಲ್ಲಿ 34, ಹೋಯ್ಸಳಕಟ್ಟೆಯಲ್ಲಿ 17, ಹಂದನಕೆರೆಯಲ್ಲಿ 20, ಕಂದಿಕೆರೆಯಲ್ಲಿ 32, ಶಟ್ಟಿಕೆರೆಯಲ್ಲಿ 24, ಮುದ್ದೇನಹಳ್ಳಿಯಲ್ಲಿ 26, ತೀರ್ಥಪುರದಲ್ಲಿ 25, ಜೆ.ಸಿ.ಪುರದಲ್ಲಿ 24 ಸಕ್ರಿಯ ಪ್ರಕರಣಗಳಿದ್ದು ಸೋಂಕು ಮತ್ತಷ್ಟು ಹೆಚ್ಚಾಗುವ ಆತಂಕ ಮುಂದುವರಿದಿದೆ.

    ಗುಬ್ಬಿ ತಾಲೂಕಿನ ಹಾಗಲವಾಡಿ 26, ಮಂಚಲದೊರೆ 30, ಹೊಸ್ಕೆರೆ 43, ಚೇಳೂರು 55, ಬಿದರೆ 30, ಎಂ.ಎನ್.ಕೋಟೆ 53, ದೊಡ್ಡಗುಣಿ 41, ಮಾರಶೆಟ್ಟಿಹಳ್ಳಿ 94, ನಿಟ್ಟೂರು 49, ಅಮ್ಮಸಂದ್ರ 38, ಎಂ.ಎಚ್.ಪಟ್ಟಣ 37, ಹೆರೂರು 53, ಕಡಬ 33, ಎಸ್.ಕೊಡುಗೆಹಳ್ಳಿ 23, ಪೆದ್ದನಹಳ್ಳಿಯಲ್ಲಿ 22 ಸಕ್ರಿಯ ಪ್ರಕರಣಗಳಿವೆ.
    ಶಿರಾ ತಾಲೂಕಿನ 36 ಗ್ರಾಪಂಗಳ ಪೈಕಿ 32ಗ್ರಾಪಂಗಳಲ್ಲಿ ಸೋಂಕು ಉಲ್ಭಣವಾಗಿದ್ದು ಗ್ರಾಮೀಣ ಭಾಗದಲ್ಲಿ ವ್ಯಾಪಕವಾಗಿದೆ, ಪಾವಗಡದಲ್ಲಿ 33ರ ಪೈಕಿ 8 ಗ್ರಾಪಂ ಕ್ವಾರಂಟೈನ್ ವಲಯ ಎಂದು ೋಷಿಸಲಾಗಿದೆ, ಮಧುಗಿರಿಯಲ್ಲಿ 11, ಕುಣಿಗಲ್ 9, ಕೊರಟಗೆರೆ ತಾಲೂಕಿನಲ್ಲಿ 16 ಗ್ರಾಪಂ, ತುಮಕೂರು ತಾಲೂಕು 23 ಗ್ರಾಪಂಗಳಲ್ಲಿ ಸೋಂಕು ನಿಯಂತ್ರಿಸುವ ಅತ್ಯಗತ್ಯವಿದೆ.

    40 ಸಾವಿರ ವಲಸಿಗರು ವಾಪಸ್ : ಜಿಲ್ಲೆಯ ಬಹುತೇಕ ಭಾಗದ ಜನರು ಬೆಂಗಳೂರಿನಲ್ಲಿ ನೆಲೆ ಕಂಡುಕೊಂಡಿದ್ದು ಕರೊನಾ ಜನತಾಕರ್ಯ್ೂ ಹಿನ್ನೆಲೆಯಲ್ಲಿ ಸ್ವಗ್ರಾಮಗಳಿಗೆ ವಾಪಸಾಗಿದ್ದು ಹಳ್ಳಿಗಳಲ್ಲಿ ಸೋಂಕು ತೀವ್ರವಾಗಲು ಕಾರಣವಾಗಿದೆ. 40 ಸಾವಿರಕ್ಕೂ ಹೆಚ್ಚು ಜನರು ಜಿಲ್ಲೆಗೆ ವಾಪಸಾಗಿದ್ದಾರೆ ಎಂದು ಜಿಲ್ಲಾಡಳಿತಕ್ಕೆ ಅಂದಾಜು ಲೆಕ್ಕಿಸಿದೆ.
    ಇವರೆಲ್ಲರೂ ಸೋಂಕು ಹೊತ್ತುತರದಿದ್ದರೂ ಕೆಲವರು ರೋಗ ಲಕ್ಷಣ ಕಾಣಿಸಿಕೊಂಡ ನಂತರ ಗ್ರಾಮಕ್ಕೆ ವಾಪಸಾಗಿದ್ದು ಸೋಂಕು ಹರಡಲು ಕಾರಣವಾಗಿದೆ, ಹಳ್ಳಿಗರು ಕೂಡ ನಗರಗಳ ಜತೆ ನಿರಂತರ ಸಂಪರ್ಕ ಇಟ್ಟುಕೊಂಡಿರುವುದು ಸೋಂಕು ಪಸರಿಸಲು ಕಾರಣವಾಗಿದೆ, ಹಳ್ಳಿಗಳಲ್ಲಿ ನಮಗೆಲ್ಲಿ ಸೋಂಕು ಬರುತ್ತೆ ಎಂಬ ಉದಾಸೀನತೆಯಿದ್ದು ಬಹುತೇಕರು ಲಕ್ಷಣಗಳಿದ್ದರೂ ಪರೀಕ್ಷೆಗೆ ಹಿಂದೇಟು ಹಾಕುತ್ತಿರುವುದು ಜಿಲ್ಲಾಡಳಿತಕ್ಕೆ ತಲೆನೋವು ತಂದಿದೆ.

    ಸೋಂಕು ಕಾಣಿಸಿಕೊಂಡ ಗ್ರಾಮಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ, ಸ್ಥಳೀಯವಾಗಿ ಟಾಸ್‌‌ಕೆೆರ್ಸ್ ರಚಿಸಿದ್ದು ನಿಗಾವಹಿಸಿದೆ, ಹಳ್ಳಿಗಳಲ್ಲಿ ರೋಗ ಲಕ್ಷಣ ಕಾಣಿಸಿಕೊಂಡವರು ಭಯಬೀಳದೆ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಬೇಕು. ಮನೆಯಲ್ಲಿ ಕ್ವಾರಂಟೈನ್ ಆಗದೆ ಕೋವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯಬೇಕು.
    ಜೆ.ಸಿ.ಮಾಧುಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts