More

    ದಾವೂದ್​​ ನಂಟು, ನಕಲಿ ನೋಟು ದಂಧೆಗೆ ಶ್ರೀರಕ್ಷೆ! ಮಾಜಿ ಸಿಎಂ ವಿರುದ್ಧ ನವಾಬ್​ ಮಲಿಕ್​ ಆರೋಪ

    ಮುಂಬೈ: ಬಿಜೆಪಿ ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್​ ಅವರಿಗೆ ಡಾನ್​ ದಾವೂದ್​ ಇಬ್ರಾಹಿಂನೊಂದಿಗೆ ನಂಟಿತ್ತು. ದಾವೂದ್​ ಭಂಟನಾದ ರಿಯಾಜ್​ ಭಾಟಿಯೊಂದಿಗೆ ಹಣ ವಸೂಲಿ ದಂಧೆ ನಡೆಸುತ್ತಿದ್ದರು ಎಂದು ಎನ್​​ಸಿಪಿ ನಾಯಕ ಹಾಗೂ ರಾಜ್ಯದ ಹಾಲಿ ಸಚಿವ ನವಾಬ್​ ಮಲಿಕ್​ ಆರೋಪಿಸಿದ್ದಾರೆ.

    ಇಂದು ಬೆಳಿಗ್ಗೆ ಮುಂಬೈನಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ ಮಲಿಕ್​​, ಫಡ್ನವಿಸ್​ರ ಸತ್ಯವನ್ನು ಬಹಿರಂಗಪಡಿಸುವ ತಮ್ಮ ‘ಹೈಡ್ರೋಜನ್​ ಬಾಂಬ್​’ ಸಿಡಿಸಿದ್ದು ಹೀಗೆ. ಫಡ್ನವಿಸ್​ ಮುಖ್ಯಮಂತ್ರಿಯಾಗಿದ್ದ ವೇಳೆ ಅನುಮಾನಾಸ್ಪದ ಪಾಕಿಸ್ತಾನಿ ನಂಟುಗಳುಳ್ಳ ಜನರಿಗೆ ಸರ್ಕಾರದಲ್ಲಿ ಪ್ರಮುಖ ಹುದ್ದೆಗಳನ್ನು ನೀಡಿದ್ದರು ಎಂದು ಆರೋಪಿಸಿದರು.

    ಇದನ್ನೂ ಓದಿ: ಜೈಲಿಂದ ಹೊರ ಬಂದ ಶ್ರೀಕಿ: ಬಿಟ್​ ಕಾಯಿನ್​ ಪ್ರಕರಣವೇ ಬೋಗಸ್, ಪೊಲೀಸರು ಹೇಳುತ್ತಿರುವುದು ಸುಳ್ಳು…

    ಮಹಾರಾಷ್ಟ್ರದಲ್ಲಿ ನಕಲಿ ನೋಟುಗಳ ದಂಧೆಗಳು ಆರಂಭವಾಗಲು ಕಾರಣ ಫಡ್ನವಿಸ್​; ನೋಟು ಅಮಾನ್ಯೀಕರಣದ ನಂತರ ಒಂದು ವರ್ಷದ ಕಾಲ ರಾಜ್ಯದಲ್ಲಿ ಯಾವುದೇ ಕೇಸುಗಳನ್ನು ದಾಖಲಿಸದೆ ಅನುಕೂಲ ಮಾಡಿಕೊಟ್ಟಿದ್ದರು. ಹಲವು ಕ್ರಿಮಿನಲ್​​ಗಳನ್ನು ಉಳಿಸಲು ಆಗ ಡಿಆರ್​ಐ ಅಧಿಕಾರಿಯಾಗಿದ್ದ ಈಗಿನ ಎನ್​ಸಿಬಿ ಅಧಿಕಾರಿ ಸಮೀರ್​ ವಾಂಖೆಡೆ ಸಹಾಯ ಪಡೆದಿದ್ದರು ಎಂದು ಮಲಿಕ್​ ಆರೋಪಿಸಿದರು.

    ಸಚಿವ ಮಲಿಕ್​ರ ಈ ಆರೋಪಗಳು ನಿನ್ನೆಯ ಫಡ್ನವಿಸ್​ ಅವರ ಆರೋಪಗಳಿಗೆ ಉತ್ತರವಾಗಿ ಬಂದಿವೆ. ಮಲಿಕ್​​ಗೆ 1993ರ ಮುಂಬೈ ಬಾಂಬ್​ ಸ್ಫೋಟ ಪ್ರಕರಣದ ಅಪರಾಧಿಗಳೊಂದಿಗೆ ಬಿಸಿನೆಸ್​ ವ್ಯವಹಾರಗಳಿವೆ ಎಂದು ಫಡ್ನವಿಸ್​ ಆರೋಪಿಸಿದ್ದರು. ಇಂದಿನ ಮಲಿಕ್​​ ಹೇಳಿಕೆಗಳಿಗೆ ಪ್ರತಿಕ್ರಿಯಿಸಿರುವ ಫಡ್ನವಿಸ್​, ಇದು ಬಾಂಬ್​ ಇರಲಿ, ಒಂದು ಸುರುಸುರುಬತ್ತಿಯೂ ಅಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

    ಪೊಲೀಸ್​ ಠಾಣೆಯಲ್ಲಿ ಸಾವಪ್ಪಿದ ಯುವಕ; ‘ನಿರ್ಲಕ್ಷ್ಯ’ಕ್ಕಾಗಿ ಐವರು ಸಸ್ಪೆಂಡ್​

    ಒಂಟಿ ಮನೆಯಲ್ಲಿ ಗುಂಡಿ ತೋಡಿ ಪೂಜೆ; ವಾಮಾಚಾರ ನಡೆಸುತ್ತಿದ್ದ 12 ಜನರ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts