More

    ಯೋಗ- ಶಿವಯೋಗದಲ್ಲಿದೆ ಅಂತರಂಗ ಶುದ್ಧಿ

    ಹೊನ್ನಾಳಿ: ಯೋಗ ಪ್ರತಿಯೊಬ್ಬರ ಆರೋಗ್ಯಕ್ಕೆ ಸಂಜೀವಿನಿ. ಆದ್ದರಿಂದ ಜೀವನದಲ್ಲಿ ಯೋಗಾಭ್ಯಾಸ ನಿರಂತರವಾಗಿರಲಿ ಎಂದು ಪತಂಜಲಿ ತಾಲೂಕು ಸಂಚಾಲಕ ಪ್ರಕಾಶ್ ಹೆಬ್ಬಾರ್ ತಿಳಿಸಿದರು.

    ತಾಲೂಕು ಪತಂಜಲಿ ಯೋಗ ಸಮಿತಿ ಹಾಗೂ ಭಾರತೀಯ ವಿದ್ಯಾಸಂಸ್ಥೆ ಸಹಯೋಗದಲ್ಲಿ ಮಂಗಳವಾರ ನಡೆದ ಜಾಗೃತಿ ಜಾಥಾದಲ್ಲಿ ಮಾತನಾಡಿದರು.

    ಉತ್ತಮ ಆರೋಗ್ಯಕ್ಕಾಗಿ ಹೊನ್ನಾಳಿಯಲ್ಲಿ ನಿರಂತರವಾಗಿ ಯೋಗ ತರಗತಿ ನಡೆಯುತ್ತಿವೆ. ಇದರ ಸದುಪಯೋಗ ಎಲ್ಲರೂ ಪಡೆದುಕೊಳ್ಳಬೇಕು ಎಂದು ಹೇಳಿದರು.

    ಪತಂಜಲಿ ಯೋಗ ಸಂಸ್ಥೆ ಸಂಚಾಲಕ ರುದ್ರೇಶ್ ಮಾತನಾಡಿ, ನಿತ್ಯ ಯೋಗ, ಪ್ರಾಣಾಯಮ ಮಾಡುವುದರಿಂದ ದೇಹ ಸದೃಢವಾಗಿರಲು ಸಾಧ್ಯವೆಂದರು.

    ಹೊನ್ನಾಳಿ ರಾಜಬೀದಿಗಳಲ್ಲಿ ಯೋಗದ ಮಹತ್ವ ಸಾರುವ ನಾಮಫಲಕ ಹಿಡಿದು ವಿದ್ಯಾರ್ಥಿಗಳು ಜಾಗೃತಿ ಜಾಥಾ ನಡೆಸಿದರು.

    ಪತಂಜಲಿ ಯೋಗ ಸಮಿತಿಯ ರಾಘವೇಂದ್ರ, ಸುರೇಶಕುಮಾರ್, ಅಂಬರೀಶ್, ಸುರೇಶ್ ಕುಂಬಾರ್, ಅಂಬಿಕಾ ಹೆಬ್ಬಾರ್, ಸುಜಾತ ಬೆನ್ನೂರುಮಠ, ಮುಖ್ಯಶಿಕ್ಷಕರಾದ ತಿಮ್ಮೇಶ್, ಶಿವಲಿಂಗಪ್ಪ, ರವಿ, ಸತೀಶ್, ಅನುಷಾ, ಮಂಜುನಾಥ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts