More

    ಹೋಟೆಲ್ ಮಾಲೀಕರ ಸಹಕಾರ ಕೋರಿದ ಡಿಸಿ

    ದಾವಣಗೆರೆ: ಕರೊನಾ ಸೋಂಕು ನಿಯಂತ್ರಣ ಸಂದರ್ಭದಲ್ಲಿ ಜಿಲ್ಲೆಯ ಹೋಟೆಲ್ ಮಾಲೀಕರು ಬಹಳ ಸಹಕಾರ ನೀಡಿದ್ದೀರಿ. ಮಾನವೀಯತೆ ಮೆರೆಯುವ ಮೂಲಕ ನಮ್ಮೊಂದಿಗೆ ಕೈಜೋಡಿಸಿದ್ದೀರಿ. ಆದರೆ ಕೆಲವೆಡೆ ನಿರೀಕ್ಷಿತ ಮಟ್ಟದಲ್ಲಿ ಸಹಕಾರ ದೊರೆಯುತ್ತಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

    ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಸೋಮವಾರ, ಜಿಲ್ಲೆಯ ಎಲ್ಲ ಹೋಟೆಲ್ ಹಾಗೂ ಲಾಡ್ಜ್ ಮಾಲೀಕರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿ, ಇನ್ನು ಮುಂದೆಯೂ ಹೆಚ್ಚಿನ ಸಹಕಾರ ನೀಡಬೇಕು. ಮುಂದಿನ 14 ದಿನಗಳು ಬಹಳ ಗಂಭೀರವಾಗಿವೆ ಎಂದರು.

    ಕರೊನಾ ಹಾಗೂ ಎಸಿ ಒಂದಕ್ಕೊಂದು ಹೊಂದಾಣಿಕೆಯಾಗುವುದಿಲ್ಲ. ಹಾಗಾಗಿ ಎಸಿ ರೂಮ್‌ಗಳ ಬಳಕೆ ಬೇಡ. ಸಂದರ್ಭ ಬಂದರೆ ಎಸಿ ಕಡಿತಗೊಳಿಸಿ ಕೊಠಡಿ ಬಳಕೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.

    ಲಾಡ್ಜ್ ಹಾಗೂ ಹೋಟೆಲ್‌ಗಳಲ್ಲಿ ನೀರಿನ ವ್ಯವಸ್ಥೆ, ವಿದ್ಯುತ್ ಸೇರಿದಂತೆ ಯಾವುದೇ ರೀತಿಯ ತೊಂದರೆಯಾದರೆ ಕೂಡಲೇ ಸರಿಪಡಿಸಿಕೊಳ್ಳಬೇಕು. ಯಾವುದೇ ವ್ಯತ್ಯಯ ಆಗದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.

    ಕರೊನಾ ಸೋಂಕು ನಿಯಂತ್ರಣ ಯುದ್ಧವಿದ್ದಂತೆ. ಇಂತಹ ತುರ್ತು ಪರಿಸ್ಥಿತಿಯನ್ನು ಎದುರಿಸಲು ಜಿಲ್ಲೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವೈಯಕ್ತಿಕ ಜೀವನ ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದಾರೆ. ಹಸಿರು ವಲಯ ಘೋಷಣೆ ಮಾಡುವಷ್ಟರಲ್ಲಿ ಕರೊನಾ ಪಾಸಿಟಿವ್ 2 ಪ್ರಕರಣಗಳು ಕಂಡುಬಂದವು. ಅವುಗಳಿಗೆ ಸಂಬಂಧಿಸಿದಂತೆ 21 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇನ್ನೂ ಸುಮಾರು 290 ಮಾದರಿಗಳ ವರದಿ ಬಾಕಿ ಇದೆ. ಪಾಸಿಟಿವ್ ಪ್ರಕರಣಕ್ಕೆ ಸಂಬಂಧಪಟ್ಟವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಮಾಹಿತಿ ನೀಡಿದರು.

    ಜಿಲ್ಲಾ ಹೋಟೆಲ್ ಸಂಘದ ಅಧ್ಯಕ್ಷ ಅಣಬೇರು ನಾಗರಾಜ ಮಾತನಾಡಿ, ಲಾಡ್ಜ್ ಹಾಗೂ ಹೋಟೆಲ್‌ಗಳಲ್ಲಿ ಕೆಲಸಗಾರರಿಲ್ಲ. ಹಾಗಾಗಿ ತರಬೇತಿ ಹೊಂದಿದವರನ್ನು ಹಾಗೂ ಪೊಲೀಸ್ ಸಿಬ್ಬಂದಿಯನ್ನು ನೇಮಿಸಬೇಕು. ಲಾಡ್ಜ್ ಹಾಗೂ ಹೋಟೆಲ್‌ಗಳಿಗೆ ತೆರಳಲು ಮಾಲೀಕರಿಗೆ ಪಾಸ್ ವ್ಯವಸ್ಥೆ ಮಾಡಿಸಬೇಕು ಎಂದು ಆಗ್ರಹಿಸಿದರು. ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts