More

    ಬಂಡವಾಳಶಾಹಿಗಳ ಸಾಲಮನ್ನಾ ಸರಿಯಲ್ಲ

    ದಾವಣಗೆರೆ: ದೇಶಕ್ಕೆ ವಂಚಿಸಿದ ಬಂಡವಾಳಶಾಹಿಗಳ 68,607 ಕೋಟಿ ರೂ. ಸಾಲ ಮನ್ನಾ ಮಾಡಿರುವ ಕೇಂದ್ರ ಸರ್ಕಾರದ ಕ್ರಮ ಸರಿಯಲ್ಲ ಎಂದು ಎಐಟಿಯುಸಿ ಜಿಲ್ಲಾಧ್ಯಕ್ಷ ಎಚ್.ಕೆ.ರಾಮಚಂದ್ರಪ್ಪ ಹೇಳಿದರು. ಭಾರತ ಕಮ್ಯುನಿಸ್ಟ್ ಪಕ್ಷದ ಕಚೇರಿ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ 134ನೇ ವಿಶ್ವ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕರೊನಾ ಮಹಾಮಾರಿ ವಿಶ್ವದ ಎಲ್ಲ ದೇಶಗಳಲ್ಲೂ ಆವರಿಸಿದ್ದು, ಮಾನವ ಕುಲವನ್ನೇ ತಲ್ಲಣಿಸಿದೆ. ಇದರ ವಿರುದ್ಧದ ಹೋರಾಟಕ್ಕೆ ರಾಜ್ಯ ಸರ್ಕಾರಗಳ ಬಳಿ ಹಣವಿಲ್ಲ. ಕೇಂದ್ರ ಸರ್ಕಾರ ಇದಕ್ಕೆ ನೆರವಾಗಿಲ್ಲ ಎಂದು ಆಕ್ಷೇಪಿಸಿದರು.
    ಈವರೆಗಿನ ಸರ್ಕಾರಗಳು ದೇಶದಲ್ಲಿ ರೈತರು, ದುಡಿವ ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರನ್ನು ಎಲ್ಲ ಸೌಲಭ್ಯಗಳು ಹಾಗೂ ಕಾಯ್ದೆಗಳಿಂದ ವಂಚಿತರನ್ನಾಗಿ ಮಾಡಿವೆ. ಅಸಂಘಟಿತ ಶ್ರಮಿಕರಿಗೆ ಸಂವಿಧಾನಬದ್ಧ ಹಕ್ಕುಗಳನ್ನು ನೀಡಲಾಗುತ್ತಿಲ್ಲ.
    ದೇಶದ ಜನರು ಬ್ಯಾಂಕ್‌ನಲ್ಲಿಟ್ಟ ಹಣವನ್ನು ಕೊಳ್ಳೆ ಹೊಡೆದು ತಲೆಮರೆಸಿಕೊಂಡವರು, 50 ಮಂದಿ ಸುಸ್ತಿದಾರರ ಪಟ್ಟಿಯಲ್ಲಿಯುವವರಿಗೆ ಆರ್‌ಬಿಐನಿಂದ ಸಾಲಮನ್ನಾ ಮಾಡಿದ್ದು ನಾಚಿಕೆಗೇಡು. ಅಸಹಿಷ್ಣುತೆಯ ವಿಷಬೀಜ ಬಿತ್ತುವವರಿಗೆ ಒಡೆದಾಳುವ ಶಕ್ತಿಗಳನ್ನು ಬುಡಸಹಿತ ಕಿತ್ತು ಹಾಕಲು ಕಾರ್ಮಿಕರು ಒಂದಾಗಬೇಕು ಎಂದರು.
    ಸಂಘಟನೆ ಕಾರ್ಯದರ್ಶಿ ಆವರಗೆರೆ ಚಂದ್ರು, ಜಿಲ್ಲಾ ಖಜಾಂಚಿ ಆನಂದರಾಜ್, ಉಪಾಧ್ಯಕ್ಷ ಎಚ್.ಜಿ.ಉಮೇಶ್, ಕಾರ್ಯದರ್ಶಿ ಆವರಗೆರೆ ವಾಸು, ಎನ್.ಟಿ.ಬಸವರಾಜ್, ಆಲೆಕಲ್ ಹನುಮಂತಪ್ಪ, ಐರಣಿ ಚಂದ್ರು, ಗದ್ದಿಗೇಶ್, ಎಂ.ಬಿ. ಶಾರದಮ್ಮ, ಸರೋಜಮ್ಮ, ಉಮಾಪತಿ, ಏಳುಕೋಟಿ, ಟಿ.ಎಸ್.ನಾಗರಾಜ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts