More

    ಆಭರಣಗಳ ಪ್ರದರ್ಶನ, ಮಾರಾಟ ಮೇಳ ಉದ್ಘಾಟನೆ

    ದಾವಣಗೆರೆ : ಗೋಲ್ಡನ್ ಕ್ರೀಪರ್ ಸಂಸ್ಥೆಯಿಂದ ಆಯೋಜಿಸಿರುವ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳ ‘ದಿ ಜ್ಯುವೆಲರಿ ಶೋ’ವನ್ನು ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಹಾಗೂ ನಟಿ ಧನ್ಯಾ ರಾಮ್‌ಕುಮಾರ್, ನಗರದ ಎಸ್.ಎಸ್. ಕನ್ವೆನ್‌ಷನ್ ಸೆಂಟರ್‌ನಲ್ಲಿ ಶುಕ್ರವಾರ ಉದ್ಘಾಟಿಸಿದರು.
    ಈ ಸಂದರ್ಭದಲ್ಲಿ ಧನ್ಯಾ ರಾಮ್‌ಕುಮಾರ್ ಮಾತನಾಡಿ, ಮೇಳದಲ್ಲಿ ವಿವಿಧ ಬಗೆಯ ಆಭರಣಗಳನ್ನು ಪ್ರದರ್ಶಿಸಲಾಗಿದ್ದು ದಾವಣಗೆರೆ ಭಾಗದ ಜನರು ಭೇಟಿ ನೀಡಬೇಕು ಎಂದು ಮನವಿ ಮಾಡಿದರು.
    ವರಮಹಾಲಕ್ಷ್ಮೀ ಹಬ್ಬ ಬಂದಿದೆ, ಮದುವೆ ಸಮಾರಂಭಗಳ ಸೀಸನ್ ಹಿನ್ನೆಲೆಯಲ್ಲಿ ಜನರ ಇಷ್ಟದ ಆಭರಣಗಳು ಒಂದೇ ಸೂರಿನಡಿ, ಎಲ್ಲ ವರ್ಗದ ಗ್ರಾಹಕರ ಕೈಗೆಟುಕುವ ಬೆಲೆಗೆ ದೊರೆಯುತ್ತವೆ. ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕೋರಿದರು.
    ಆಭರಣಗಳೆಂದರೆ ನನಗೆ, ನಮ್ಮ ಕುಟುಂಬದವರಿಗೆ ಬಹಳ ಇಷ್ಟ. ‘ದಿ ಜ್ಯುವೆಲರಿ ಶೋ’ನ ರಾಯಭಾರಿಯಾಗಿ ಬಂದಿರುವುದು ನನ್ನ ಅದೃಷ್ಟ ಎಂದರು.
    ಮೂರು ದಿನಗಳ ವರೆಗೆ ಪ್ರತಿ ದಿನ ಬೆಳಗ್ಗೆ 10 ಗಂಟೆಯಿಂದ ರಾತ್ರಿ 8ರ ವರೆಗೆ ನಡೆಯುವ ಈ ಮೇಳದಲ್ಲಿ ದೇಶದ 15 ಅಗ್ರ ಶ್ರೇಣಿಯ ಆಭರಣ ತಯಾರಕರು ಭಾಗವಹಿಸಿದ್ದು 30 ಸಾವಿರಕ್ಕೂ ಹೆಚ್ಚು ವಿನ್ಯಾಸಗಳಿವೆ.
    ಮದುವೆ ಸಮಾರಂಭ ಹಾಗೂ ವರಮಹಾಲಕ್ಷ್ಮೀ ಹಬ್ಬಕ್ಕಾಗಿ ಆಭರಣಗಳನ್ನು ಕೊಳ್ಳಲು ದಾವಣಗೆರೆ ನಗರ ಮತ್ತು ಸುತ್ತಮುತ್ತಲಿನ ನಾಗರಿಕರಿಗೆ ಇದೊಂದು ಉತ್ತಮ ವೇದಿಕೆಯಾಗಿದೆ. ಕುಶಲಕರ್ಮಿಗಳು ತಯಾರಿಸಿದ ವಿಭಿನ್ನ ಶೈಲಿಯ ಆಭರಣಗಳು ಈ ಮೇಳದಲ್ಲಿ ದೊರೆಯಲಿವೆ.
    ಚಿನ್ನದ ಆಭರಣಗಳು ಬಿಐಎಸ್ ಹಾಲ್ ಮಾರ್ಕ್ ಹೊಂದಿವೆ. ವಜ್ರಾಭರಣಗಳು ಅಂತಾರಾಷ್ಟ್ರೀಯ ಗುಣಮಟ್ಟದ ಜಿಐಎ/ಐಜಿಐ ನಿಂದ ಪ್ರಮಾಣಿತಗೊಂಡಿವೆ. ಆಭರಣ ಮಳಿಗೆಗಳ ಸದಸ್ಯರು ಚಿನ್ನಾಭರಣ ಮತ್ತು ವಜ್ರಾಭರಣಗಳ ಬಗ್ಗೆ ಉಚಿತ ಮಾಹಿತಿಯನ್ನು ನೀಡುತ್ತಾರೆ. ಖರೀದಿದಾರರು ಹಳೇ ಚಿನ್ನವನ್ನು ಬದಲಾಯಿಸಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ.
    ಗೋಲ್ಡನ್ ಕ್ರೀಪರ್ ಸಂಸ್ಥೆಯ ಬಿ.ಎನ್. ಜಗದೀಶ ಮತ್ತು ಹೇಮಲತಾ ಜಗದೀಶ್, ಪೂರ್ಣಿಮಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts