More

    ಸ್ಮಾರ್ಟ್‌ಸಿಟಿ ಕಾಮಗಾರಿಗಳ ಶೀಘ್ರ ಲೋಕಾರ್ಪಣೆ

    ದಾವಣಗೆರೆ : ಸ್ಮಾರ್ಟ್‌ಸಿಟಿ ಯೋಜನೆಯಡಿ ಪೂರ್ಣಗೊಂಡ ಕಾಮಗಾರಿಗಳನ್ನು ಆದಷ್ಟು ಶೀಘ್ರವೇ ಲೋಕಾರ್ಪಣೆ ಮಾಡಲು ಸಿದ್ಧತೆ ಕೈಗೊಳ್ಳುವಂತೆ ಸಂಸದ ಜಿ.ಎಂ. ಸಿದ್ದೇಶ್ವರ ಅಧಿಕಾರಿಗಳಿಗೆ ಸೂಚಿಸಿದರು.
     ಸ್ಮಾರ್ಟ್‌ಸಿಟಿ ಕಚೇರಿಯಲ್ಲಿ ಸೋಮವಾರ ನಗರ ಮಟ್ಟದ ಸಲಹಾ ವೇದಿಕೆ ಸಭೆಯಲ್ಲಿ ಮಾತನಾಡಿದರು.
     ಖಾಸಗಿ ಬಸ್ ನಿಲ್ದಾಣವನ್ನು ಸ್ಮಾರ್ಟ್ ಸಿಟಿ ಅಧಿಕಾರಿಗಳು ಮಹಾನಗರ ಪಾಲಿಕೆಗೆ ಹಸ್ತಾಂತರಿಸಿ ಪ್ರಯಾಣಿಕರ ಬಳಕೆಗೆ ಅದನ್ನು ಮುಕ್ತಗೊಳಿಸಬೇಕು ಎಂದು ಸಿದ್ದೇಶ್ವರ ತಿಳಿಸಿದರು.
     ಕೆ.ಎಸ್.ಆರ್.ಟಿ.ಸಿ. ನೂತನ ಬಸ್ ನಿಲ್ದಾಣ ಕಾಮಗಾರಿಯ ಪ್ರಗತಿ ವಿವರ ಪಡೆದುಕೊಂಡ ಅವರು, ಬಸ್‌ಗಳು ಬಂದು ನಿಲ್ಲಲು ಬೇಕಾದ ವ್ಯವಸ್ಥೆ ಆಗಿರುವುದರಿಂದ ಅಷ್ಟನ್ನು ಮಾತ್ರ ಉದ್ಘಾಟಿಸಿ ಉಳಿದ ಕಾಮಗಾರಿಗಳನ್ನು ಮುಂದುವರಿಸಬೇಕು ಎಂದು ಸೂಚನೆ ನೀಡಿದರು.
     ತುಂಗಭದ್ರಾ ನದಿಗೆ ಬ್ಯಾರೇಜ್ ನಿರ್ಮಿಸುವ ಯೋಜನೆ 2022ರ ಜೂನ್‌ಗೆ ಮುಗಿಯಬೇಕಿತ್ತು. 9 ತಿಂಗಳು ವಿಳಂಬವಾಗಿದೆ. ಇದಕ್ಕಾಗಿ ಗುತ್ತಿಗೆದಾರನಿಗೆ ದಂಡ ವಿಧಿಸಿ ಎಂದು ತಾಕೀತು ಮಾಡಿದರು.
     ಸ್ಮಾರ್ಟ್‌ಸಿಟಿ ಲಿಮಿಟೆಡ್ ಯೋಜನೆಯಡಿ ಪೂರ್ಣಗೊಂಡಿರುವ ಕಾಂಕ್ರಿಟ್ ರಸ್ತೆ, ಪಾದಚಾರಿ ಮಾರ್ಗಗಳಲ್ಲಿ ಗ್ಯಾಸ್ ಪೈಪ್‌ಗಳನ್ನು ಅಳವಡಿಸುವ ಕಂಪನಿಯವರು ಗುಂಡಿಗಳನ್ನು ತೆಗೆದಿದ್ದು, ಇದರಿಂದ ಹಾನಿಯಾಗಿದೆ. ಒಂದು ವರ್ಷದ ನಂತರವೂ ಅದನ್ನು ಸರಿಪಡಿಸಿಲ್ಲ ಎಂದು ಸ್ಮಾರ್ಟ್‌ಸಿಟಿ ಲಿಮಿಟೆಡ್ ಕಂಪನಿಯ ಮುಖ್ಯ ಇಂಜಿನಿಯರ್ ಸತೀಶ್ ಸಭೆಗೆ ತಿಳಿಸಿದರು.
     ಇಂಥ ವಿಷಯಗಳನ್ನು ಪಾಲಿಕೆಯ ಇಂಜಿನಿಯರ್ ಗಮನಿಸಬೇಕಾಗುತ್ತದೆ. ಇದು ಅವರ ಬೇಜವಾಬ್ದಾರಿಯನ್ನು ತೋರಿಸುತ್ತದೆ. ಈ ರೀತಿಯಾದರೆ ಇಂಜಿನಿಯರ್‌ಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಸಂಸದ ಸಿದ್ದೇಶ್ವರ ಎಚ್ಚರಿಸಿದರು.
     ಸ್ಮಾರ್ಟ್‌ಸಿಟಿ ಡಿಜಿಎಂ ಮಮತಾ ಮಾತನಾಡಿ, ನಗರದಲ್ಲಿ ಅಡಾಪ್ಟಿವ್ ಟ್ರಾಫಿಕ್ ಕಂಟ್ರೋಲ್ ಸಿಸ್ಟಂ ಜಾರಿಗೆ ತರಲಾಗಿದ್ದು ಇದರ ಪ್ರಕಾರ, ಸಿಗ್ನಲ್‌ಗಳಲ್ಲಿ ವಾಹನಗಳ ದಟ್ಟಣೆ ಆಧಾರದ ಮೇಲೆ ಸಿಗ್ನಲ್ ಸಮಯ ಬದಲಾಗುತ್ತದೆ. ಇದರ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
     ನಗರದಲ್ಲಿ 1.95 ಕೋಟಿ ರೂ. ವೆಚ್ಚದಲ್ಲಿ ಇನ್ನೊಂದು ವಿದ್ಯುತ್ ಚಿತಾಗಾರ ನಿರ್ಮಾಣ ಮಾಡಲಾಗಿದೆ. ಆದರೆ ಮೃತ ದೇಹವನ್ನು ಕಟ್ಟಿಗೆಯಿಂದ ದಹಿಸಿದರೆ ಶ್ರೇಷ್ಠ ಎನ್ನುವ ಭಾವನೆ ಕೆಲವರಲ್ಲಿದೆ ಎಂಬ ವಿಚಾರ ಚರ್ಚೆಗೆ ಬಂದಿತು. ಅವರ ಭಾವನೆಗಳನ್ನು ಗೌರವಿಸುವ ಜತೆಗೆ ಸರಿವು ಮೂಡಿಸಲು ತೀರ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts